ಕಿಟಕಿಯಿಂದ ಹಾರಿ ಪತ್ನಿ ಪರಾರಿ; ಹೆಂಡತಿಯ ಸುಳಿವು ನೀಡಿದವರಿಗೆ 5,000 ರೂ. ಬಹುಮಾನ ಘೋಷಿಸಿದ ಗಂಡ!

| Updated By: ಸುಷ್ಮಾ ಚಕ್ರೆ

Updated on: Dec 29, 2021 | 8:32 PM

Shocking News: ಹೆಂಡತಿ ಮತ್ತು ಮಗುವನ್ನು ಪತ್ತೆಹಚ್ಚಲು ವಿಫಲವಾದ ನಂತರ ಆತಂಕಕ್ಕೀಡಾದ ಪತಿ ತನ್ನ ಹೆಂಡತಿಯನ್ನು ಹುಡುಕಿಕೊಟ್ಟವರಿಗೆ 5,000 ರೂ. ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಕಿಟಕಿಯಿಂದ ಹಾರಿ ಪತ್ನಿ ಪರಾರಿ; ಹೆಂಡತಿಯ ಸುಳಿವು ನೀಡಿದವರಿಗೆ 5,000 ರೂ. ಬಹುಮಾನ ಘೋಷಿಸಿದ ಗಂಡ!
ಸಾಂದರ್ಭಿಕ ಚಿತ್ರ
Follow us on

ಕೊಲ್ಕತ್ತಾ: ಹೈದರಾಬಾದ್​ನಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನ ಹೆಂಡತಿ ತಮ್ಮ ಮಗನೊಂದಿಗೆ ಪಶ್ಚಿಮ ಬಂಗಾಳದಲ್ಲಿಯೇ ವಾಸವಾಗಿದ್ದಳು. ಗಂಡ ದೂರದ ಊರಿನಲ್ಲಿದ್ದ ಕಾರಣ ಆಕೆ ಬೇರೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡಿದ್ದಳು. ಆತನೇ ಆಕೆಗೆ ಮೊಬೈಲನ್ನು ತಂದುಕೊಟ್ಟಿದ್ದ. ಹೆಂಡತಿ ಮತ್ತು ಮಗನನ್ನು ನೋಡಲು ಊರಿಗೆ ಹೋಗಿದ್ದ ಆತನ ಜೊತೆ ಜಗಳವಾಡಿಕೊಂಡಿದ್ದ ಆಕೆ ರಾತ್ರಿ ಎಲ್ಲರೂ ಮಲಗಿದ್ದಾಗ ಮನೆಯ ಕಿಟಕಿಯನ್ನು ಹಾರಿ ಮಗುವಿನ ಜೊತೆ ಓಡಿಹೋಗಿದ್ದಾಳೆ.

ತನ್ನ ಹೆಂಡತಿ ಕಿಟಕಿ ಹಾರಿ ನ್ಯಾನೋ ಕಾರು ಹತ್ತಿ ಓಡಿಹೋಗಿದ್ದನ್ನು ನೋಡಿದ ಗಂಡ ಆಕೆಯ ಹಿಂದೆ ಓಡಲು ಪ್ರಯತ್ನಿಸಿದರೂ ಆಕೆ ಪರಾರಿಯಾಗಿದ್ದಳು. ಆಕೆಯನ್ನು ಎಲ್ಲ ಕಡೆ ಹುಡುಕಿದ ನಂತರ ಪೊಲೀಸರಿಗೆ ದೂರು ಕೊಟ್ಟರೂ ಆಕೆ ಮತ್ತು ಮಗುವನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಹೆಂಡತಿ ಮತ್ತು ಮಗುವನ್ನು ಪತ್ತೆಹಚ್ಚಲು ವಿಫಲವಾದ ನಂತರ ಆತಂಕಕ್ಕೀಡಾದ ಪತಿ ತನ್ನ ಹೆಂಡತಿಯನ್ನು ಹುಡುಕಿಕೊಟ್ಟವರಿಗೆ 5,000 ರೂ. ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಆ ಮಹಿಳೆಯ ಗಂಡ ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಆಕೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಆತ ಮನೆಗೆ ಬಂದಾಗ ಆಕೆ ತನ್ನ ಮಗುವಿನೊಂದಿಗೆ ಕಿಟಕಿ ಒಡೆದು ಮನೆಯಿಂದ ಓಡಿ ಹೋಗಿದ್ದಾಳೆ. ಈ ಘಟನೆ ಪಶ್ಚಿಮ ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ನಡೆದಿದೆ. ಆ ವ್ಯಕ್ತಿ ವೃತ್ತಿಯಲ್ಲಿ ಬಡಗಿಯಾಗಿದ್ದು, ಪತಿ ತನ್ನ ಹೆಂಡತಿ ಮತ್ತು ಮಗುವನ್ನು ಹುಡುಕಲು ವಿವಿಧ ಸ್ಥಳಗಳಿಗೆ ಅಲೆದಾಡಿದ್ದಾನೆ.

ಡಿಸೆಂಬರ್ 9ರಿಂದ ತಾಯಿ ಮತ್ತು ಮಗು ಕಾಣೆಯಾಗಿದೆ ಎಂದು ಪತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಡಿಸೆಂಬರ್ 9ರಿಂದ ನನ್ನ ಹೆಂಡತಿ ಮತ್ತು ಮಗು ಕಾಣೆಯಾಗಿದ್ದಾರೆ. ಯಾರಾದರೂ ಅವರನ್ನು ನೋಡಿದವರು ದಯವಿಟ್ಟು ನನಗೆ ತಿಳಿಸಿ. ಅವರನ್ನು ಹುಡುಕಿಕೊಟ್ಟವರಿಗೆ 5,000 ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಿಂದಲೂ ಅವರಿಗೆ ಯಾವುದೇ ನೆರವು ಸಿಕ್ಕಿಲ್ಲ.

ನನ್ನ ಹೆಂಡತಿಗೆ ಮೊಬೈಲ್ ಕೊಡಿಸಿದ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಆಕೆ ರಾತ್ರಿಯಲ್ಲಿ ಒಬ್ಬಂಟಿಯಾಗಿ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು. ಡಿ.9ರ ರಾತ್ರಿ ನಂಬರ್ ಪ್ಲೇಟ್ ಇಲ್ಲದ ನ್ಯಾನೋ ಕಾರು ಬಂದಿದ್ದು, ಅದೇ ವಾಹನದಲ್ಲಿ ಆಕೆ ಪತ್ನಿ ಪರಾರಿಯಾಗಿರುವ ಅನುಮಾನವಿದೆ ಎಂದು ಆತ ಹೇಳಿದ್ದಾನೆ.

ನನ್ನ ಹೆಂಡತಿಯೊಬ್ಬಳಿಗೆ ಮನೆಯ ಕಿಟಕಿಯನ್ನು ಒಡೆಯಲು ಸಾಧ್ಯವಿಲ್ಲ. ಆಕೆಯ ಪ್ರಿಯಕರನೂ ಅದಕ್ಕೆ ಸಹಾಯ ಮಾಡಿರಬಹುದು. ಆಕೆ ಮನೆಯಿಂದ ಹೊರಡುವ ಮುನ್ನ ಪತ್ನಿ ಹಣ, ಚಿನ್ನಾಭರಣ, ವೋಟರ್ ಐಡಿ, ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರ ಸೇರಿದಂತೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಆಕೆಯ ಗಂಡ ಆರೋಪಿಸಿದ್ದಾನೆ.

ಇದನ್ನೂ ಓದಿ: Crime News: ಕೇವಲ 400 ರೂ.ಗಾಗಿ ಪ್ರೇಯಸಿಯ ಮೂಗನ್ನೇ ಕತ್ತರಿಸಿದ ಮಹರಾಯ!

Shocking News: ಧಾರಾವಾಹಿ ತಂದ ಅವಾಂತರ; ಮಹಿಳೆಯರು ಟಿವಿ ನೋಡುತ್ತಿದ್ದಾಗ ಹಣ, ಒಡವೆ ದೋಚಿದ ಕಳ್ಳರು!

Published On - 8:31 pm, Wed, 29 December 21