ಉತ್ತರ ಪ್ರದೇಶ: ರೈಲ್ವೆ ಕಂಪಾರ್ಟ್​ಮೆಂಟ್​ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳಾ ಕಾನ್​ಸ್ಟೆಬಲ್ ಪತ್ತೆ

|

Updated on: Sep 05, 2023 | 8:49 AM

ರೈಲು ಕಂಪಾರ್ಟ್​ಮೆಂಟ್​ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳಾ ಕಾನ್​ಸ್ಟೆಬಲ್​ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರೈಲ್ವೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರ ಮತ್ತು ರೈಲ್ವೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಭಾನುವಾರ ಸಂಜೆ ತಮ್ಮ ನಿವಾಸದಲ್ಲಿ ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರೊಂದಿಗೆ ಪ್ರಕರಣದ ಕುರಿತು ಸ್ವೀಕರಿಸಿದ ವಾಟ್ಸಾಪ್ ಸಂದೇಶದ ಆಧಾರದ ಮೇಲೆ ವಿಚಾರಣೆ ನಡೆಸಿದರು.

ಉತ್ತರ ಪ್ರದೇಶ: ರೈಲ್ವೆ ಕಂಪಾರ್ಟ್​ಮೆಂಟ್​ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳಾ ಕಾನ್​ಸ್ಟೆಬಲ್ ಪತ್ತೆ
ಪೊಲೀಸ್
Image Credit source: NDTV
Follow us on

ರೈಲ್ವೆ ಕಂಪಾರ್ಟ್​ಮೆಂಟ್​ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳಾ ಕಾನ್​ಸ್ಟೆಬಲ್​ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರೈಲ್ವೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರ ಮತ್ತು ರೈಲ್ವೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ಭಾನುವಾರ ಸಂಜೆ ತಮ್ಮ ನಿವಾಸದಲ್ಲಿ ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರೊಂದಿಗೆ ಪ್ರಕರಣದ ಕುರಿತು ಸ್ವೀಕರಿಸಿದ ವಾಟ್ಸಾಪ್ ಸಂದೇಶದ ಆಧಾರದ ಮೇಲೆ ವಿಚಾರಣೆ ನಡೆಸಿದರು.

ದ್ವಿಸದಸ್ಯ ಪೀಠವು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಯನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಸೆಪ್ಟೆಂಬರ್ 13 ರೊಳಗೆ ಪ್ರಕರಣದ ತನಿಖೆಯ ಸ್ಥಿತಿಗತಿಯನ್ನು ಸಲ್ಲಿಸುವಂತೆ ಸರ್ಕಾರಿ ರೈಲ್ವೆ ಪೋಲೀಸ್ (ಜಿಆರ್‌ಪಿ) ಗೆ ಆದೇಶಿಸಿತು.

ಮಹಿಳಾ ಕಾನ್‌ಸ್ಟೆಬಲ್ ಆಗಸ್ಟ್ 30 ರಂದು ಸರಯು ಎಕ್ಸ್‌ಪ್ರೆಸ್ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಕಾನ್​ಸ್ಟೆಬಲ್ ಪತ್ತೆಯಾಗಿದ್ದರು, ನಂತರ ಅವರನ್ನು ಲಕ್ನೋದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅವರ ಸ್ಥಿತಿ ಸ್ಥಿರವಾಗಿದೆ. ಅದೇ ದಿನ ಮಹಿಳೆಯ ಸಹೋದರನಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ಮಹಿಳೆಯ ಕುಟುಂಬದವರು ಪ್ರಕರಣದಲ್ಲಿ ಯಾವುದೇ ಲೈಂಗಿಕ ದೌರ್ಜನ್ಯದ ಕೋನವನ್ನು ನಿರಾಕರಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಡಿಎಂಕೆ ಮುಖಂಡನ ಮೇಲೆ ಲಾಂಗ್, ಮಚ್ಚಿ​ನಿಂದ ಮಾರಣಾಂತಿಕ ಹಲ್ಲೆ

ನ್ಯಾಯಾಲಯವು ಕೇಂದ್ರ, ರೈಲ್ವೇ ಸಚಿವಾಲಯ, ಆರ್‌ಪಿಎಫ್‌ನ ಮಹಾನಿರ್ದೇಶಕರು, ಉತ್ತರ ಪ್ರದೇಶ ಸರ್ಕಾರ ಮತ್ತು ಗೃಹ ಸಚಿವಾಲಯ ಮತ್ತು ರಾಜ್ಯ ಮಹಿಳಾ ಆಯೋಗಕ್ಕೂ ನೋಟಿಸ್ ಜಾರಿ ಮಾಡಿದೆ.

ಪ್ರಯಾಗರಾಜ್ ಜಿಲ್ಲೆಯಿಂದ ಬಂದಿರುವ 47 ವರ್ಷದ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಸುಲ್ತಾನ್‌ಪುರ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು ಎಂದು ಘಟನೆಯ ನಂತರ ತನಿಖೆಯ ಉಸ್ತುವಾರಿ ಅಧಿಕಾರಿ ಪೂಜಾ ಯಾದವ್ ಹೇಳಿದ್ದಾರೆ.

ಅವರು ಸಾವನ್ ಮೇಳ ಕರ್ತವ್ಯದ ಮೇಲೆ ಸುಲ್ತಾನ್‌ಪುರದಿಂದ ಅಯೋಧ್ಯೆಗೆ ಬರುತ್ತಿದ್ದರು. ಅಯೋಧ್ಯೆಯಲ್ಲಿ ಇಳಿಯಬೇಕಾಗಿತ್ತು, ಆದರೆ ಅವಳು ರೈಲಿನಲ್ಲಿ ಮಲಗಿದ್ದ ಕಾರಣ ಮನಕ್‌ಪುರ ಎಂಬ ರೈಲ್ವೇ ನಿಲ್ದಾಣವನ್ನು ತಲುಪಿದ್ದರು. ಘಟನೆ ಅಯೋಧ್ಯೆ ಮತ್ತು ಮಂಕಾಪುರದ ನಡುವೆ ನಡೆದಿದೆ.

ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ (ಕೆಜಿಎಂಯು) ಯಲ್ಲಿ ಮಹಿಳಾ ಕಾನ್‌ಸ್ಟೆಬಲ್​ನ್ನು ಯುಪಿ ಪೊಲೀಸ್‌ನ ಹಿರಿಯ ಅಧಿಕಾರಿಗಳು ಭೇಟಿ ಮಾಡಿದರು. ಪೊಲೀಸರು ಇನ್ನೂ ಪ್ರಕರಣವನ್ನು ಭೇದಿಸಿಲ್ಲ ಮತ್ತು ಮಹಿಳೆಯ ಮೇಲಿನ ಕ್ರೂರ ದಾಳಿಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ