ದುಡ್ಡಿಗಾಗಿ ಅನೇಕರು ನಾನಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರಿಗೆ ದರೋಡೆ ಮಾಡುವುದೇ ಕಸುಬಾಗಿರುತ್ತದೆ. ಅದೇರೀತಿ ಬ್ಯಾಂಕ್ ದರೋಡೆಗೆ ಹೋದವ ಕಳ್ಳನೊಬ್ಬನಿಗೆ ಆತನ ಕೈ ಬರಹವೇ (Hand Writing) ಶಾಪವಾಗಿದೆ. ಆತನ ಕೆಟ್ಟ ಹ್ಯಾಂಡ್ ರೈಟಿಂಗ್ನಿಂದಾಗಿ ದರೋಡೆ ಮಾಡಲು ಹೋಗಿ ಬರಿಗೈಯಲ್ಲಿ ವಾಪಾಸಾಗಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ಇಂಗ್ಲೆಂಡ್ನ (United Kingdom) ಈಸ್ಟ್ಬೋರ್ನ್ನಲ್ಲಿ.
ಬ್ಯಾಂಕ್ನಲ್ಲಿ ಗ್ರಾಹಕರು ಇರುವಾಗಲೇ ದರೋಡೆಗೆ ನುಗ್ಗಿದ ಕಳ್ಳ ‘ತಾನು ದರೋಡೆಗೆ ಬಂದಿದ್ದೇನೆ, ನೀವಾಗಿಯೇ ಹಣ ನೀಡಿದರೆ ನಿಮ್ಮ ಗ್ರಾಹಕರಿಗೆ ಏನೂ ತೊಂದರೆ ಮಾಡುವುದಿಲ್ಲ, ನಿಮ್ಮ ಗ್ರಾಹಕರ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ’ ಎಂದು ಚೀಟಿಯಲ್ಲಿ ಬರೆದು ಕ್ಯಾಶಿಯರ್ ಕೈಗೆ ಕೊಟ್ಟಿದ್ದ. ಆದರೆ, ಆತನ ಕೆಟ್ಟ ಕೈಬರಹವನ್ನು ಓದಲಾಗದೆ ಆ ಕ್ಯಾಶಿಯರ್ ಆ ಚೀಟಿಯನ್ನು ನೋಡಿ ಪಕ್ಕದಲ್ಲಿಟ್ಟಿದ್ದಾರೆ. ಆ ಚೀಟಿಯನ್ನು ಏನು ಬರೆದಿದ್ದಾರೆಂದು ಅರ್ಥವಾಗದ ಕಾರಣ ಕ್ಯಾಶಿಯರ್ ದರೋಡೆಕೋರನಿಗೆ ಬಿಡಿಗಾಸು ಹಣವನ್ನೂ ನೀಡಿಲ್ಲ. ಹೀಗಾಗಿ, ದರೋಡೆಕೋರ ಬರಿಗೈಯಲ್ಲಿ ವಾಪಾಸಾಗಿದ್ದಾನೆ.
67 ವರ್ಷದ ಅಲಾನ್ ಸ್ಲಾಟರಿ ಎಂಬಾತ ನಿವೃತ್ತನಾಗಿದ್ದು, ಹೀಗೆ ಬ್ಯಾಂಕ್ನವರನ್ನು ಹೆದರಿಸಿ ದರೋಡೆ ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದ. ಒಂದು ಬ್ಯಾಂಕ್ನಿಂದ ಈ ರೀತಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ ಆತ ಒಟ್ಟು 3 ಬ್ಯಾಂಕ್ಗಳಿಗೆ ಹೋಗಿದ್ದ. ಅದರಲ್ಲಿ ಒಂದು ಬ್ಯಾಂಕ್ನ ಕ್ಯಾಶಿಯರ್ ಆತನ ಕೈಬರಹ ಓದಲಾಗದೆ ವಾಪಾಸ್ ಕಳುಹಿಸಿದ್ದಾರೆ.
ಅದಾದ ಬಹಳ ಹೊತ್ತಿನ ಬಳಿಕ ಆ ಚೀಟಿಯನ್ನು ಬ್ಯಾಂಕ್ನಲ್ಲಿದ್ದ ಬೇರೆಯವರಿಗೂ ತೋರಿಸಿದ ಕ್ಯಾಶಿಯರ್ಗೆ ತನ್ನ ಬಳಿ ಬಂದವನು ದರೋಡೆಕೋರ ಎಂಬ ವಿಷಯ ಬಯಲಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಒಂದು ಬ್ಯಾಂಕ್ ದರೋಡೆ ಮಾಡಿರುವ ಆರೋಪದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
‘ನೀನು ಈ ಚೀಟಿಯನ್ನು ಓದಿ ಕೂಗಾಡಿದರೂ ನಾನೇನು ಮಾಡಬೇಕು ಎಂದುಕೊಂಡಿದ್ದೇನೋ ಅದನ್ನು ಮಾಡಿಯೇ ಮಾಡುತ್ತೇನೆ. ಬಾಯಿ ಮುಚ್ಚಿಕೊಂಡು ನೀನಾಗಿಯೇ ಹಣ ಕೊಟ್ಟರೆ ನಿನ್ನ ಪ್ರಾಣ ಉಳಿಯುತ್ತದೆ, ಗ್ರಾಹಕರಿಗೂ ಏನೂ ಮಾಡುವುದಿಲ್ಲ. ನಿಮ್ಮ ಗ್ರಾಹಕರ ಬಗ್ಗೆ ಯೋಚನೆ ಮಾಡು’ ಎಂದು ಆ ಚೀಟಿಯಲ್ಲಿ ಬರೆಯಲಾಗಿತ್ತು.
ಇದನ್ನೂ ಓದಿ: Viral News: 40 ವರ್ಷ ಹಿಂದಿನ ಕೇಕ್ ತುಂಡು 19 ಲಕ್ಷ ರೂ.ಗೆ ಹರಾಜು; ಇದು ಅಂತಿಂಥಾ ಕೇಕ್ ಅಲ್ಲ!
Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು
(Viral News Bad handwriting foils mans Bank robbery Attempt in United Kingdom Interesting Story)