Kirodi Lal Meena Resigns: ರಾಜಸ್ಥಾನ ರಾಜಕೀಯದಲ್ಲಿ ಭಾರಿ ಸಂಚಲನ, ಕೃಷಿ ಸಚಿವ ಕಿರೋಡಿಲಾಲ್​ ಮೀನಾ ರಾಜೀನಾಮೆ

ರಾಜಸ್ಥಾನದ ಭಜನ್‌ಲಾಲ್ ಶರ್ಮಾ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಸಂಪುಟದ ಹಿರಿಯ ಸದಸ್ಯ ಡಾ.ಕಿರೋರಿ ಲಾಲ್ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಸಿಎಂ ಭಜನಲಾಲ್ ಶರ್ಮಾ ಅವರಿಗೆ ಕಳುಹಿಸಿದ್ದಾರೆ. ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬರುವ ಮೊದಲು, ಕಿರೋರಿ ಲಾಲ್ ಮೀನಾ ಅವರು ತಮ್ಮ ಪ್ರಭಾವದ ಪ್ರದೇಶದಲ್ಲಿ ಯಾವುದೇ ಸ್ಥಾನವನ್ನು ಕಳೆದುಕೊಂಡರೆ, ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

Kirodi Lal Meena Resigns: ರಾಜಸ್ಥಾನ ರಾಜಕೀಯದಲ್ಲಿ ಭಾರಿ ಸಂಚಲನ, ಕೃಷಿ ಸಚಿವ ಕಿರೋಡಿಲಾಲ್​ ಮೀನಾ ರಾಜೀನಾಮೆ
ಕಿರೋಡಿಲಾಲ್ ಮೀನಾ
Follow us
ನಯನಾ ರಾಜೀವ್
| Updated By: ಡಾ. ಭಾಸ್ಕರ ಹೆಗಡೆ

Updated on:Jul 04, 2024 | 12:25 PM

ರಾಜಸ್ಥಾನದ ರಾಜಕೀಯ(Rajasthan Politics)ದಲ್ಲಿನ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕ್ಯಾಬಿನೆಟ್ ಸಚಿವ ಡಾ.ಕಿರೋಡಿಲಾಲ್ ಮೀನಾ(Kirodi Lal Meena) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆ ಚುನಾವಣೆಯ ನಂತರ, ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದವು. ಇದೀಗ ಮೀನಾ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಭಜನ್ ಲಾಲ್ ಅವರಿಗೆ ಕಳುಹಿಸಿದ್ದಾರೆ. ಚುನಾವಣಾ ಫಲಿತಾಂಶ ಬಂದ ಒಂದು ತಿಂಗಳ ನಂತರ ಅವರು ರಾಜೀನಾಮೆ ನೀಡಿದ್ದಾರೆ.

ಪೂರ್ವ ರಾಜಸ್ಥಾನಕ್ಕೆ ಸೇರಿದ ಮೀನಾ ಸಮುದಾಯದ ಹಿರಿಯ ನಾಯಕರಲ್ಲಿ ಡಾ. ಕಿರೋಡಿಲಾಲ್ ಮೀನಾ ಕೂಡ ಪ್ರಮುಖರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಚನೆಯಾದ ಬಿಜೆಪಿಯ ಭಜನ್ ಲಾಲ್ ಸರ್ಕಾರದಲ್ಲಿ ಅವರನ್ನು ಕೃಷಿ ಸಚಿವರನ್ನಾಗಿ ಮಾಡಲಾಯಿತು. ಆದರೆ, ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ತಮ್ಮ ಉಸ್ತುವಾರಿಯಲ್ಲಿರುವ ಏಳು ಸ್ಥಾನಗಳಲ್ಲಿ ಒಂದಾದರೂ ಬಿಜೆಪಿ ಸೋತರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯದ ದೌಸಾ, ಟೋಂಕ್-ಸವಾಯಿ ಮಾಧೋಪುರ್, ಭರತ್‌ಪುರ, ಭಿಲ್ವಾರಾ, ಕೋಟಾ-ಬುಂಡಿ, ಕರೌಲಿ-ಧೋಲ್‌ಪುರ್ ಮತ್ತು ಜೈಪುರ ಗ್ರಾಮಾಂತರ ಕ್ಷೇತ್ರಗಳು ಬಿಜೆಪಿ ನಾಯಕ ಕಿರೋಡಿ ಅವರ ಉಸ್ತುವಾರಿಯಲ್ಲಿದ್ದವು.

ಕಳೆದ ತಿಂಗಳು ಪ್ರಕಟವಾದ ಲೋಕಸಭೆಯ ಫಲಿತಾಂಶದಲ್ಲಿ ಬಿಜೆಪಿ 7 ರಲ್ಲಿ 4 ಸ್ಥಾನಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜೈಪುರ ಗ್ರಾಮಾಂತರ ಸಂಸದೀಯ ಸ್ಥಾನವನ್ನು ಬಿಜೆಪಿ ಕಠಿಣ ಹೋರಾಟದ ನಂತರ ಗೆಲ್ಲಲು ಸಾಧ್ಯವಾಯಿತು.

ಕಿರೋಡಿ ಲಾಲ್​ ಮೀನಾ ಎರಡು ಬಾರಿ ಸಂಸದರಾಗಿದ್ದರು. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಸವಾಯಿ ಮಾಧೋಪುರದಿಂದ ಕಣಕ್ಕಿಳಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:44 am, Thu, 4 July 24