AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ಗಲಾಟೆ, ವಿದ್ಯಾರ್ಥಿಗೆ ಚಾಕು ಇರಿತ

ಬೆಂಗಳೂರಿನ ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ಪ್ರಾಕ್ಟಿಕಲ್‌ ಕ್ಲಾಸ್‌ನಲ್ಲಿನ ಮೆಟಲ್ ವಿಷಯವಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆಯೂ ನಡೆದಿದೆ. ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ಗಲಾಟೆ, ವಿದ್ಯಾರ್ಥಿಗೆ ಚಾಕು ಇರಿತ
ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ವಿದ್ಯಾರ್ಥಿಗೆ ಚಾಕು ಇರಿತ
ಬಿ ಮೂರ್ತಿ, ನೆಲಮಂಗಲ
| Edited By: |

Updated on:Sep 04, 2023 | 7:19 PM

Share

ನೆಲಮಂಗಲ, ಸೆ.4: ಪ್ರಾಕ್ಟಿಕಲ್‌ ಕ್ಲಾಸ್‌ನಲ್ಲಿನ ಮೆಟಲ್ ವಿಷಯವಾಗಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ವೇಳೆ ಒಬ್ಬನಿಗೆ ಚಾಕು ಇರಿದ ಘಟನೆ ಬೆಂಗಳೂರಿನ (Bengaluru)  ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ಆಗಸ್ಟ್ 28 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಅಬ್ಬಿಗೆರೆಯ ಅಶೋಕ್‌ ಐಟಿಐ ಕಾಲೇಜು ಬಳಿ ಪ್ರಾಕ್ಟಿಕಲ್‌ ಕ್ಲಾಸ್‌ನಲ್ಲಿ ಮೆಟಲ್ ವಿಷಯವಾಗಿ ಗಲಾಟೆ ನಡೆದಿದೆ. ನಂತರ ಕಾಲೇಜಿನಿಂದ ಹೊರಬರುತ್ತಿದ್ದಂತೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ವಿದ್ಯಾರ್ಥಿ ಪಾಸಿ ಮೊಹಮ್ಮದ್‌ (21) ಎಂಬಾತನಿಗೆ ವಿದ್ಯಾರ್ಥಿ ಬಾಲಕೃಷ್ಣಾರೆಡ್ಡಿ (21) ಸೇರಿದಂತೆ ಇಬ್ಬರು ಚಾಕುವಿನಿಂದ ಇರಿದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಯುವಕನ ಮೇಲೆ ಹಲ್ಲೆ ಮಾಡಿ ಬೆನ್ನಿಗೆ ಚಾಕುನಿಂದ ಇರಿದ ದುಷ್ಕರ್ಮಿಗಳು

ಕೂಡಲೇ ಗಾಯಾಳು ವಿದ್ಯಾರ್ಥಿ ಪಾಸಿ ಮೊಹಮ್ಮದ್​ನನ್ನು ರಾಜಲಕ್ಷ್ಮಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಲಾಟೆ ಸಂಬಂಧ ಇಬ್ಬರನ್ನು ಗಂಗಮ್ಮಗುಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಎಸಿಪಿ ಮೇರಿ ಶೈಲಜಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಕಂಟೈನರ್​ ಡಿಕ್ಕಿ, ಬೈಕ್ ಸವಾರ ಸಾವು

ನೆಲಮಂಗಲ: ಕಂಟೈನರ್​ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಟಿ.ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದಿದೆ. ತ್ಯಾಮಗೊಂಡ್ಲು ನಿವಾಸಿ ದೊರೆಸ್ವಾಮಿ (24) ಮೃತ ದುರ್ದೈವಿ. ಶಿವಗಂಗೆಯಲ್ಲಿ ಸ್ನೇಹಿತರನ್ನ ಬೇಟಿಯಾಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಬೈಕ್ ಹಿಂಬದಿ ಸವಾರ ಮಾದನಾಯಕನಹಳ್ಳಿ ಗ್ರಾಮದ ನರಸಿಂಹಮೂರ್ತಿ (30) ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಕಂಟೇನರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು, ಕ್ಯಾಂಟರ್ ಹಾಗೂ ಚಾಲಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Mon, 4 September 23

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ