Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧೆಯ ಕೊಲೆ ರಹಸ್ಯ ಬೇಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ರು; 13 ದಿನದ ಬಳಿಕ ಸತ್ಯಾಸತ್ಯತೆ ಬಯಲು

ಆಶ್ರಮದಲ್ಲಿ ಕೆಲಸ ಮಾಡಿಕೊಂಡಿದ್ದ ವೃದ್ಧೆಯೊಬ್ಬರು, ಅನೇಕ ವರ್ಷಗಳಿಂದ ದುಡಿದು ಮೊಮ್ಮಕ್ಕಳಿಗಾಗಿ ಒಂದಿಷ್ಟು ಹಣ ಮತ್ತು ಚಿನ್ನಾಭರಣ ಕೂಡಿಟ್ಟಿದ್ದರು. ಜೊತೆಗೆ ಕೈಯಲ್ಲಿರುವ ಒಂದಿಷ್ಟು ಹಣವನ್ನ ಗ್ರಾಮದಲ್ಲಿ ಬಡ್ಡಿಯ ಹಾಗೇ ಕೊಟ್ಟಿದ್ದರು. ಹೀಗಾಗಿ ವೃದ್ಧೆಯ ಬಳಿ ಇರುವ ಹಣ, ಚಿನ್ನಾಭರಣ ಕುರಿತು ಒಂದಿಷ್ಟು ಜನರಿಗೆ ಗೊತ್ತಿತ್ತು. ಈ ನಡುವೆ ಅಜ್ಜಿ ಮನೆಯಿಂದ ದಿಢೀರ್​ ಕಾಣೆಯಾಗಿದ್ದರು. ಬಳಿಕ ದೂರದ ಊರಿನ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ತನಿಖೆ ಬಳಿಕ ಸತ್ಯಾಂಶ ಬಯಲಾಗಿದೆ.

ವೃದ್ಧೆಯ ಕೊಲೆ ರಹಸ್ಯ ಬೇಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ರು; 13 ದಿನದ ಬಳಿಕ ಸತ್ಯಾಸತ್ಯತೆ ಬಯಲು
ಪ್ರಾತಿನಿಧಿಕ ಚಿತ್ರ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 31, 2024 | 6:18 PM

ಶಿವಮೊಗ್ಗ, ಮಾ.31: ಇದೇ ಮಾ. 18 ರಂದು ಹೊಸನಗರ(Hosanagara) ತಾಲೂಕಿನ ರಿಪ್ಪನಪೇಟೆ ಸಮೀಪದ ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿತ್ತು. ಮೃತಪಟ್ಟು ಎರಡ್ಮೂರು ದಿನವಾಗಿದ್ದರಿಂದ ಶವ ಕೊಳೆತ ಸ್ಥಿತಿಯಲ್ಲಿತ್ತು. ಈ ಹಿನ್ನಲೆ ಮೃತದೇಹ ಯಾರದೂ ಎನ್ನುವ ಕುರಿತು ತನಿಖೆ ನಡೆಸಲು ಶಿವಮೊಗ್ಗ ಗ್ರಾಮಾಂತರ ಪೊಲೀಸರು ವೃದ್ದೆಯ ಮಿಸ್ಸಿಂಗ್ ಕೇಸ್ ದಾಖಲಿಸಲು ಮುಂದಾಗಿದ್ದರು. ಈ ನಡುವೆ ವೃದ್ಧೆಯ ಬಗ್ಗೆ ಹೊಳಲೂರಿನಿಂದ ಮಿಸ್ಸಿಂಗ್ ಕೇಸ್ ನೀಡಲು ಬಂದಿದ್ದ ಕುಟುಂಬಸ್ಥರು, ಜಯಮ್ಮ(62)ನ ಶವವನ್ನ ನೋಡಿ ಶಾಕ್ ಆಗಿದ್ದರು. ಬಳಿಕ ಮೃತಪಟ್ಟವರ ಕುರಿತು ಪೊಲೀಸರಿಗೆ ಗೊತ್ತಾಗುತ್ತದೆ. ನಂತರ ರಿಪ್ಪನಪೇಟೆ ಪೊಲೀಸರು ಈ ಕುರಿತು ತನಿಖೆ ಆರಂಭಿಸುತ್ತಾರೆ.

ಹೊಳಲೂರಿನಿಂದ ವೃದ್ಧೆಯು ಹೊಸನಗರ ತಾಲೂಕಿನ ಹುಂಚಕ್ಕೆ ಬಂದಿದ್ದು ಯಾಕೆ?. ಅಷ್ಟು ದೂರದಿಂದ ಬಂದು ವೃದ್ದೆಯ ಶವ ಕೆರೆಯಲ್ಲಿ ಎಸೆದಿದ್ದು ಯಾಕೆ, ಹೀಗೆ ಹತ್ತಾರು ಸಂಶಯಗಳೂ ಹುಟ್ಟಿಕೊಳ್ಳುತ್ತವೆ. ಈ ಹಿನ್ನಲೆ ರಿಪ್ಪನಪೇಟೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸುತ್ತಾರೆ. ವೃದ್ಧೆಯನ್ನು ಅವಳ ಊರಿನಿಂದ ಕೆರೆ ಬಳಿ ಕರೆತಂದು ಮರ್ಡರ್ ಮಾಡಿರುವುದು ತನಿಖೆಯಿಂದ ಗೊತ್ತಾಗುತ್ತದೆ.

ಇದನ್ನೂ ಓದಿ:ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

ತನಿಖೆ ಕೈಗೊಂಡ ಪೊಲೀಸರು

ಇನ್ನು ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿಪಿಐ ಗುರಣ್ಣ ಹೆಬ್ಬಾಳ್ ಹಾಗೂ ಪಿಎಸ್‌ಐ ನಿಂಗರಾಜ್ ಕೆ ವೈ ನೇತೃತ್ವದ ತಂಡವು ಕೊಲೆ ಪ್ರಕರಣ ಬೇಧಿಸಲು ಮುಂದಾಗಿತ್ತು. ಈ ವೃದ್ದೆಯ ಮಗಳು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ. ಇಬ್ಬರು ಮೊಮ್ಮಕ್ಕಳಿದ್ದಾರೆ. ಈ ಮೊಮ್ಕಕ್ಕಳಿಗಾಗಿ ವೃದ್ಧೆಯು ಒಂದಿಷ್ಟು ಹಣ ಮತ್ತು ಚಿನ್ನಾಭರಣ ಕೂಡಿಸಿಟ್ಟಿದ್ದಳು. ಅಜ್ಜಿಯು ಆಶ್ರಮ, ಆಸ್ಪತ್ರೆ, ಬಟ್ಟೆಯಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ಆಶ್ರಮದಲ್ಲಿ ಸೀತಮ್ಮ ಎನ್ನುವ ವೃದ್ಧೆಯ ಜೊತೆಗೆ ಕೆಲಸ ಮಾಡಿಕೊಂಡಿದ್ದಳು. ಇಬ್ವರ ನಡುವೆ ಉತ್ತಮ ಸ್ನೇಹವಿತ್ತು. ನಂತರ ಸೀತಮ್ಮಳ ಸಂಬಂಧಿ ಮಯೂರ ಎಂಬಾತ ಹೊಳಲೂರಿಗೆ ಬಂದು ಹೋಗುತ್ತಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಾರೆ.

ಹಂತಕರು ಅರೆಸ್ಟ್​

ಬಳಿಕ ಜಯಮ್ಮಳ ಪರಿಚಯ ಮಯೂರನಿಗೆ ಆಗಿ, ಜಯಮ್ಮಳ ಬಳಿ 80 ಸಾವಿರಕ್ಕೂ ಅಧಿಕ ಹಣ ಕೈ ಸಾಲ ಮಯೂರು ಪಡೆದಿರುವ ಮಾಹಿತಿ ದೊರೆಯುತ್ತದೆ. ಈತ ಪಡೆದ ಸಾಲವನ್ನು ವಾಪಸ್ ತಿರುಗಿಸಲು ವಿಳಂಬ ಮಾಡಿದ್ದನು. ವೃದ್ಧೆಯು ಪದೇ ಪದೇ ಹಣ ಕೇಳಿದಾಗ ಈತನಿಗೆ ಮಾನಸಿಕ ಕಿರುಕುಳವಾಗುತ್ತಿತ್ತು. ಈ ಹಿನ್ನಲೆ ಅಜ್ಜಿ ಬಳಿ ಇರುವ ಚಿನ್ನಾಭರಣ ಕಳ್ಳತನಕ್ಕೆ ಇತ ಪ್ಲಾನ್​ ಮಾಡಿದ್ದ. ಬಳಿಕ ರಿಪ್ಪನ್​ಪೇಟೆಯಲ್ಲಿ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಜಯಮ್ಮಳನ್ನು ನಂಬಿಸಿ, ಅಜ್ಜಿಗೆ ಮಾ. 16 ರಂದು ಹೊಳಲೂರಿನಿಂದ ಬಸ್ ಮುಖಾಂತರ ರಿಪ್ಪನಪೇಟೆಗೆ ಬರಲು ಹೇಳಿದ್ದ. ಹೀಗೆ ರಿಪ್ಪನಪೇಟೆಗೆ ಬಂದ ವೃದ್ಧೆಯನ್ನು ಮಯೂರು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ದಾರಿ ನಡುವೆ ಮುಂದಿನ ಸೀಟ್​ನಲ್ಲಿ ಕುಳಿತ ಅಜ್ಜಿಯನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:ಬೆಂಗಳೂರು: 12 ಗಂಟೆಗೂ ಅಧಿಕ ಕಾಲ ಮನೆಯಲ್ಲೇ ಶವ ಇಟ್ಟುಕೊಂಡು ವೃದ್ಧೆಯ ದೇಹವನ್ನ ತುಂಡರಿಸಿದ ಹಂತಕ, ಕೊಲೆ ಹಿಂದಿನ ಕಾರಣ ರಿವಿಲ್​

ಆದರೆ, ಅಜ್ಜಿಯ ಬಳಿ ಚಿನ್ನಾಭರಣ ಮತ್ತು ಹಣ ದೋಚುವ ಅವರ ಪ್ಲ್ಯಾನ್​ ಆ ದಿನ ಉಲ್ಟಾ ಆಗಿತ್ತು. ಹೌದು, ಅಜ್ಜಿಯು ಬರುವಾಗ ಚಿನ್ನಾಭರಣ ಮತ್ತು ಹಣ ತಂದಿರಲಿಲ್ಲ. ಮೈಮೇಲೆ ಅಲ್ಪಸ್ವಲ್ಪ ಚಿನ್ನಾಭರಣವಿತ್ತು. ಕೊಲೆ ಮಾಡಿದ ಬಳಿಕ ಇಬ್ಬರು ಸೇರಿ ಮೃತಪಟ್ಟ ವೃದ್ದೆಯ ಶವವನ್ನು ದೇಹಕ್ಕೆ ಕಲ್ಲು ಕಟ್ಟಿ ಮುತ್ತಿನಕೆರೆಗೆ ಹಾಕಿ ಇಬ್ಬರು ಎಸ್ಕೇಪ್ ಆಗಿದ್ದರು. ಆದ್ರೆ, ಸ್ವಲ್ಪ ದಿನದ ಬಳಿಕ ಅಜ್ಜಿಯ ಶವ ಮೇಲಕ್ಕೆ ಬಂದಿದೆ. ಹೀಗೆ ರಿಪ್ಪನಪೇಟೆ ಪೊಲೀಸರಿಗೆ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ. ಇನ್ನು ಮಯೂರ ಕೊಲೆ ಮಾಡಿದ ಬಳಿಕ ಗ್ರಾಮದಲ್ಲಿ ಮತ್ತು ಪೊಲೀಸರು ಜೊತೆಗೆ ಇದ್ದು ಹೈಡ್ರಾಮ ಮಾಡಿದ್ದನು. ದೃಶಂ ಚಿತ್ರದಂತೆ ಮಯೂರ ಎಲ್ಲ ನಾಟಕವಾಡಿದ್ದನು. ಇದೀಗ ರಿಪ್ಪನಪೇಟೆಯ ಪೊಲೀಸರು ಅಜ್ಜಿಯ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಹಂತಕರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ