ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತಿದೆ. ಆದರೆ ಮದುವೆಯಾಗಲೇಬೆಕೆಂದು ಸುಳ್ಳು ಹೇಳಿದ್ರೆ ಏನಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಡೆಹ್ರಾಡೂನ್ನ ಮಹಿಳೆಯೊಬ್ಬಳು ಯುವಕನನ್ನು ಮದುವೆಯಾಗಲು ತನ್ನ ದಾಖಲೆಗಳನ್ನು ಫೋರ್ಜರಿ ಮಾಡಿ ಇದೀಗ ಸಿಕ್ಕಿ ಬಿದ್ದಿದ್ದಾಳೆ. ಮೂಲತಃ ಉತ್ತರ ಪ್ರದೇಶದವರಾದ ಮಹಿಳೆಯುವ ಮತ್ತೊಂದು ಮದುವೆಯಾಗಲು ಬಯಸಿದ್ದರು. ಇದಕ್ಕಾಗಿ ಸುರಸುಂದರಾಂಗ ಯುವಕನ ಹುಡುಕಾಟದಲ್ಲಿದ್ದಳು. ಇದೇ ವೇಳೆ ಮ್ಯಾಟ್ರಿಮೊನಿಯಲ್ ವೆಬ್ಸೈಟ್ನಲ್ಲಿ ಯುವಕನೊಬ್ಬ ಪರಿಚಿತನಾಗುತ್ತಾನೆ. ಆತನೇ ನನಗೆ ಸರಿಯಾದ ಜೋಡಿ ಎಂದು ಆಕೆ ನಿರ್ಧರಿಸಿದ್ದಳು. ಅದರಂತೆ ಯುವಕನಿಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾಳೆ.
ಅತ್ತ 28 ವರ್ಷದ ಯುವಕ ಕೂಡ ಕಂಕಣ ಭಾಗ್ಯವನ್ನು ಎದುರು ನೋಡುತ್ತಿದ್ದ. ಹೀಗಾಗಿ ಓಕೆ ಅಂದಿದ್ದಾರೆ. ಆದರೆ ಇಲ್ಲೇ ಎಡವಟ್ಟಾಗಿರೋದು. ತನ್ನ ಪ್ರೊಫೈಲ್ನಲ್ಲಿ ಮಹಿಳೆ ತಾನು ಯುವತಿ ಎಂದು ಪರಿಚಯಿಸಿಕೊಂಡಿದ್ದಳು. ಅಲ್ಲದೆ ತನಗೆ ಇನ್ನು ಕೇವಲ 28 ವರ್ಷ ಎಂದು ತಿಳಿಸಿದ್ದಳು. ಇದೇ ಕಾರಣದಿಂದ ಆತ ಕೂಡ ತನಗೆ ಸರಿಯಾದ ಜೋಡಿ ಎಂದು ಒಪ್ಪಿಕೊಂಡಿದ್ದ.
ಆದರೆ ಇನ್ನೇನು ಮದುವೆಗೆ 20 ದಿನಗಳು ಮಾತ್ರ ಉಳಿದಿರುವಾಗ, ಆಕೆಯ ಅಸಲಿಯತ್ತು ಬಹಿರಂಗವಾಗಿದೆ. ಆಕೆಗೆ 28 ಅಲ್ಲ 38 ವರ್ಷ ಎಂಬುದು ತಿಳಿದು ಬಂದಿದೆ. ಯುವಕನನ್ನು ಮದುವೆಯಾಗಲು ಆಂಟಿ ತನ್ನ ದಾಖಲಾತಿಗಳನ್ನು ಫೋರ್ಜರಿ ಮಾಡಿದ್ದಾರೆ. 1983 ರಲ್ಲಿ ಹುಟ್ಟಿದ ದಿನಾಂಕವನ್ನು 1991 ಬದಲಿಸಿಕೊಂಡಿರುವುದು ಗೊತ್ತಾಗಿದೆ.
ಆಂಟಿಯ ಅಸಲಿಯತ್ತು ಗೊತ್ತಾಗುತ್ತಿದ್ದಂತೆ ಯುವಕ ಮದುವೆ ವಿಚಾರದಿಂದ ಹಿಂದೆ ಸರಿದಿದ್ದಾರೆ. ಅತ್ತ ಯುವಕ ಕೈ ತಪ್ಪಿ ಹೋಗುತ್ತಾನೆ ಎಂದರಿತ ಆಂಟಿ ಹಾಗೂ ಆಕೆಯ ಸಹೋದರಿ, ತಂದೆ ಸೇರಿ ಯುವಕನಿಗೆ ಬೆದರಿಯೊಡ್ಡಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಇದರಿಂದ ಮತ್ತಷ್ಟು ಹೆದರಿದ ಯುವಕ ಕುಟುಂಬಸ್ಥರ ನೆರವಿನೊಂದಿಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇದೀಗ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ), 120 ಬಿ (ಕ್ರಿಮಿನಲ್ ಪಿತೂರಿ), 504 (ಉದ್ದೇಶಪೂರ್ವಕ ಅವಮಾನ ), 506 (ಕ್ರಿಮಿನಲ್ ಬೆದರಿಕೆ) ದೂರು ದಾಖಲಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತಿನಂತೆ ಸುಳ್ಳು ಹೇಳಿ ಮದುವೆ ಅದರೆ ಏನಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(Woman Allege Fraud For Forging Document, Married Younger Man)
Published On - 9:05 pm, Sat, 14 August 21