ಕಸದ ತೊಟ್ಟಿಯಲ್ಲಿತ್ತು ದೇಹದ ತುಂಡುಗಳು; ಕೊಲೆ ರಹಸ್ಯದ ಸುಳಿವು ನೀಡಿತ್ತು ಕಪ್ಪು ಮೀಸೆ!

ಕೊಲೆ ಮಾಡಿದವನು ಯಾವುದಾದರೂ ಒಂದಾದರೂ ಸುಳಿವನ್ನು ಬಿಟ್ಟು ಹೋಗಿರುತ್ತಾನೆ ಎಂಬುದು ಪೊಲೀಸರೆಲ್ಲರೂ ನಂಬುವ ಸತ್ಯ. ಕೊಂದವನು ಎಷ್ಟೇ ಚಾಲಾಕಿಯಾದರೂ ಒಂದಾದರೂ ಸಣ್ಣ ತಪ್ಪು ಮಾಡಿಯೇ ಇರುತ್ತಾನೆ. ಹೀಗಾಗಿ, ಕೊಲೆ ಅಥವಾ ಅಪರಾಧ ನಡೆದಾಗ ಆ ಜಾಗದಲ್ಲಿ ಸಿಗುವ ಸಣ್ಣ ಪುಟ್ಟ ವಸ್ತುಗಳು ಅಥವಾ ಸುಳಿವುಗಳು ಕೂಡ ಆ ಪ್ರಕರಣ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಒಂದು ಕೊಲೆಯ ಪ್ರಕರಣದ ರಹಸ್ಯ ಬಗೆಹರಿದಿದ್ದು ಹೇಗೆ? ಎಂಬ ವಿವರ ಇಲ್ಲಿದೆ.

ಕಸದ ತೊಟ್ಟಿಯಲ್ಲಿತ್ತು ದೇಹದ ತುಂಡುಗಳು; ಕೊಲೆ ರಹಸ್ಯದ ಸುಳಿವು ನೀಡಿತ್ತು ಕಪ್ಪು ಮೀಸೆ!
ಸಾಂದರ್ಭಿಕ ಚಿತ್ರ
Follow us
|

Updated on: Jul 04, 2024 | 8:23 PM

ಮುಂಬೈ: ಕೆಲವೊಮ್ಮೆ ಸರಳವಾದ ಸುಳಿವು ಕೂಡ ಪೊಲೀಸರಿಗೆ ಅತ್ಯಂತ ಭಯಾನಕ ಅಪರಾಧವನ್ನು ಭೇದಿಸಲು ಸಹಾಯ ಮಾಡುತ್ತದೆ. ಮಹಾರಾಷ್ಟ್ರದ ಮುಂಬೈನಲ್ಲಿ 14 ವರ್ಷಗಳ ಹಿಂದೆ ನಡೆದ ಅತ್ಯಂತ ಭೀಕರ ಕೊಲೆಯ ರಹಸ್ಯವನ್ನು ಭೇದಿಸಲು ಸಹಾಯ ಮಾಡಿದ್ದು ಬಣ್ಣ ಬಳಿದಿದ್ದ ಮೀಸೆ ಎಂದರೆ ಆಶ್ಚರ್ಯವಾಗದೇ ಇರಲು ಹೇಗೆ ಸಾಧ್ಯ? ಈ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

2010ರಲ್ಲಿ ಮುಂಬೈನಲ್ಲಿ ಕಸದ ತೊಟ್ಟಿಯಲ್ಲಿ ವ್ಯಕ್ತಿಯ ಕತ್ತರಿಸಿದ ತಲೆ ಪತ್ತೆಯಾಗಿತ್ತು. ಅದರಲ್ಲಿ ಹಣ್ಣಾಗಿದ್ದ ಮೀಸೆಗೆ ಬಣ್ಣ ಬಳಿದು ಕಪ್ಪು ಮಾಡಲಾಗಿತ್ತು. ಡೈ ಮಾಡಿದ್ದ ಆ ಮೀಸೆಯಿಂದಲೇ ಆ ಶವ ಯಾರದ್ದು ಎಂದು ಮುಂಬೈ ಪೊಲೀಸರು ಪತ್ತೆಹಚ್ಚಿದ್ದರು. ಈ ಘಟನೆ ಈಗಲೂ ಬಹಳ ನೆನಪಿನಲ್ಲಿ ಉಳಿಯುವಂಥದ್ದು. ಆ ಪೊಲೀಸರು ಅಪರಿಚಿತ ಶವದ ರಹಸ್ಯವನ್ನು ಭೇದಿಸಿದ್ದು ಹೇಗೆಂದು ಗೊತ್ತಾ?

2010ರ ಜುಲೈ 31ರಂದು ಮಳೆಗಾಲದ ಮುಂಜಾನೆ ಈ ಕೊಲೆ ಬೆಳಕಿಗೆ ಬಂದಿತ್ತು. ಜೆಸಿಬಿ ಆಪರೇಟರ್ ಒಬ್ಬರು ಕುರ್ಲಾ ಡಂಪಿಂಗ್ ಯಾರ್ಡ್‌ನಿಂದ ಕಸವನ್ನು ತೆಗೆದುಕೊಂಡು ಅದನ್ನು ಡಿಯೋನಾರ್ ಡಂಪಿಂಗ್ ಗ್ರೌಂಡ್‌ಗೆ ಸಾಗಿಸಲು ಡಂಪರ್‌ಗಳಿಗೆ ಸಾಗಿಸುತ್ತಿದ್ದರು. ಅಲ್ಲಿ ಚಿಂದಿ ಆಯುತ್ತಿದ್ದ ಮಹಿಳೆಯರಲ್ಲಿ ಒಬ್ಬಳು ಇದ್ದಕ್ಕಿದ್ದ ಹಾಗೆ ಜೋರಾಗಿ ಕೂಗಿ ಜೆಸಿಬಿ ಆಪರೇಟರ್​ಗೆ ಕಸದಲ್ಲಿ ಏನೋ ಕಂಡಿತು ಎಂದು ಹೇಳಿದಳು. ಜೆಸಿಬಿ ಆಪರೇಟರ್ ತನ್ನ ಕೆಲಸವನ್ನು ನಿಲ್ಲಿಸಿ ಹತ್ತಿರದಿಂದ ನೋಡಲು ಹೋದಾಗ ಅಲ್ಲಿ ಕಸದ ಮಧ್ಯೆ ನೀಲಿ ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ವ್ಯಕ್ತಿಯ ಕೈ ನೇತಾಡುತ್ತಿತ್ತು.

ಇದನ್ನೂ ಓದಿ: Shocking News: ಬೃಹತ್ ಹೆಬ್ಬಾವಿನ ಬಾಯೊಳಗೆ ಪ್ರೇಯಸಿಯ ಕಾಲು ನೋಡಿ ಪ್ರೇಮಿ ಶಾಕ್

ಕೂಡಲೇ ಈ ಬಗ್ಗೆ ಕುರ್ಲಾ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಕತ್ತರಿಸಿದ ಕೈಯನ್ನು ಹೊರತೆಗೆದ ನಂತರ ಇಡೀ ಡಂಪಿಂಗ್ ಯಾರ್ಡ್ ಅನ್ನು ಹುಡುಕಿದರು. ಅಲ್ಲಿ ಮತ್ತೊಂದು ಕೈ, ಎರಡು ಕಾಲುಗಳು ಮತ್ತು ವ್ಯಕ್ತಿಯ ಕತ್ತರಿಸಿದ ತಲೆ ಸಿಕ್ಕಿತು. ಆಗಿನ ಕಾಲಕ್ಕೆ ಇದು ದೇಶಾದ್ಯಂತ ಬಹಳ ಸಂಚಲನ ಮೂಡಿಸಿದ್ದ ಕೊಲೆಯಾಗಿತ್ತು. ಈ ಭಯಾನಕ ಕೊಲೆ ಮಾಡಿದ ಕೊಲೆಗಾರನನ್ನು ಹುಡುಕಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಯಿತು.

ಈ ಕೊಲೆಯ ರಹಸ್ಯ ಭೇದಿಸಿದ್ದು ಹೇಗೆಂಬುದರ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್​ ವಿವರವಾದ ಲೇಖನ ಪ್ರಕಟಿಸಿದೆ. ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಆ ಹೆಣದ ಮೇಲಿನ ಅರ್ಧ ಭಾಗ ಮಾತ್ರ ಪತ್ತೆಯಾಗಿತ್ತು. ಮುಂಡ ಎಲ್ಲೂ ಸಿಕ್ಕಿರಲಿಲ್ಲ. ಎಲ್ಲ ಕಡೆ ವಿಚಾರಿಸಿದರೂ ಆ ಕೊಲೆಯಾದ ವ್ಯಕ್ತಿ ಯಾರೆಮಬ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಯಾರಾದರೂ ಕಾಣೆಯಾದವರ ದೂರನ್ನು ದಾಖಲಿಸಿದ್ದಾರೆಯೇ ಎಂದು ಪರಿಶೀಲಿಸಲು ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮೃತರ ಫೋಟೋವನ್ನು ಪ್ರಸಾರ ಮಾಡಿದರು. ಆದರೆ ಇದು ಕೂಡ ಫಲಕಾರಿಯಾಗಲಿಲ್ಲ. ಹೀಗಾಗಿ, ಈ ಕೊಲೆ ಕೇಸ್ ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.

ಇದೇ ವೇಳೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಕಸದ ಡಂಪಿಂಗ್ ಯಾರ್ಡ್ ನಲ್ಲಿ ಪತ್ತೆಯಾದ ದೇಹದ ಭಾಗಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆಗ ತನಿಖಾಧಿಕಾರಿಯೊಬ್ಬರಿಗೆ ಮಹತ್ವದ ಸುಳಿವು ಸಿಕ್ಕಿತು. ಸತ್ತವನ ಮುಖದಲ್ಲಿ ಅಲ್ಲಲ್ಲಿ ಕಾಣಿಸುತ್ತಿದ್ದ ಗಡ್ಡದ ಕೂದಲು ಬಿಳಿಯಾಗಿತ್ತು. ಆದರೆ ಆತನ ಮೀಸೆ ಕಪ್ಪು ಬಣ್ಣದಲ್ಲಿಯೇ ಇತ್ತು. ಆತ ಇತ್ತೀಚೆಗಷ್ಟೇ ಕ್ಲೀನ್ ಶೇವ್ ಮಾಡಿ ಮೀಸೆಗೆ ಬಣ್ಣ ಹಾಕಿಸಿಕೊಂಡಿದ್ದ ಎಂದು ದೃಢವಾಯಿತು.

ಇದನ್ನೂ ಓದಿ: Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್​ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ

ಇದನ್ನೇ ಪ್ರಮುಖ ಸುಳಿವೆಂದು ಪರಿಗಣಿಸಿದ ಕ್ರೈಂ ಬ್ರಾಂಚ್ ಪೊಲೀಸ್ ತಂಡವು ಆ ಪ್ರದೇಶದ ಎಲ್ಲಾ ಸಲೂನ್‌ಗಳ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿತು. 3 ದಿನಗಳ ಕಾಲ ಹತ್ತಾರು ಸಲೂನ್‌ಗಳನ್ನು ಪರಿಶೀಲಿಸಿದ ನಂತರ ಕುರ್ಲಾದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಕಮ್ರುದ್ದೀನ್ ಫೋಟೋ ಎಂದು ಗುರುತಿಸಿದ್ದಾರೆ. 35 ವರ್ಷದ ವ್ಯಕ್ತಿ ಈ ಸಲೂನ್‌ನಲ್ಲಿ ಗಡ್ಡ ಬೋಳಿಸಿಕೊಂಡು ಮೀಸೆಗೆ ಬಣ್ಣ ಬಳಿದಿದ್ದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಮ್ರುದ್ದೀನ್ ಧಾರಾವಿಯ ಸೋಷಿಯಲ್ ನಗರದ ಕೊಠಡಿಯೊಂದರಲ್ಲಿ ತಂಗಿದ್ದಾನೆ ಎಂದು ಸಲೂನ್ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕ್ರೈಂ ಬ್ರಾಂಚ್ ತಂಡವು ತಕ್ಷಣ ಅವರು ನೀಡಿದ ವಿಳಾಸಕ್ಕೆ ಹೋದಾಗ ಆ ಕೋಣೆಯಲ್ಲಿ ಇಬ್ಬರು ಜನರಿದ್ದರು. ಅವರನ್ನು ವಿಚಾರಿಸಿದಾಗ ಅಲ್ಲಿ ತಾವಿಬ್ಬರೇ ಇರುವುದು ಎಂದು ಹೇಳಿದ್ದರು. ಹಾಗೇ, ಆ ಕೊಲೆಯಾದ ವ್ಯಕ್ತಿ ಯಾರೆಂದು ತಮಗೆ ಗೊತ್ತೇ ಇಲ್ಲ ಎಂದಿದ್ದರು.

ಆದರೆ ಆ ಕೊಠಡಿಯಲ್ಲಿ ಹೊಸ ಕಾರ್ಪೆಟ್ ಹಾಕಿರುವುದನ್ನು ಅಧಿಕಾರಿಯೊಬ್ಬರು ಗಮನಿಸಿದರು. ಅವನು ಅದನ್ನು ಎಳೆದು ನೋಡಿದಾಗ ಸ್ವಲ್ಪ ದುರ್ವಾಸನೆ ಹರಡಿತು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಕೊಠಡಿಯನ್ನು ಶೋಧಿಸಿದ್ದಾರೆ. ಅವರು ನೀರಿನ ಡ್ರಮ್ ಅನ್ನು ಪಕ್ಕಕ್ಕೆ ತಳ್ಳಿದಾಗ, ಅಲ್ಲಿ ರಕ್ತದ ಕಲೆಗಳಿತ್ತು. ರಕ್ತದ ಕಲೆ ಕಾಣಬಾರದು ಎಂದು ಆ ರೂಮಿನಲ್ಲಿ ಹೊಸ ಕಾರ್ಪೆಟ್ ಹಾಕಲಾಗಿತ್ತು. ಇದಾದ ಬಳಿಕ ಕ್ರೈಂ ಬ್ರಾಂಚ್ ಅಧಿಕಾರಿಗಳು ಹುಡುಕಾಟವನ್ನು ತೀವ್ರಗೊಳಿಸಿದರು. ಬಳಿಕ ಆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.

ಕೊಲೆಯಾದ ಕಮ್ರುದ್ದೀನ್ ಮೊಹಮ್ಮದ್ ಫಿರೋಜ್ ಅನ್ವರ್ ಶೇಖ್ ಮತ್ತು ಖುರ್ಷಿದ್ ಆಲಂ ಶೇಖ್ ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಮೂವರೂ ಬಿಹಾರ ಮೂಲದವರಾಗಿದ್ದು, ಕೆಲಸದ ನಿಮಿತ್ತ ಮುಂಬೈಗೆ ವಲಸೆ ಬಂದಿದ್ದರು. ಕಮ್ರುದ್ದೀನ್ ಸಿನಿಮಾ ಶೂಟಿಂಗ್ ಸೆಟ್‌ಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಕೆಲಸದಲ್ಲಿ ದೊಡ್ಡ ನಟರನ್ನು ನೋಡಿ ಹೆಮ್ಮೆಪಡುತ್ತಿದ್ದ. ಕಮ್ರುದ್ದೀನ್‌ಗೆ ಹಣದ ಕೊರತೆ ಎದುರಾದಾಗಲೆಲ್ಲಾ ಆತ ಮೊಹಮ್ಮದ್‌ನಿಂದ ಸಾಲ ಪಡೆಯುತ್ತಿದ್ದ. ಒಮ್ಮೆ ಕಮ್ರುದ್ದೀನ್ ಮೊಹಮ್ಮದ್‌ನ ಮೊಬೈಲ್ ಫೋನ್ ಕದ್ದಿದ್ದ. ಫೋನ್‌ನಲ್ಲಿ ಅವನ ತಾಯಿ, ಸಹೋದರಿ ಮತ್ತು ಸಂಬಂಧಿಕರ ಚಿತ್ರಗಳಿತ್ತು. ಮುಂಬೈನಲ್ಲಿ ತಾನು ಒಂಟಿತನ ಅನುಭವಿಸಿದಾಗ, ಅವನು ತನ್ನ ಕುಟುಂಬದ ಚಿತ್ರಗಳನ್ನು ನೋಡುತ್ತಿದ್ದೆ. ಆದರೆ, ಕಮ್ರುದ್ದೀನ್ ನನ್ನ ಮೊಬೈಲ್ ಫೋನ್ ಹಿಂತಿರುಗಿಸದಿದ್ದಕ್ಕಾಗಿ ಕೋಪ ಬಂದಿತ್ತು. ಆದ್ದರಿಂದಲೇ ಕೊಲೆ ಮಾಡಿದ್ದಾಗಿ ಮೊಹಮ್ಮದ್ ಹೇಳಿದ್ದರು. ರಾತ್ರಿ ಮಲಗಿದ್ದ ಕಮ್ರುದ್ದೀನ್ ನಿದ್ದೆಯಲ್ಲಿದ್ದಾಗ ಮೊಹಮ್ಮದ್ ಕತ್ತಿಯಿಂದ ಆತನ ಶಿರಚ್ಛೇದ ಮಾಡಿದ್ದ. ಮೊಹಮ್ಮದ್ ಮತ್ತು ಖುರ್ಷಿದ್ ಇಬ್ಬರೂ ಸೇರಿ ಕಮ್ರುದ್ದೀನ್​ನ ದೇಹವನ್ನು 6 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಕಸದ ರಾಶಿಗೆ ಬಿಸಾಡಿದ್ದರು. ಮುಂಡವನ್ನು ಬೇರೆಡೆ ಕಸದ ರಾಶಿಗೆ ಹಾಕಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ