ಮಹಿಳೆಗೆ ಮಂಪರು ಔಷಧ ನೀಡಿ, ಸಹಚರನ ಜತೆ ಸೇರಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ ಅತ್ಯಾಚಾರ
ಮಹಿಳೆಯೊಬ್ಬರಿಗೆ ಮಂಪರು ಬರುವ ಔಷಧ ನೀಡಿ ರಿಯಲ್ ಎಸ್ಟೇಟ್ ಉದ್ಯಮಿ ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮಂಪರು ಬರುವ ಔಷಧ ನೀಡಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತನ್ನ ಸಹಚರನ ಜತೆ ಸೇರಿ ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಆರೋಪಿಗಳಾದ ಜನಾರ್ಧನ್ ಮತ್ತು ಸಂಗ ರೆಡ್ಡಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಮಿಯಾಪುರಕ್ಕೆ ಹೋಗಿದ್ದೆ, ಅಲ್ಲಿ ಜಾಗದ ವಿಚಾರವಾಗಿ ಯಾದಗಿರಿಗುಟ್ಟಕ್ಕೆ ಹೋಗಲು ಇಬ್ಬರು ವ್ಯಕ್ತಿಗಳು ನನ್ನನ್ನು ಕರೆದುಕೊಂಡು ಹೋಗಿದ್ದರು. ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿ ಹಿಂದಿರುಗುವಾಗ, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಿಲ್ಲಿಸಿದರು. ಕಾರು ಕೆಟ್ಟುಹೋಗಿದೆ ಎಂದು ಅವರು ಹೇಳಿದರು.
ಇಬ್ಬರು ಆಕೆಗೆ ಊಟ ಕೊಟ್ಟಿದ್ದರು ಆದರೆ ಆಕೆ ಅದನ್ನು ನಿರಾಕರಿಸಿದ್ದರು, ಬಳಿಕ ಕುಡಿಯಲು ತಂಪು ಪಾನೀಯವನ್ನು ಕೊಟ್ಟಿದ್ದರು, ಅದನ್ನು ಕುಡಿಯುವಂತೆ ಮನವೊಲಿಸಿದರು ಕುಡಿದ ಬಳಿಕ ತಲೆ ತಿರುಗಲು ಶುರುವಾಗಿತ್ತು.
ಮತ್ತಷ್ಟು ಓದಿ: ತನ್ನ ಅಂಗಡಿಯಲ್ಲಿ ದಿನಸಿ ಖರೀದಿಸದ ಗ್ರಾಹಕನಿಗೆ ಚಾಕುವಿನಿಂದ ಇರಿದು ಕೊಂದ ಮಾಲೀಕ
ಇದೇ ಸಮಯವನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳು ಕಾರಿನಲ್ಲಿ ಆಕೆಯನ್ನು ವಿವಸ್ತ್ರಗೊಳಿಸಿ ಬೆಳಗಿನ ಜಾವದವರೆಗೂ ಆತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಗೆ ಥಳಿಸಿದ್ದಾರೆ. ಇದಾದ ಬಳಿಕ ಆಕೆಯನ್ನು ಮಿಯಾಪುರ ಹಾಸ್ಟೆಲ್ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ