ಬೆಂಗಳೂರು: ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯೊಬ್ಬಳು ಪ್ರಿಯಕರನ ಜೊತೆ ಸೇರಿಕೊಂಡು ಕಟ್ಟಿಕೊಂಡ ಗಂಡನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರಂದ ವಡೇರಹಳ್ಳಿಯಲ್ಲಿ ನಡೆದಿದ್ದು, ಸಂಬಂಧ ಇದೀಗ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಗಂಡಂದಿರ ಮಧ್ಯೆ ಹೆಂಡತಿಯ ಡಬಲ್ ಲವ್! ಚಿಕ್ಕಬಳ್ಳಾಪುರ ಠಾಣೆ ಮುಂದೆ ಹೈಡ್ರಾಮಾ, ಪೋಷಕರದ್ದು ಬರೀ ಗೋಳು
ನೇಪಾಳ ಮೂಲದ ರಾಕೇಶ್ ತೋಮಂಗ ಕೊಲೆಯಾದ ದುರ್ದೈವಿ. ಪತ್ನಿ ದೇಬಿತಂಬಾಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿ ಬಂಧಿತ ಆರೋಪಿಗಳು. ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದಕ್ಕೆ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ನವೆಂಬರ್ 6ರಂದು ಹಿಸುಕಿ ಕೊಲೆ ಮಾಡಿ ಏನು ತಿಳಿಯದಂತೆ ನಾಟಕ ಮಾಡಿದ್ದರು.
ದೇಬಿತಂಬಾಗ್ ಹಾಗೂ ಪ್ರಿಯಕರ ಬಾಬು ಅಲಿ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ಪತಿ ರಾಕೇಶ್ ತೋಮಂಗ ಗೊತ್ತಾಗಿದ್ದು, ಈ ಬಗ್ಗೆ ಪತ್ನಿ ದೇಬಿತಂಬಾಗ್ಳನ್ನ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಪತ್ನಿ ಮತ್ತು ಪ್ರಿಯಕರ ಸೇರಿ ತೋಮಂಗನನ್ನು ನವೆಂಬರ್ 6ರಂದು ಕೊಲೆ ಮಾಡಿದ್ದರು.
ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Sat, 12 November 22