AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಫೋರ್ಸ್​ ಕಾಂಪೌಂಡ್​​ನಲ್ಲಿದ್ದ ಬೆಲೆಬಾಳುವ ಎರಡು ಶ್ರೀಗಂಧದ ಮರ ಕಳ್ಳತನ: ದೂರು ದಾಖಲು

ಏರ್ ಫೋರ್ಸ್​​ಗೆ ಸೇರಿದ ಕಾಂಪೌಂಡ್​ನಲ್ಲಿನ ಬೆಲೆಬಾಳುವ ಎರಡು ಶ್ರೀಗಂಧದ ಮರ ಕಳ್ಳತನ ಆಗಿರುವಂತಹ ಘಟನ ಬೆಂಗಳೂರಿನ ಗಂಗಮ್ಮ ಸರ್ಕಲ್ ಬಳಿ ಇರುವ ಏರ್ ಫೋರ್ಸ್ ಕಾಂಪೌಂಡ್​​ನಲ್ಲಿ ನಡೆದಿದೆ. ಏರ್ ಫೋರ್ಸ್ ಅಧಿಕಾರಿ ಪ್ರೋಬೀರ್ ಕುಮಾರ್​ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಏರ್ ಫೋರ್ಸ್​ ಕಾಂಪೌಂಡ್​​ನಲ್ಲಿದ್ದ ಬೆಲೆಬಾಳುವ ಎರಡು ಶ್ರೀಗಂಧದ ಮರ ಕಳ್ಳತನ: ದೂರು ದಾಖಲು
ಶ್ರೀಗಂಧದ ಮರ ಕಳ್ಳತನ
ಬಿ ಮೂರ್ತಿ, ನೆಲಮಂಗಲ
| Edited By: |

Updated on: Sep 04, 2023 | 10:13 PM

Share

ನೆಲಮಂಗಲ, ಸೆಪ್ಟೆಂಬರ್​ 4: ಏರ್ ಫೋರ್ಸ್​​ಗೆ ಸೇರಿದ ಕಾಂಪೌಂಡ್​ನಲ್ಲಿನ ಬೆಲೆಬಾಳುವ ಎರಡು ಶ್ರೀಗಂಧದ ಮರ ಕಳ್ಳತನ ಆಗಿರುವಂತಹ ಘಟನ ಬೆಂಗಳೂರಿನ ಗಂಗಮ್ಮ ಸರ್ಕಲ್ ಬಳಿ ಇರುವ ಏರ್ ಫೋರ್ಸ್ ಕಾಂಪೌಂಡ್​​ನಲ್ಲಿ ನಡೆದಿದೆ. ಶ್ರೀಗಂಧದ ಮರ ಕಳ್ಳತನ ಬಗ್ಗೆ ಏರ್ ಫೋರ್ಸ್ ಅಧಿಕಾರಿ ಪ್ರೋಬೀರ್ ಕುಮಾರ್​ (Probir Kumar) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅರಣ್ಯ ಕಾಯ್ದೆ 1963 ರೀತ್ಯಾ 86, IPC 1860-379 ಅಡಿಯಲ್ಲಿ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶ್ರೀಗಂಧದ ಮರಗಳನ್ನ ಕತ್ತರಿಸಿ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಪೊಲೀಸ್​

ಬೀದರ್: ರೈತನ ಹೊಲದಲ್ಲಿ ಬೆಳೆದಿದ್ದ ಅನಧಿಕೃತವಾಗಿ ಶ್ರೀಗಂಧದ ಮರಗಳನ್ನ ಕತ್ತರಿಸಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಜಾಲವೊಂದನ್ನ ಭೇದಿಸುವಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬೀದರ್ ಜಿಲ್ಲಾ ಪೋಲಿಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಭಾಲ್ಕಿ ತಾಲೂಕಿನ ತಳವಾಡ ಕೆ ಬಳಿ ದಾಳಿಮಾಡಿದ್ದು ಸುಮಾರು 3 ಜನರನ್ನ ಬಂಧಿಸಿದ್ದು 6 ಜನರು ಪರಾರಿಯಾಗಿದ್ದರು.

ಇದನ್ನೂ ಓದಿ: ಬೆಂಗಳೂರು: ಡಿಎಂಕೆ ಮುಖಂಡನ ಮೇಲೆ ಲಾಂಗ್, ಮಚ್ಚಿ​ನಿಂದ ಮಾರಣಾಂತಿಕ ಹಲ್ಲೆ

ದಾಳಿ ವೇಳೆ ಸುಮಾರು 3 ಲಕ್ಷ ಮೌಲ್ಯದ 60 ಕೆಜಿ. ಶ್ರೀಗಂಧ ಕಟ್ಟಿಗೆ ತುಂಡುಗಳನ್ನ ವಶಕ್ಕೆ ಪಡೆದಿದ್ದಾರೆ, ಇದರ ಜೊತೆಗೆ ಶ್ರೀಗಂಧ ಸಾಗಿಸುತ್ತಿದ್ದ ಒಂದು ಕಾರು 5 ಮೊಬೈಲ್, ಶ್ರೀಗಂಧ ಕತ್ತರಿಸುವ ಯಂತ್ರವನ್ನ ವಶಕ್ಕೆ ಪಡೆದಿದ್ದರು. ಪ್ರಕರಣ ಪತ್ತೆಯಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಪ್ರಶಂಸಿಸಿ ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ ಅವರು ನಗದು ಬಹುಮಾನ ಘೋಷಿಸಿದರು.

ಈ ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಇದು ಕಳವಳಿಕಾರಿ ವಿಚಾರವಾಗಿದ್ದು ಕಾಲೇಜು ವಿದ್ಯಾರ್ಥಿಗಳು ಇಂತಹ ಪ್ರಕರಣದಲ್ಲಿ ಭಾಗಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದರು.

ಮದುವೆ ಮನೆಯಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು

ಬೆಳಗಾವಿ: ಮದುವೆ ಮನೆಯಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶಬ್ಬೀರ್ ಮಕಾನದಾರ್(58) ಮೃತ ವ್ಯಕ್ತಿ. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಆಗಸ್ಟ್‌ 28 ರಂದು ನಡೆದಿದ್ದ ಮದುವೆ ಸಮಾರಂಭದಲ್ಲಿ ಕಲುಷಿತ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥಗೊಂಡಿದ್ದ. ನಿರಂತರ ವಾಂತಿಭೇದಿಯಿಂದ ನಿರ್ಜಲೀಕರಣಗೊಂಡಿದ್ದ ಶಬ್ಬೀರ್ ದೇಹ, ಬಳಿಕ ರಕ್ತದೊತ್ತಡ ಕುಸಿದು ಪಾರ್ಶ್ವವಾಯುಗೆ ತುತ್ತಾಗಿದ್ದರು.

ಇದನ್ನೂ ಓದಿ: ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

ಚಿಕ್ಕೋಡಿ ತಾಲೂಕಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಐದು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಶಬ್ಬೀರ್ ಇಂದು ಕೊನೆಯುಸಿರೆಳೆದಿದ್ದಾರೆ.

ಅದೇ ರೀತಿಯಾಗಿ ಕಲುಷಿತ ಆಹಾರ ಸೇವನೆ ಬಳಿಕ ದೃಷ್ಟಿದೋಷ ಸಮಸ್ಯೆ ಎದುರಿಸುತ್ತಿದ್ದ ಬಾಬಾಸಾಬ್ ಬೇಗ್​ ಎನ್ನುವವರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಸಹ ಮೃತಪಟ್ಟಿದ್ದಾರೆ. ವಾಂತಿ-ಭೇದಿಯಿಂದ ನಿತ್ರಾಣಗೊಂಡಿದ್ದ ಇನ್ನುಳಿದ 158ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.