ಮಹಿಳಾ ದಿನಾಚರಣೆಯಂದೇ ನಡೆಯಿತು ದುರಂತ; ಹಣ ವಾಪಸ್​ ಕೇಳಲು ಹೋದವಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಜಾನುವಾರು ವ್ಯಾಪಾರಿ

|

Updated on: Mar 09, 2021 | 7:28 PM

ಸಕ್ರಿ ಬಾಯಿ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಪತಿ ಕಡೆಯ ಕುಟುಂಬದಲ್ಲಿ ನಡೆದ ಜಗಳ ತಾರಕಕ್ಕೇರಿ, ಅದು ಸಕ್ರಿ ಬಾಯಿ ಪತಿಯ ಸಾವಿನಲ್ಲಿ ಅಂತ್ಯವಾಗಿದೆ. ಅದಾದ ನಂತರ ಇವರು ತನ್ನ ತಂದೆ-ತಾಯಿಯೊಂದಿಗೇ ವಾಸಿಸುತ್ತಿದ್ದರು.

ಮಹಿಳಾ ದಿನಾಚರಣೆಯಂದೇ ನಡೆಯಿತು ದುರಂತ; ಹಣ ವಾಪಸ್​ ಕೇಳಲು ಹೋದವಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಜಾನುವಾರು ವ್ಯಾಪಾರಿ
ಪ್ರಾತಿನಿಧಿಕ ಚಿತ್ರ
Follow us on

ತೆಲಂಗಾಣ: ಕೊಟ್ಟ ಹಣ ವಾಪಸ್​ ಕೇಳಿದ ಮಹಿಳೆಗೆ ಬೆಂಕಿ ಹಚ್ಚಿದವನನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರ್ಘಟನೆ ಆಂಧ್ರಪ್ರದೇಶದ ಮೇದಕ್​ ಜಿಲ್ಲೆಯಲ್ಲಿ ನಿನ್ನೆ ಅಂದರೆ ಮಹಿಳಾ ದಿನಾಚರಣೆಯಂದೇ ನಡೆದಿದ್ದು, ಇಂದು ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಸಕ್ರಿ ಬಾಯಿ (42) ಎಂದು ಗುರುತಿಸಲಾಗಿದ್ದು, ಬೆಂಕಿ ಹಚ್ಚಿದ ವ್ಯಕ್ತಿ ಪುಟ್ನಾಲಾ ಸದಾತ್ (45)ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಕ್ರಿ ಬಾಯಿಯಿಂದ ಪುಟ್ನಲಾ ಸದಾತ್​ ಹಣ ಪಡೆದಿದ್ದ. ಅದನ್ನು ವಾಪಸ್​ ಪಡೆಯಲು ಸೋಮವಾರ ಆಕೆ ಅವನಿದ್ದಲ್ಲಿಗೆ ಹೋಗಿದ್ದರು. ಆದರೆ ಪುಟ್ನಲಾ ಹಣ ಕೊಡುವ ಬದಲು, ಸಕ್ರಿ ಬಾಯಿಯ ಮೇಲೆ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿದ್ದಾನೆ. ಶೇ.70ರಷ್ಟು ಭಾಗ ಸುಟ್ಟುಹೋಗಿದ್ದ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಕ್​​ಪುರ ನಿವಾಸಿಯಾಗಿರುವ ಸಕ್ರಿ ಬಾಯಿ ವಿಧವೆ. ಇನ್ನು ಸಾದತ್​ ಗಡಿಪೆದ್ದಾಪುರ ಗ್ರಾಮದವನಾಗಿದ್ದು, ಜಾನುವಾರುಗಳ ವ್ಯಾಪಾರ ಮಾಡುತ್ತಾನೆ. ಸೋಮವಾರ ಹಣದ ವಿಚಾರಕ್ಕೆ ಇವರಿಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆದಿದೆ. ಅದೂ ಗಲಾಟೆ ನಡೆದಿದ್ದು ಮುಂಜಾನೆ 3 ಗಂಟೆ ಹೊತ್ತಲ್ಲಿ. ಸಕ್ರಿಯವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಆಗದೆ ಹೈದರಾಬಾದ್​ಗೆ ಕರೆದುಕೊಂಡು ಹೋಗಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿ ಸಾದತ್ ಸದ್ಯ ಅಲ್ಲಾದರ್ಗ್​ ಪೊಲೀಸರ ವಶದಲ್ಲಿದ್ದಾನೆ.

ಪತಿ ಮೃತಪಟ್ಟ ಬಳಿಕ ಪಾಲಕರೊಂದಿಗೆ ವಾಸ
ಸಕ್ರಿ ಬಾಯಿ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಪತಿ ಕಡೆಯ ಕುಟುಂಬದಲ್ಲಿ ನಡೆದ ಜಗಳ ತಾರಕಕ್ಕೇರಿ, ಅದು ಸಕ್ರಿ ಬಾಯಿ ಪತಿಯ ಸಾವಿನಲ್ಲಿ ಅಂತ್ಯವಾಗಿದೆ. ಅದಾದ ನಂತರ ಇವರು ತನ್ನ ತಂದೆ-ತಾಯಿಯೊಂದಿಗೇ ವಾಸಿಸುತ್ತಿದ್ದರು. ಈಕೆಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ. ಸಕ್ರಿ ಬಾಯಿ ಮೇಲೆ ಆ್ಯಸಿಡ್​ ದಾಳಿ ನಡೆದಿದೆ ಎಂದು ಕೆಲ ಮೀಡಿಯಾಗಳು ಸುದ್ದಿ ಮಾಡಿದ್ದವು. ಆದರೆ ಪೊಲೀಸರು ಅದನ್ನು ಅಲ್ಲಗಳೆದಿದ್ದು, ಬೆಂಕಿ ಹಚ್ಚಿ ಕೊಲ್ಲಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ಹೊರಗಿನವಳು ಎನ್ನಲು ನೀವು ಯಾರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್

ಬಾಟ್ಲಾ ಹೌಸ್ ಎನ್​ಕೌಂಟರ್ ನಕಲಿ ಎಂದು ಹೇಳಿದ ರಾಜಕೀಯ ನಾಯಕರು ಈಗ ಕ್ಷಮೆ ಕೇಳಲಿ: ರವಿಶಂಕರ್ ಪ್ರಸಾದ್