AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಖನೌ ಮೂಲದ ವ್ಯಕ್ತಿಗೆ ಬೆಂಗಳೂರಿನಲ್ಲಿ ಹ್ಯಾಕರ್ ಟಾರ್ಚರ್! ಡಾಲರ್ ರೂಪದಲ್ಲಿ ಹಣಕ್ಕೆ ಬೇಡಿಕೆ: FIR ದಾಖಲು

ಲಖನೌ ಮೂಲದ ವ್ಯಕ್ತಿಯ ಮೊಬೈಲ್​​, ಲ್ಯಾಪ್​ ಟಾಪ್​​​ ಹ್ಯಾಕ್​​ ಮಾಡಿ, ಡಾಲರ್ ರೂಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಲಖನೌ ಮೂಲದ ವೈಭವ್ ಎಂಬಾತನ ಹಿಂದೆ ಹ್ಯಾಕರ್​​ ಬಿದಿದ್ದಾನೆ. ಆತನ ಟಾರ್ಚರ್​​ಗೆ ಬೇಸತ್ತು ಬೆಂಗಳೂರು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಲಖನೌ ಮೂಲದ ವ್ಯಕ್ತಿಗೆ ಬೆಂಗಳೂರಿನಲ್ಲಿ ಹ್ಯಾಕರ್ ಟಾರ್ಚರ್! ಡಾಲರ್ ರೂಪದಲ್ಲಿ ಹಣಕ್ಕೆ ಬೇಡಿಕೆ: FIR ದಾಖಲು
ಪ್ರಾತಿನಿಧಿಕ ಚಿತ್ರ
Jagadisha B
| Edited By: |

Updated on: Sep 04, 2023 | 3:47 PM

Share

ಬೆಂಗಳೂರು, ಸೆಪ್ಟೆಂಬರ್​ 4: ಲಖನೌ ಮೂಲದ ವ್ಯಕ್ತಿಯ ಮೊಬೈಲ್​​, ಲ್ಯಾಪ್​ ಟಾಪ್​​​ ಹ್ಯಾಕ್ (hack)​​ ಮಾಡಿ, ಡಾಲರ್ ರೂಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಲಖನೌ ಮೂಲದ ವೈಭವ್ ಎಂಬಾತನ ಹಿಂದೆ ಹ್ಯಾಕರ್​​ ಬಿದಿದ್ದಾನೆ. ಆತನ ಟಾರ್ಚರ್​​ಗೆ ಬೇಸತ್ತು ನಗರದ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್ ದಾಖಲು‌‌ ಮಾಡಲಾಗಿದೆ. ಕ್ರಿಯೇಟಿವ್ ಕನ್ಸಲ್ಟೆಂಟ್ ಆಗಿರುವ ವೈಭವ್​​, ಕೆಲಸದ ನಿಮಿತ್ತ ಬೆಂಗಳೂರಿನ ಚಿಕ್ಕಪೇಟೆಯ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಮೊಬೈಲ್, ಲ್ಯಾಪ್ ಟಾಪ್​ಗಳನ್ನು ಹ್ಯಾಕ್​ ಮಾಡಿದ್ದು,​ ಖಾಸಗಿ ಮಾಹಿತಿಗಳನ್ನು ಶೇರ್ ಮಾಡುವುದಾಗಿ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ವೈಭವ್​ನ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿರುವ ಹ್ಯಾಕರ್​​​, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. 1490 ಯುಎಸ್ ಡಾಲರ್​ನ್ನು ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ಕಳುಹಿಸಲು ಬಿಟ್ ಕಾಯಿನ್ ಅಕೌಂಟ್​ನ ಲಿಂಕ್​​ ಸಹ ಹ್ಯಾಕರ್​​ ಕಳುಹಿಸಿದ್ದಾನೆ. ಸದ್ಯ ಈ ಬಗ್ಗೆ ವೈಭವ್​ ದೂರು ನೀಡಿದ್ದಾರೆ.

ಕಮಿಷನ್ ಆಸೆಗೆ ಬಿದ್ದು 18.66 ಲಕ್ಷ ರೂ. ಕಳದುಕೊಂಡ ಮಹಿಳೆ

ದಾವಣಗೆರೆ: ಕಮಿಷನ್ ಆಸೆಗೆ ಬಿದ್ದು ಓರ್ವ ಮಹಿಳೆ 18.66 ಲಕ್ಷ ರೂಪಾಯಿ ಕಳೆದುಕೊಂಡಿರುವಂತಹ ಘಟನೆ ನಗರದ ಕೆಕೆ ಬಡಾವಣೆಯಲ್ಲಿ ನಡೆದಿದೆ. ಜ್ಯೋತಿ ಹಣ ಕಳೆದುಕೊಂಡ ಮಹಿಳೆ. ಆನ್​ಲೈನ್ ಮೂಲಕ ಕಂಪನಿಯೊಂದರ ವಸ್ತುಗಳನ್ನ ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಿದರೆ ಭರ್ಜರಿ ಕಮಿಷನ್ ಸಿಗುತ್ತದೆ ಎಂದು ಕಂಪನಿ ಪ್ರತಿನಿಧಿಗಳು ಹೇಳಿದ್ದಾರೆ.

ಇದನ್ನೂ ಓದಿ: ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

ಇದನ್ನ ನಂಬಿ 18.66 ಲಕ್ಷ ರೂಪಾಯಿ ತುಂಬಿದಿದ್ದಾರೆ. ಇನ್ನೂ ಹಲವಾರು ಮಹಿಳೆಯರಿಂದ ಆನ್ ಲೈನ್ ವಂಚನೆ ಆಗಿರುವ ಶಂಕೆ ವ್ಯಕ್ತವಾಗಿದೆ. ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಿಟ್ ಕಾಯಿನ್​ಗೆ ಹಣ ಹೂಡಿಕೆ ಮಾಡಲು ಹೋಗಿ ಟೋಪಿ

ಮೈಸೂರು: ಬಿಟ್ ಕಾಯಿನ್​ನಲ್ಲಿ ಹಣ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಮಾಡಬೇಕೆಂಬ ಆಸೆಯಿಂದ ಮಧ್ಯವರ್ತಿಯ ಮಾತು ನಂಬಿ ಬರೋಬ್ಬರಿ 87 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬೆಚ್ಚಿ ಬೀಳುವ ಸಂಗತಿಗಳು ಹೊರಬರುತ್ತಿದೆ.

ಇದನ್ನೂ ಓದಿ: ರಾಯಚೂರು: ಕೂಲಿ ಕೆಲಸ ಮಾಡುತ್ತೇನೆಂದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ

ಸುಲಭವಾಗಿ ಹಣಗಳಿಸಬೇಕು. ಕೋಟಿ ಕೋಟಿ ಹಣ ಸಂಪಾದನೆ ಮಾಡಬೇಕೆಂಬ ಆಸೆಯಿಂದ ಮೈಸೂರಿನ ಇಬ್ಬರು ವ್ಯಕ್ತಿಗಳು ಲಕ್ಷ ಲಕ್ಷ ಹಣ ಕಳೆದುಕೊಂಡ ಎರೆಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿತ್ತು. ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಕೂಡಿಟ್ಟಿದ್ದ ಅಲ್ಪ ಸ್ವಲ್ಪ ಹಣ ಜೊತೆಗೆ ಬ್ಯಾಂಕ್ ನಲ್ಲಿ ಸಾಲ‌ಮಾಡಿ ಬಿಟ್ ಕಾಯಿನ್ ನಲ್ಲಿ ಹಣ ಹೂಡಿಕೆ ಮಾಡಿದ್ದರು.

ಮೊಹಮ್ಮದ್ ಜಾವೇದ್ ಕೂಡ ಬ್ಯಾಂಕ್​ನಲ್ಲಿ ಸಾಲ ಮಾಡಿ 35 ಲಕ್ಷ ರೂ. ಹಣವನ್ನ ಕ್ರಿಪ್ಟೋ ಕರೆನ್ಸಿಗೆ ಹೂಡಿದ್ದಾರೆ. ಇಬ್ಬರು ಕೂಡ ಟೆಲಿಗ್ರಾಂನಲ್ಲಿ ಬಂದ ಇನ್ವೇಟೇಷನ್ ಮೂಲಕ ಟ್ರೇಡರ್ಸ್ ಪರಿಚಯ ಮಾಡಿಕೊಂಡಿದ್ದರು. ಬಿಟ್ ಕಾಯಿನ್​ನಿಂದ ಸುಲಭವಾಗಿ ಹಣ ಗಳಿಸಬಹುದೆಂದು ನಂಬಿಕೆ ಬರುವ ರೀತಿ ಚಾಟ್ ಮಾಡಿದ್ದಾರೆ. ಜೊತೆಗೆ ಹಣ ಗಳಿಸಿದವರ ನಕಲಿ ಸ್ಕ್ರೀನ್ ಶಾಟ್ ಕಳುಹಿಸಿ ನಂಬಿಸಿದ್ದರು.

ಆನ್ಲೈನ್ ವಂಚಕರ ಮಾತಿಗೆ ಮರುಳಾದ ಮೈಸೂರಿನ ಇಬ್ಬರು ಬರೋಬ್ಬರಿ 87 ಲಕ್ಷ ರೂ. ಹಣ ಕಳುಹಿಸಿ ಪಂಗನಾಮ ಹಾಕಿಸಿಕೊಂಡಿದ್ದರು. ಈ ಸಂಬಂಧ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್