ಕೋಲ್ಕತ್ತಾದ ವಾಟ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಿಐಎಸ್ಎಫ್ ಖಾಲಿ ಕ್ವಾರ್ಟರ್ಸ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದ ಬಳಿಕ ಮೂರು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಲಾಗಿದ್ದ ಮಹಿಳೆಯ ಕತ್ತರಿಸಿದ ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳೆಯನ್ನು ಆ ರೀತಿ ಭಯಾನಕವಾಗಿ ಹತ್ಯೆ ಮಾಡಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಹಿಳೆ 30-35 ವರ್ಷ ಆಸುಪಾಸಿನವರು ಎನ್ನಲಾಗಿದೆ, ಮಂಗಳವಾರ ತಡರಾತ್ರಿವರೆಗೂ ಪೊಲೀಸರು ಆಕೆಯ ಗುರುತು ಪತ್ತೆ ಹೆಚ್ಚುವ ಪ್ರಯತ್ನ ಮಾಡಿದ್ದಾರೆ ಆದರೆ ಇದುವರೆಗೂ ತಿಳಿದುಬಂದಿಲ್ಲ.
ಆಕೆಯನ್ನು ಅದೇ ಪ್ರದೇಶದಲ್ಲಿ ಕೊಲೆ ಮಾಡಲಾಗಿದೆಯೇ ಅಥವಾ ಬೇರೆಡೆಗೆ ಕೊಲೆ ಮಾಡಿ ಅಲ್ಲಿ ತಂದು ಎಸೆಯಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಆಕೆಯ ಹಣೆ ಮೇಲೆ ಸಿಂಧೂರವಿದ್ದ ಕಾರಣ ಮದುವೆಯಾಗಿರಬಹುದು ಎಂದು ಅಂದಾಜಿಸಿದ್ದಾರೆ.ಚೀಲದೊಳಗೆ ಇಟ್ಟಿಗೆಯೂ ಇತ್ತು, ಕೈಗಳು, ಪಾದ ಹಾಗೂ ಹೊಟ್ಟೆಯ ಭಾಗ ಇನ್ನೂ ಪತ್ತೆಯಾಗಿಲ್ಲ. ಚಲಿಸುವ ವಾಹನದಿಂದ ಯಾರೋ ಈ ಚೀಲಗಳನ್ನು ಎಸೆದಿರಬಹುದು ಎಂದು ಅಂದಾಜಿಸಲಾಗಿದೆ.
ಮತ್ತಷ್ಟು ಓದಿ: ರಾಮನಗರ: ಅಪ್ರಾಪ್ತ ಪತ್ನಿಯನ್ನು ಕೊಂದು ರಾತ್ರಿಯಿಡೀ ಶವದ ಜತೆ ಮಲಗಿದ ಪತಿ
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.
ಫೆಬ್ರವರಿಯಲ್ಲಿ ಬೆಂಗಳೂರಿನ ಕೆಆರ್ ಪುರಂ ಪ್ರದೇಶದಲ್ಲಿ 65 ವರ್ಷದ ಮಹಿಳೆಯ ಛಿದ್ರಗೊಂಡ ಶವ ಡ್ರಮ್‌ನಲ್ಲಿ ಪತ್ತೆಯಾಗಿತ್ತು.
ಮೃತರನ್ನು – ಸುಶೀಲಮ್ಮ ಎಂದು ಗುರುತಿಸಲಾಗಿದೆ – ಮತ್ತು ಅವರ ಮಗಳು ಕೆಆರ್ ಪುರಂನ ನೆರೆಯ ಪ್ರದೇಶವಾದ ನಿಸರ್ಗ ಲೇಔಟ್‌ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಸ್ಥಳದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ ಬಳಿಕ ಪೊಲೀಸರು ಶವ ಪತ್ತೆ ಮಾಡಿದ್ದರು.
ಕಳೆದ ವರ್ಷ, ಇಂತಹ ಹಲವಾರು ಘೋರ ಮತ್ತು ಭಯಾನಕ ಕೊಲೆಯ ಘಟನೆಗಳು ಬೆಳಕಿಗೆ ಬಂದವು. ಅವುಗಳಲ್ಲಿ ಮುಂಬೈನ ಮೀರಾ ರೋಡ್ ಕೊಲೆ ಅತ್ಯಂತ ಭಯಾನಕ ಪ್ರಕರಣಗಳಲ್ಲಿ ಒಂದಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಮೀರಾ ರೋಡ್‌ನಲ್ಲಿ 36 ವರ್ಷದ ಮಹಿಳೆಯನ್ನು ಆಕೆಯ ಲಿವ್-ಇನ್ ಪಾರ್ಟ್ನರ್ ಕೊಂದು ಹಲವು ತುಂಡುಗಳಾಗಿ ಕತ್ತರಿಸಿ ಎಸೆದಿದ್ದ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ