AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಯಾವ್ದೋ ಆಟೋ ಸಿಕ್ತು ಎಂದು ಓಡಿ ಬಂದು ಹತ್ತಿದ ಮಹಿಳೆ, ಚಾಲಕ ಹಾಗೂ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ

ರಾತ್ರಿ ಹೊತ್ತು ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಮಹಿಳೆಯರೇ ಎಚ್ಚರ, ಆಟೋಗೆ ಕಾಯಬೇಕಿದ್ದರೂ ಮನೆಗಳಿರುವ ಪ್ರದೇಶಗಳಲ್ಲಿಯೇ ನಿಲ್ಲಿ, ಆತುರಾತುರವಾಗಿ ಆಟೋವನ್ನು ಏರಬೇಡಿ. ರಾತ್ರಿಯಾಯ್ತು ಯಾವ್ದೋ ಒಂದು ಆಟೋ ಸಿಕ್ತಲ್ಲಾ ಎಂದು ಮಹಿಳೆಯೊಬ್ಬಳು ಆಟೋ ಏರಿ ಕುಳಿತಿದ್ದಾಳೆ, ಸ್ವಲ್ಪ ದೂರ ಹೋಗುವಷ್ಟರಲ್ಲೇ ಚಾಲಕನ ಸ್ನೇಹಿತರೆಂದು ಇಬ್ಬರು ಆಟೋ ಹತ್ತಿದ್ದರು.

ರಾತ್ರಿ ಯಾವ್ದೋ ಆಟೋ ಸಿಕ್ತು ಎಂದು ಓಡಿ ಬಂದು ಹತ್ತಿದ ಮಹಿಳೆ, ಚಾಲಕ ಹಾಗೂ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ
ಅತ್ಯಾಚಾರImage Credit source: India Today
ನಯನಾ ರಾಜೀವ್
|

Updated on: Sep 05, 2023 | 12:32 PM

Share

ರಾತ್ರಿ ಹೊತ್ತು ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಮಹಿಳೆಯರೇ ಎಚ್ಚರ, ಆಟೋಗೆ ಕಾಯಬೇಕಿದ್ದರೂ ಮನೆಗಳಿರುವ ಪ್ರದೇಶಗಳಲ್ಲಿಯೇ ನಿಲ್ಲಿ, ಆತುರಾತುರವಾಗಿ ಆಟೋವನ್ನು ಏರಬೇಡಿ. ರಾತ್ರಿಯಾಯ್ತು ಯಾವ್ದೋ ಒಂದು ಆಟೋ ಸಿಕ್ತಲ್ಲಾ ಎಂದು ಮಹಿಳೆಯೊಬ್ಬಳು ಆಟೋ ಏರಿ ಕುಳಿತಿದ್ದಾಳೆ, ಸ್ವಲ್ಪ ದೂರ ಹೋಗುವಷ್ಟರಲ್ಲೇ ಚಾಲಕನ ಸ್ನೇಹಿತರೆಂದು ಇಬ್ಬರು ಆಟೋ ಹತ್ತಿದ್ದರು. ಬಳಿಕ ನಿರ್ಜನ ಪ್ರದೇಶಕ್ಕೆ ಕರೆತಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ, ಇನ್ನೇನು ಚಾಲಕನ ಸರದಿ ಬರಬೇಕು ಅನ್ನುವಷ್ಟರಲ್ಲಿ ಆಕೆ ಹೇಗೋ ತಪ್ಪಿಸಿಕೊಂಡು ರಸ್ತೆಗೆ ಬಂದಿದ್ದಾಳೆ. ಅಲ್ಲಿದ್ದವರು ಆಕೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಈ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ,   ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು, ರಾತ್ರಿ ಕೆಲಸ ಮುಗಿಸಿ 10 ಗಮಟೆ ಸುಮಾರಿಗೆ ಆಟೋಗಾಗಿ ಕಾಯುತ್ತಿದ್ದಳು. ಆಗ ಆಟೋವೊಂದು ಬಂದು ನಿಂತಿತ್ತು, ರಾತ್ರಿ ಹೊತ್ತಾದ ಕಾರಣ ತಕ್ಷಣವೇ ಆಟೋ ಹತ್ತಿದ್ದಳು.

ಸನೋಜ್ ಮತ್ತು ವಿಷ್ಣು ಅವರನ್ನು ಸೋಮವಾರ ಬಂಧಿಸಲಾಗಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಫರಿದಾಬಾದ್ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹಾಸನ: 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ನಾಲ್ವರು ಅರೆಸ್ಟ್

ನಾವು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಆಟೋ ಚಾಲಕನನ್ನು ಹಿಡಿಯಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ