AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಹೊರವಲಯದಲ್ಲಿ ದುಷ್ಕರ್ಮಿಗಳಿಂದ ವ್ಯಕ್ತಿಗೆ ಚಾಕು ಇರಿತ

ಮಂಗಳೂರು ಹೊರವಲಯದಲ್ಲಿ ದುಷ್ಕರ್ಮಿಗಳು ಗುಂಪೊಂದು ಮನೆಯಿಂದ ಸದಕತ್​ ಉಲ್ಲಾರನ್ನ ಹೊರ ಕರೆಸಿ ಕೊಲೆಗೆ ಯತ್ನ ನಡೆಸಿ ಪರಾರಿಯಾಗಿದ್ದಾರೆ.

ಮಂಗಳೂರು ಹೊರವಲಯದಲ್ಲಿ ದುಷ್ಕರ್ಮಿಗಳಿಂದ ವ್ಯಕ್ತಿಗೆ ಚಾಕು ಇರಿತ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Mar 04, 2023 | 10:28 AM

Share

ಮಂಗಳೂರು: ಮಂಗಳೂರು ಹೊರವಲಯದಲ್ಲಿ ದುಷ್ಕರ್ಮಿಗಳು ವ್ಯಕ್ತಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉಳ್ಳಾಲ ಕೋಟೆಪುರ ನಿವಾಸಿ ಸದಕತ್​ ಉಲ್ಲಾ(34) ಎಂಬುವವರ ಮೇಲೆ ತಡರಾತ್ರಿ ಚಾಕು ಇರಿಯಲಾಗಿದೆ.

ಮನೆಯಿಂದ ಸದಕತ್​ ಉಲ್ಲಾರನ್ನ ಹೊರ ಕರೆಸಿ ದುಷ್ಕರ್ಮಿಗಳ ತಂಡ ಕೊಲೆಗೆ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ತಂಡದಿಂದ ಕೃತ್ಯದ ಶಂಕೆ ವ್ಯಕ್ತವಾಗಿದೆ. ಬೆದರಿಸಿ ಫಿಶ್ ಆಯಿಲ್ ಮಿಲ್ ಮಾಲೀಕರಿಂದ ಹಣ ಪಡೆದ ಆರೋಪ ಕೇಳಿ ಬಂದಿದ್ದು ಈ ವಿಚಾರವಾಗಿ ಘರ್ಷಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru: ಬೈಕ್​ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಕಳ್ಳನ ಬಂಧನ

ವಿಶೇಷಚೇತನನ ಕಾಫಿ ತೋಟದಲ್ಲಿ ದುರುಳರಿಂದ ಅಟ್ಟಹಾಸ

ಹಾಸನ ಜಿಲ್ಲೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಮೆಣಸಿನ ಗಿಡಗಳನ್ನು ಕಡಿದು ಪಾಪಿಗಳು ಕ್ರೌರ್ಯ ಮೆರೆದಿದ್ದಾರೆ. 450 ಕ್ಕೂ ಹೆಚ್ಚು ಫಸಲಿಗೆ ಬಂದಿದ್ದ ಕಾಫಿ ಹಾಗೂ ಮೆಣಸಿನ ಗಿಡಗಳನ್ನು ನಾಶ ಮಾಡಲಾಗಿದೆ. ಗ್ರಾಮದ ವಿಶೇಷಚೇತನ ಚಂದ್ರು ಎಂಬುವವರಿಗೆ ಕಾಫಿ ತೋಟ ಸೇರಿದ್ದು ಹನ್ನೆರಡು ವರ್ಷಗಳಿಂದ ಕಷ್ಟಪಟ್ಟು ಕಾಫಿ, ಮೆಣಸಿನ ಗಿಡಗಳನ್ನು ಬೆಳೆಸಿದ್ದರು. ಒಂದು ಎಕರೆ ಪ್ರದೇಶದಲ್ಲಿದ್ದ ಕಾಫಿ, ಮೆಣಸಿನ ಗಿಡಗಳನ್ನು ಕಡಿದು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಕುಟುಂಬ ನಿರ್ವಹಣೆ ಹಾಗೂ ಜೀವನಾಧಾರವಾಗಿದ್ದ ಕಾಫಿ, ಮೆಣಸಿನ ಗಿಡಗಳನ್ನು ಕಳೆದುಕೊಂಡು  ಚಂದ್ರು ಹಾಗೂ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ