ಪ್ರೇಯಸಿಯನ್ನು ಗುಟ್ಟಾಗಿ ಭೇಟಿಯಾಗಲು ಹೋಗಿದ್ದ ಯುವಕನನ್ನು ಹಿಡಿದು ತಾಳಿ ಕಟ್ಟಿಸಿದ ಜನರು
ಗುಟ್ಟಾಗಿ ಪ್ರೇಯಸಿಯನ್ನು ಭೇಟಿಯಾಗಲು ಹೋಗಿದ್ದ ಯುವಕನನ್ನು ಹಿಡಿದು ಮದುವೆ ಮಾಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಗೆಳತಿಯನ್ನು ರಹಸ್ಯವಾಗಿ ಭೇಟಿಯಾಗಲು ಹೋಗಿದ್ದ ಯುವಕನಿಗೆ ಕುಟುಂಬದವರೇ ಮದುವೆ ಮಾಡಿದ್ದಾರೆ.
ಪ್ರೇಯಸಿಯನ್ನು ಭೇಟಿಯಾಗಲು ಗುಟ್ಟಾಗಿ ಹೋಗಿದ್ದ ಯುವಕನನ್ನು ಕುಟುಂಬದವರು ಹಿಡಿದು ತಾಳಿ ಕಟ್ಟಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಗಯಾದಲ್ಲಿ ಯುವಕ ರಹಸ್ಯವಾಗಿ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ, ಅದನ್ನು ಊರ ಜನರು ಕಂಡಿದ್ದರು. ತಕ್ಷಣವೇ ಅವರನ್ನು ಹಿಡಿದು ಮದುವೆ ಮಾಡಿದ್ದಾರೆ.
ಯುವಕನಿಂದ ಆಕೆಗೆ ತಾಳಿಯನ್ನೂ ಕಟ್ಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿ ರಹಸ್ಯವಾಗಿಯೇ ಭೇಟಿಯಾಗುತ್ತಿದ್ದರು. ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು.
ಗೆಳತಿ ಕರೆ ಮಾಡಿದ್ದಳೆಂದು ಗಯಾ ಜಿಲ್ಲೆಯ ಬಂಕೆ ಬಜಾರ್ನಲ್ಲಿರುವ ಯುವಕ ಭೇಟಿಯಾಗಲು ಹೋಗಿದ್ದ, ಈ ವಿಚಾರ ಕುಟುಂಬದ ಸದಸ್ಯರಿಗೂ ತಿಳಿದಿತ್ತು.
ಮತ್ತಷ್ಟು ಓದಿ: Viral: ಎರಡನೇ ಮಗುವಿನ ಬಯಕೆ, ಪತಿಗೆ ಮೂರನೇ ಮದುವೆ ಮಾಡಿಸಿದ ಮುದ್ದಿನ ಮಡದಿಯರು
ಬಂಕೆಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಜುರಿಯಾ ಗ್ರಾಮದ ನಿವಾಸಿ ಪೂಜಾ ಕುಮಾರಿ ಹಾಗೂ ರೋಶನಗಂಜ್ ಗ್ರಾಮದ ಸಂತನ್ ಕುಮಾರ್ ನಡುವೆ ಕಳೆದ ಎರಡು ವರ್ಷಗಳಿಂದ ಪ್ರೇಮವಿತ್ತು.
ಕುಟುಂಬಸ್ಥರು ಇಬ್ಬರನ್ನೂ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಗ್ರಾಮದ ಬಳಿಯ ಬಂಕೆಧಾಮ ದೇವಸ್ಥಾನದಲ್ಲಿ ಕುಟುಂಬಸ್ಥರು ವಿವಾಹ ನೆರವೇರಿಸಿದರು.
ಪ್ರೇಮಿಗಳಿಬ್ಬರೂ ದೂರದ ಸಂಬಂಧಿಗಳು. ಮೊದಲು ಸ್ನೇಹಿತರಾದ ಅವರು ಕ್ರಮೇಣ ಪ್ರೀತಿಗೆ ತಿರುಗಿದರು. ಕುಟುಂಬ ಸದಸ್ಯರು ದೇವಾಲಯದಲ್ಲಿ ಹಾಜರಿದ್ದರು, ಬಳಿಕ ಪರಸ್ಪರರ ಒಪ್ಪಿಗೆ ಮೇರೆಯೇ ಮದುವೆ ಮಾಡಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ