ಕಪ್ಪು, ಕುರೂಪಿ ಅಂತ ಮೂದಲಿಸುತ್ತಿದ್ದ ಗಂಡನನ್ನು ಕೊಚ್ಚಿಹಾಕುವ ಮೊದಲು ಚತ್ತೀಸ್ ಗಡ್ ಮಹಿಳೆ ಅವನ ಮರ್ಮಾಂಗವನ್ನು ಕತ್ತರಿಸಿದ್ದಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 01, 2022 | 12:31 PM

ಸೋಮವಾರದಂದು, ಜಿಲ್ಲೆಯ ಅಮ್ಲೇಶ್ವರ್ ಹೆಸರಿನ ಗ್ರಾಮದ ಸಂಗೀತಾ ಸೋನ್ವಾನಿ ಹೆಸರಿನ ಮಹಿಳೆಯನ್ನು ತನ್ನ ಗಂಡ ಅನಂತ್ ಸೋನ್ವಾನಿಯನ್ನು (40) ಹತ್ಯೆಗೈದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪಟಾನ್ ಏರಿಯಾದ ಉಪ-ವಿಭಾಗಾಧಿಕಾರಿ ದೇವಾಂಶ್ ರಾಥೋಡ್ ಹೇಳಿದ್ದಾರೆ.

ಕಪ್ಪು, ಕುರೂಪಿ ಅಂತ ಮೂದಲಿಸುತ್ತಿದ್ದ ಗಂಡನನ್ನು ಕೊಚ್ಚಿಹಾಕುವ ಮೊದಲು ಚತ್ತೀಸ್ ಗಡ್ ಮಹಿಳೆ ಅವನ ಮರ್ಮಾಂಗವನ್ನು ಕತ್ತರಿಸಿದ್ದಳು!
ಪ್ರಾತಿನಿಧಿಕ ಚಿತ್ರ
Follow us on

‘ಬಿಳಿ ಹೆಂಡ್ತಿ’ ಅಂತ ಪುಟ್ಟಣ್ಣ ಕಣಗಾಲ್ (Puttanna Kanagal) ನಿರ್ದೇಶನ ಒಂದು ಕನ್ನಡ ಸಿನಿಮಾ ಬಂದಿತ್ತು 1975ರಲ್ಲಿ. ಆ ಸಿನಿಮಾದ ಕತೆ ಏನಾಗಿತ್ತು ನಮಗೆ ಗೊತ್ತಿಲ್ಲ ಮಾರಾಯ್ರೇ, ಆದರೆ ಚತ್ತೀಸ್ ಗಡ್ ನಲ್ಲಿ ನಡೆದಿರುವ ಒಂದು ಘಟನೆ ನಮಗೆ ಆ ಸಿನಿಮಾವನ್ನು ಜ್ಞಾಪಿಸಿಕೊಳ್ಳುವಂತೆ ಮಾಡಿತು. ನಮ್ಮ ದೇಶದ ಪುರುಷ ಪ್ರಧಾನ (patriarchal) ಸಮಾಜದಲ್ಲಿ ಈಗಲೂ ಪುರುಷರು ಹೇಳಿದ್ದೇ ಅಂತಿಮ ಅನ್ನೋ ಪದ್ಧತಿಯಿದೆ, ನಗರ ಪ್ರದೇಶಗಳಲ್ಲಿ ಈ ಧೋರಣೆ ಕಡಿಮೆಯಾಗಿರುವುದು ನಿಜವಾದರೂ ಗ್ರಾಮೀಣ ಭಾಗಗಳಲ್ಲಿ ಚಿತ್ರಣ ಬದಲಾಗಿಲ್ಲ. ಮದುವೆ ವಿಷಯಕ್ಕೆ ಬಂದರೆ ಪುರುಷರಿಗೆ ಬಿಳಿ ತೊಗಲಿನ (fair-skinned) ಯುವತಿಯೇ ಆಗಬೇಕು.

ಇದನ್ನು ಚೆನ್ನಾಗಿ ಅರಿತಿರುವ ಮಹಿಳೆಯರು ಸಹ ಚರ್ಮದ ಬಣ್ಣವನ್ನು ತಿಳಿಯಾಗಿಸಲು ಹಲವಾರು ಬ್ಯೂಟಿ, ಫೇರ್ನೆಸ್ ಕ್ರೀಮ್, ಫೇಸ್ ವಾಶ್, ಟಾಲ್ಕಂ ಪೌಡರ್ ಗಳನ್ನು ಬಳಸುತ್ತಾರೆ. ಕ್ರಿಮ್ ಗಳು, ವಾಶ್ ಗಳು ಕಪ್ಪಗಿರುವ ಮಹಿಳೆಯರನ್ನು ಅದೆಷ್ಟು ಬೆಳ್ಳಗಾಗಿಸುತ್ತವೆ ಅಂತ ಅವುಗಳನ್ನು ಎಡೆಬಿಡದೆ ಬಳಸಿಯೂ ಬೆಳಗಾಗ ಎದ್ದು ತಮ್ಮ ಬಣ್ಣವನ್ನೇ ಶಪಿಸುವ ಮಹಿಳೆಯರು ಹೇಳಬೇಕು.

ಗೌರವರ್ಣದ ಯುವತಿಯೇ ವಧು ರೂಪದಲ್ಲಿ ಬೇಕು ಎಂಬ ಪುರುಷರ ಮನೋಧರ್ಮ ಸಾದಾ ಮತ್ತು ಕಪ್ಪುಬಣ್ಣದ ಯುವತಿಯರನ್ನು ಖಿನ್ನತೆ ಮತ್ತು ಹತಾಷೆಗೆ ದೂಡಿದ ಉದಾಹರಣೆಗಳು ನಮ್ಮ ದೇಶದಲ್ಲಿ ಸಾಕಷ್ಟು ಸಿಗುತ್ತವೆ ಮಾರಾಯ್ರೇ.

ಆದರೆ ಪುರುಷರ ಧೋರಣೆ ಕೆಲವು ಸಲ ಘಾತಕವಾಗಿ ಪರಿಣಮಿಸಬಹುದು. ನಾವು ಹೇಳುತ್ತಿರುವ ಚತ್ತೀಸ್ ಗಡ್ ನಲ್ಲಿ ಆಗಿದ್ದು ಇದೇ. ರಾಜ್ಯದ ದುರ್ಗ್ ಜಿಲ್ಲೆಯಲ್ಲಿ 30-ವರ್ಷ-ವಯಸ್ಸಿನ ಗೃಹಿಣಿಯೊಬ್ಬಳು, ತಾನು ಕಪ್ಪು, ಕುರೂಪಿ ಅಂತ ಗಂಡನ ನಿರಂತರ ಮೂದಲಿಕೆಯಿಂದ ಅದೆಷ್ಟು ಬೇಸತ್ತಿದ್ದಳೆಂದರೆ, ಕಳೆದ ರವಿವಾರ ಕೊಡಲಿಯೊಂದರಿಂದ ಅವನನ್ನು ಕತ್ತರಿಸಿ ಹಾಕಿಬಿಟ್ಟಿದ್ದಾಳೆ!

ಸೋಮವಾರದಂದು, ಜಿಲ್ಲೆಯ ಅಮ್ಲೇಶ್ವರ್ ಹೆಸರಿನ ಗ್ರಾಮದ ಸಂಗೀತಾ ಸೋನ್ವಾನಿ ಹೆಸರಿನ ಮಹಿಳೆಯನ್ನು ತನ್ನ ಗಂಡ ಅನಂತ್ ಸೋನ್ವಾನಿಯನ್ನು (40) ಹತ್ಯೆಗೈದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪಟಾನ್ ಏರಿಯಾದ ಉಪ-ವಿಭಾಗಾಧಿಕಾರಿ ದೇವಾಂಶ್ ರಾಥೋಡ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಹತ್ಯೆಗೊಳಗಾದ ಅನಂತ್ ತನ್ನ ಹೆಂಡತಿಯನ್ನು ಅವಳ ಕಪ್ಪು ಮೈಬಣ್ಣ ಮತ್ತು ಸಾಧಾರಣ ರೂಪವನ್ನು ಹಂಗಿಸುತ್ತಾ ಹಗಲು-ರಾತ್ರಿ ಹೀಯಾಳಿಸುತ್ತಿದ್ದನಂತೆ. ರಾಥೋಡ್ ಹೇಳಿರುವ ಹಾಗೆ ಇದೇ ವಿಷಯದ ಹಿನ್ನೆಲೆಯಲ್ಲಿ ದಂಪತಿ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತು.

ರವಿವಾರ ರಾತ್ರಿ ಸಹ ಗಂಡಹೆಂಡಿರ ನಡುವೆ ಜಗಳ ಶುರುವಿಟ್ಟುಕೊಂಡಿದೆ. ಅನಂತನ ಮೂದಲಿಕೆಯಿಂದ ಬೇಸತ್ತಿದ್ದ ಸಂಗೀತಾ ಅವತ್ತು ರೊಚ್ಚಿಗೆದ್ದ್ದಿದ್ದಾಳೆ. ಅದೇ ಕೋಪದಲ್ಲಿ ಮನೆಯಲ್ಲಿದ್ದ ಕೊಡಲಿಯಿಂದ ಅವನ ಮೇಲೆ ಹಲ್ಲೆ ನಡೆಸಿ ಕೊಂದುಬಿಟ್ಟಿದ್ದಾಳೆ.

ಸಂಗೀತಾ ಗಂಡನ ಮರ್ಮಾಂಗವನ್ನು ಕತ್ತರಿಸಿ ಹಾಕಿದಳು!

ರಾಥೋಡ್ ಅವರು ನೀಡಿರುವ ಹೇಳಿಕೆಯ ಪ್ರಕಾರ ಸಂಗೀತಾಳಲ್ಲಿ ಅದೆಷ್ಟು ಕೋಪ, ಅಸಮಾಧಾನ ಮನೆಮಾಡಿಕೊಂಡಿತ್ತೆಂದರೆ ಅವಳು ಗಂಡನ ಮರ್ಮಾಂಗವನ್ನೂ ಕೊಡಲಿಯಿಂದ ಕತ್ತರಿಸಿ ಹಾಕಿದ್ದಾಳೆ.

ಆರೋಪಿ ಸಂಗೀತಾ ನೆರೆಹೊರೆಯವರಿಗೆ ಮತ್ತು ಊರಿನ ಜನರಿಗೆ ಯಾರೋ ಬಂದು ಗಂಡನನ್ನು ಕೊಂದು ಹಾಕಿದ್ದಾರೆ ಅಂತ ಹೇಳಿದ್ದಾಳೆ. ಆದರೆ ಪೊಲೀಸರ ವಿಚಾರಣೆಯಲ್ಲಿ ತಾನೇ ಕೊಂದಿದ್ದು ಅಂತ ಒಪ್ಪಿಕೊಂಡಿದ್ದಾಳೆ.

ಅನಂತನ ಮೊದಲ ಹೆಂಡತಿ ಸತ್ತ ನಂತರ ತನ್ನನ್ನು ಅವನಿಗೆ ತನ್ನನ್ನು ಮದುವೆ ಮಾಡಿಕೊಡಲಾಗಿತ್ತು ಅಂತ ಆಕೆ ಹೇಳಿದ್ದಾಳೆ. ಸಂಗೀತಾಳನ್ನು ಐಪಿಸಿ ಸೆಕ್ಷನ್ 302 ರ ಅನ್ವಯ ಬಂಧಿಸಲಾಗಿದೆ ಮತ್ತು ಮುಂದಿನ ತನಿಖೆ ಜಾರಿಯಲ್ಲಿದೆ ಎಂದು ರಾಥೋಡ್ ಹೇಳಿದ್ದಾರೆ.