Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಅಪ್ರಾಪ್ತ ಪತ್ನಿಯನ್ನು ಕೊಂದು ರಾತ್ರಿಯಿಡೀ ಶವದ ಜತೆ ಮಲಗಿದ ಪತಿ

ಪ್ರೀತಿಸಿ ಮದುವೆ ಆಗಿದ್ದ ಅಪ್ರಾಪ್ತಳನ್ನು ಕೊಂದು ರಾತ್ರಿಯಿಡೀ ಶವದ ಜೊತೆ ಮಲಗಿದ ಅಮಾನುಷ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ(Kanakapura Rural Police Station)ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿರುವ ಕನಕಪುರ ಗ್ರಾಮಾಂತರ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನ ಜೈಲಿಗೆ ಅಟ್ಟಿದ್ದಾರೆ.

ರಾಮನಗರ: ಅಪ್ರಾಪ್ತ ಪತ್ನಿಯನ್ನು ಕೊಂದು ರಾತ್ರಿಯಿಡೀ ಶವದ ಜತೆ ಮಲಗಿದ ಪತಿ
ಅಪ್ರಾಪ್ತ ಪತ್ನಿ ಕೊಂದ ಪತಿ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 01, 2024 | 5:12 PM

ರಾಮನಗರ, ಏ.01: ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ(Kanakapura Rural Police Station)ವ್ಯಾಪ್ತಿಯಲ್ಲಿ ಪತಿಯೇ ಅಪ್ರಾಪ್ತಳನ್ನು ಕೊಂದು ರಾತ್ರಿಯಿಡೀ ಶವದ ಜೊತೆ ಮಲಗಿದ ಅಮಾನುಷ ಘಟನೆ ನಡೆದಿದೆ. ಹೌದು, ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಲಾಗಿದೆ. ಆರೋಪಿ 2021 ರಲ್ಲಿ 13 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆ ಆಗಿದ್ದ. ಇವರಿಗೆ ಒಂದು ಮಗು ಕೂಡ ಇದೆ. ಕೆಲ ದಿನಗಳಿಂದ ಅಪ್ರಾಪ್ತೆ ಮೇಲೆ ಅನುಮಾನಗೊಂಡಿದ್ದ ಆರೋಪಿ, ಮೊದನಿನಂತೆ ಲೈಂಗಿಕವಾಗಿ ತೊಡಗುತ್ತಿಲ್ಲ ಎಂಬ ಕಾರಣಕ್ಕೆ ಜಗಳ ಶುರುವಾಗಿತ್ತು.

ಕತ್ತು ಹಿಸುಕಿ ಅಪ್ರಾಪ್ತಳ ಕೊಲೆ ಮಾಡಿದ್ದ ಪತಿ

ಹೀಗೆ ಶುರುವಾದ ಜಗಳ ಅತಿರೇಕಕ್ಕೆ ಹೋಗಿ ಕಳೆದ ತಿಂಗಳ ಮಾ. 27‌ರ ರಾತ್ರಿಯಂದು ಅಪ್ರಾಪ್ತೆ ಪತ್ನಿಯನ್ನ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ರಾತ್ರಿ ಇಡೀ ಶವದ ಜೊತೆಯೇ ಮಲಗಿದ ಆತ, ಬೆಳಿಗ್ಗೆ ಎದ್ದು ತಾನೇ ಅಪ್ರಾಪ್ತೆ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದನು. ಬಳಿಕ ಜ್ವರ ಬಂದಿದೆ, ಹುಷಾರಿಲ್ಲ ಆಸ್ಪತ್ರೆ ಗೆ ಬನ್ನಿ ಕುಟುಂಬಸ್ಥರಿಗೆ ಕರೆದಿದ್ದ. ಶವ ಪರೀಕ್ಷೆ ಬಳಿಕ ಅನುಮಾನ ಗೊಂಡ ವೈದ್ಯರು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.

ಇದನ್ನೂ ಓದಿ:ಕೋಲಾರ: ವರ್ಷದ ಹಿಂದಿನ ಮಹಿಳೆಯ ಕೊಲೆ ಪ್ರಕರಣ ಸುಖಾಂತ್ಯ! ಹತ್ಯೆ ಮಾಡಿದ್ದ ಆರೋಪಿ ಅಂದರ್​ 

ಆರೋಪಿ ಹಾವಾಭಾವ ಕಂಡು ತನಿಖೆ ನಡೆಸಿದ ಕನಕಪುರ ಗ್ರಾಮಾಂತರ ಪೊಲೀಸರು, ‘ವಿಚಾರಣೆ ವೇಳೆ ತಾನೇ ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿರುವ ಕನಕಪುರ ಗ್ರಾಮಾಂತರ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನ ಜೈಲಿಗೆ ಅಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ