Shocking News: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?

ರಾಜಸ್ಥಾನದಲ್ಲಿ ಕೊಲೆಯಾದ ವ್ಯಕ್ತಿಯ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಗಂಡನನ್ನು ಕೊಲೆ ಮಾಡಿ ಆ ಶವವನ್ನು ಬಾತ್ ರೂಂನಲ್ಲಿ ಹೂತು ಹಾಕಿದ್ದೆ ಎಂದು ಹೇಳಿದ್ದಾಳೆ. ಈ ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ? ಇದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

Shocking News: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?
ಸಾಂದರ್ಭಿಕ ಚಿತ್ರ

Updated on: Aug 31, 2024 | 10:16 PM

ಜೈಪುರ: ರಾಜಸ್ಥಾನದ ಹನುಮಾನ್‌ಗಢದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿದ್ದಾಳೆ. ಬಳಿಕ, ಪತಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹೂತಿಟ್ಟಿದ್ದಾಳೆ. ಈ ವಿಷಯ ಬೆಳಕಿಗೆ ಬಂದಾಗ ಇಡೀ ಪ್ರದೇಶವೇ ಬೆಚ್ಚಿ ಬಿದ್ದಿದೆ. ಆ ಗ್ರಾಮದ ರೂಪರಾಮ್ 16 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತ ಬೇರೆ ಊರಿಗೆ ಹೋಗಿರಬಹುದು ಅಕ್ಕಪಕ್ಕದವರು ಅಂದುಕೊಂಡಿದ್ದರು.

ಆದರೆ, ರೂಪರಾಮ್ ನಾಪತ್ತೆಯ ಹಿಂದೆ ಆತನ ಹೆಂಡತಿಯ ಕೈವಾಡವಿರಬಹುದು ಎಂದು ಆತನ ಪೋಷಕರಿಗೆ ಅನುಮಾನ ಬಂದಿತ್ತು. ಹೀಗಾಗಿ, ಈ ಬಗ್ಗೆ ಮೃತ ರೂಪಾರಾಮ್ ಕುಟುಂಬಸ್ಥರು ಠಾಣೆಗೆ ಅರ್ಜಿ ಸಲ್ಲಿಸಿದ್ದರು. ಇಷ್ಟೆಲ್ಲಾ ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬಸ್ಥರು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಇದನ್ನೂ ಓದಿ: Shocking News: ಮಧ್ಯರಾತ್ರಿ ಮೈದುನನನ್ನು ರೂಮ್​ಗೆ ಕರೆದು ಮರ್ಮಾಂಗ ಕತ್ತರಿಸಿದ ಅತ್ತಿಗೆ!

ಕೊನೆಗೆ ಈ ಬಗ್ಗೆ ತನಿಖೆ ಪ್ರಾರಂಭವಾಯಿತು. ಪೊಲೀಸರು ರೂಪರಾಮ್ ಅವರ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು. ರೂಪರಾಮ್​ನನ್ನು ಕೊಲೆ ಮಾಡಿ ಆತನ ಶವವನ್ನು ಬಾತ್ ರೂಂನಲ್ಲಿ ಹೂತು ಹಾಕಿದ್ದೇವೆ. ನನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದಳು. ಇದು ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಮನೆಯಲ್ಲಿದ್ದ ಶೌಚಾಲಯವನ್ನು ಅಗೆದು ರೂಪರಾಮ್ ಶವವನ್ನು ಹೊರತೆಗೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us