ನಾಲ್ಕು ವರ್ಷದ ಮಾನಸಿಕ ಅಸ್ವಸ್ಥ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ 26 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ನಿವಾಸಿ ದಿಲ್ ಅಫ್ರೋಜ್ ದಾದಾಬರಿ ಪ್ರದೇಶದ ಚಂಬಲ್ ನದಿಗೆ ತನ್ನ ಮಗನನ್ನು ಎಸೆದಿದ್ದಳು.
ಬಾಲಕನಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ, ದೈಹಿಕವಾಗಿ ದುರ್ಬಲನಾಗಿದ್ದ ಹೀಗಾಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಅಫ್ರೋಜ್ ತನ್ನ ಆರು ವರ್ಷದ ಮಗಳು ಮತ್ತು ಮಗನೊಂದಿಗೆ ಬರಾನ್ ಜಿಲ್ಲೆಯ ಮ್ಯಾಂಗ್ರೋಲ್‌ನಿಂದ ಬಸ್‌ನಲ್ಲಿ 90 ಕಿಲೋಮೀಟರ್ ಪ್ರಯಾಣಿಸಿದ್ದಳು. ಸೋಮವಾರ ಪತಿಯೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನೆಯವರು ಮಾಂಗ್ರೋಲ್‌ಗೆ ಬಂದಿದ್ದರು. ಬೆಳಗ್ಗೆ ಕೋಟಾ ತಲುಪಿದ್ದಾರೆ.
ಅಫ್ರೋಜ್ ದಾದಾಬರಿಯ ಚಂಬಲ್ ದಡದಲ್ಲಿರುವ ಅಧರ್ಶೀಲಾಗೆ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಹಾಗೂ ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ತನ್ನ ಮಗನನ್ನು ನದಿಗೆ ಎಸೆದು ಬಂದಿದ್ದಳು, ಬಳಿಕ ಬಾಲಕನ ಶವ ನದಿಯಲ್ಲಿ ತೇಲುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಆರೋಪಿ ಮಹಿಳೆ ಹಾಗೂ ಟೈಲರಿಂಗ್ ಅಂಗಡಿ ನಡೆಸುತ್ತಿರುವ ಆಕೆಯ ಪತಿಯನ್ನು ವಿಚಾರಣೆ ನಡೆಸಿದ ಬಳಿಕ ಬಾಲಕನ ಗುರುತು ಪತ್ತೆಯಾಗಿದೆ.
ಮತ್ತಷ್ಟು ಓದಿ:ಓಡಿ ಹೋದ ಪ್ರೇಮಿಗಳ ಕುಟುಂಬದ ನಡುವೆ ಗಲಾಟೆ; ನ್ಯಾಯ ಪಂಚಾಯ್ತಿ ಮಾಡಲು ಹೋಗಿ ಕೊಲೆಯಾದ
ಅಫ್ರೋಜ್‌ನನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾಗಿ ಏಳು ವರ್ಷಗಳಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Sat, 4 March 23