ಸಲಿಂಗಿ ಸ್ನೇಹಿತನೊಬ್ಬ ಮಹಿಳಾ ಟೆಕ್ಕಿಯ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತನ್ನ ಬಾಲ್ಯದ ಸಹಪಾಠಿ – ಸಾಫ್ಟ್‌ವೇರ್ ಎಂಜಿನಿಯರ್ ಅನ್ನು ಭೀಕರ ರೀತಿಯಲ್ಲಿ ಸಜೀವ ದಹಿಸಿದ ಸಲಿಂಗಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಚೆನ್ನೈನ ದಕ್ಷಿಣ ಉಪನಗರದ ಕೆಳಂಬಕ್ಕಂ ಬಳಿಯ ತಲಂಬೂರ್‌ನಲ್ಲಿ ಶನಿವಾರ ಹುಟ್ಟುಹಬ್ಬದ ಮುನ್ನಾದಿನದಂದು ಸರ್ಪ್ರೈಸ್ ನೀಡುತ್ತೇನೆಂದು ನಂದಿನಿ ಎಂಬಾಕೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು ಸರಪಳಿಯಿಂದ ಬಿಗಿದು, ಜೀವಂತವಾಗಿ ಸುಟ್ಟು ಹಾಕಿರುವ ಶಂಕಿತ ಆರೋಪಿಯನ್ನು ವೆಟ್ರಿಮಾರನ್ ಎಂದು ಗುರುತಿಸಲಾಗಿದ್ದು, ತನ್ನ ಹೆಸರನ್ನು ಪಾಂಡಿ ಮಹೇಶ್ವರಿ ಎಂದು ಬದಲಾಯಿಸಿಕೊಂಡಿದ್ದ.
ಮತ್ತಷ್ಟು ಓದಿ: ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿಯತಮೆ ಬೆಂಕಿ ಹಚ್ಚಿದ ಪ್ರಕರಣ; ಆರೋಪಿ ಬಂಧನ
26 ವರ್ಷದ ಪಾಂಡಿ ಮಹೇಶ್ವರಿ ಮಧುರೈನ ಶಾಲೆಯೊಂದರಲ್ಲಿ ನಂದಿನಿಯೊಂದಿಗೆ ಓದುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಮಹೇಶ್ವರಿ ತನ್ನ ಹೆಸರನ್ನು ವೆಟ್ರಿಮಾರನ್ ಎಂದು ಬದಲಾಯಿಸಿಕೊಂಡ ನಂತರವೂ ನಂದಿನಿ ಮಾನವೀಯ ನೆಲೆಯಲ್ಲಿ ತನ್ನ ಸ್ನೇಹವನ್ನು ಮುಂದುವರೆಸಿದ್ದಳು. ಇವರಿಬ್ಬರು ಇಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ