ಗುರುಗ್ರಾಮ: ಗುರುಗ್ರಾಮದ ಸೈಬರ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಯಸಿಯ ಜೊತೆಗಿನ ಸಣ್ಣ ವಿವಾದದ ನಂತರ ಆಕೆಯ ಲಿವ್ ಇನ್ ಪಾರ್ಟನರ್ ಆಕೆಯ ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಆಕೆಯ 7 ವರ್ಷದ ಮಗ ಪ್ರೀತ್ ಸಾವನ್ನಪ್ಪಿದ್ದರೆ, 9 ವರ್ಷದ ಮಗನನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಪೊಲೀಸರು ಆ ಮಗುವಿನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಆರಂಭಿಸಿದ್ದಾರೆ.
ಏನಿದು ಘಟನೆ?:
ಪ್ರೀತಿ ಎಂಬ 26 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳಾದ ಮನು (9) ಮತ್ತು ಪ್ರೀತ್ (7) ಅವರೊಂದಿಗೆ ಒಂದು ವಾರದ ಹಿಂದೆ ಗುರುಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಪ್ರೀತಿಯ ಮೊದಲ ಗಂಡ ತೀರಿಕೊಂಡಿದ್ದ. ಅದಾದ ಬಳಿಕ ಆಕೆ ಕಳೆದ 2 ವರ್ಷಗಳಿಂದ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ವಿನಿತ್ ಚೌಧರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ಇದನ್ನೂ ಓದಿ: ಮರ್ಯಾದಾ ಹತ್ಯೆ; ಅಂತರ್ಜಾತಿ ವಿವಾಹವಾದ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಂದೆ
ಮೃತ ಪ್ರೀತ್ ಅವರ ಚಿಕ್ಕಪ್ಪಂದಿರಾದ ಬಬ್ಲು ಕುಮಾರ್ ಮತ್ತು ಜಿತೇಂದ್ರ ಕುಮಾರ್ ತಮ್ಮ ಸಹೋದರನ ಮರಣದ ನಂತರ, ಅವರ ಅತ್ತಿಗೆ ಗುರುಗ್ರಾಮದಲ್ಲಿ ವಾಸಿಸಲು ಪ್ರಾರಂಭಿಸಿದರು. ನಿನ್ನೆ ತಡರಾತ್ರಿ ತಮ್ಮ ಅತ್ತಿಗೆಯೊಂದಿಗೆ ವಾಸವಿದ್ದ ಯುವಕ (ವಿನೀತ್) ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಮಾಹಿತಿ ಸಿಕ್ಕಿದೆ. ಇದಾದ ಮೇಲೆ ಗುರುಗ್ರಾಮ ತಲುಪಿದಾಗ ದಾಳಿಯಲ್ಲಿ ಪ್ರೀತ್ ಸಾವನ್ನಪ್ಪಿರುವುದು ಗೊತ್ತಾಗಿದೆ. ಮಾನವ್ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಭಾನುವಾರ ತಡರಾತ್ರಿ ವಿನೀತ್ ಚೌಧರಿ ಕುಡಿದ ಅಮಲಿನಲ್ಲಿ ಪ್ರೀತಿಯ ಬಳಿ ಬಂದಿದ್ದಾನೆ. ಆಗ ಅವರ ನಡುವೆ ಏನೋ ಜಗಳವಾಗಿದೆ. ಇದಾದ ನಂತರ ವಿನೀತ್ 7 ವರ್ಷದ ಪ್ರೀತ್ನನ್ನು ಬಲವಂತವಾಗಿ ಎತ್ತಿಕೊಂಡು ಗೋಡೆಗೆ ಹೊಡೆದು ಕೊಂದಿದ್ದಾನೆ.
ಇದನ್ನೂ ಓದಿ: ಕಸದ ತೊಟ್ಟಿಯಲ್ಲಿತ್ತು ದೇಹದ ತುಂಡುಗಳು; ಕೊಲೆ ರಹಸ್ಯದ ಸುಳಿವು ನೀಡಿತ್ತು ಕಪ್ಪು ಮೀಸೆ!
ಅದೇ ಸಮಯಕ್ಕೆ ಮನುವನ್ನು ಎತ್ತಿ ನೆಲದ ಮೇಲೆ ಎಸೆದಿದ್ದಾನೆ. ಇದಾದ ನಂತರ ಪ್ರೀತಿ ಕೂಗಿಕೊಂಡು ಅಕ್ಕಪಕ್ಕದವರನ್ನು ಕರೆದಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಮನುನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕೊಲೆ ಆರೋಪಿ ವಿನೀತ್ ಚೌಧರಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಆರಂಭಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ