Viral: ಎರಡನೇ ಮಗುವಿನ ಬಯಕೆ, ಪತಿಗೆ ಮೂರನೇ ಮದುವೆ ಮಾಡಿಸಿದ ಮುದ್ದಿನ ಮಡದಿಯರು

ಹೆಣ್ಣು ಮಕ್ಕಳಿಗೆ ತಮ್ಮ ಪತಿ ಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡಿದ್ರೂ ಸಿಕ್ಕಾಪಟ್ಟೆ ಕೋಪ ಬರುತ್ತೆ. ಇನ್ನೂ ಪತಿ ಎರಡನೇ ಮದುವೆ ಆಗ್ತಾನೆ ಅಂದ್ರೆ ಆತನ ಕಥೆ ಮುಗಿಯಿತೆಂದೆ ಅರ್ಥ. ಅಂತದ್ರಲ್ಲಿ ಇಲ್ಲಿಬ್ಬರು ಪತ್ನಿಯರು ತಮ್ಮ ಪತಿಯ ಮನದಾಸೆಯನ್ನು ಈಡೇರಿಸಿಲು ಆತನಿಗೆ ಅದ್ಧೂರಿಯಾಗಿ ಮೂರನೆ ಮದುವೆಯನ್ನು ಮಾಡಿಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಎರಡನೇ ಮಗುವಿನ ಬಯಕೆ, ಪತಿಗೆ ಮೂರನೇ ಮದುವೆ ಮಾಡಿಸಿದ ಮುದ್ದಿನ ಮಡದಿಯರು
ವೈರಲ್​​​ ಫೋಸ್ಟ್​​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 01, 2024 | 2:20 PM

ಮಹಿಳೆಯರು ತಮ್ಮ ಪತಿ ಬಗ್ಗೆ ಹೆಚ್ಚು ಪೊಸೆಸಿವ್‌ ಆಗಿರುತ್ತಾರೆ. ತನ್ನ ಪತಿ ತನಗೆ ಮಾತ್ರ ಸ್ವಂತವಾಗಿರಬೇಕು ಎಂದು ಪ್ರತಿಯೊಬ್ಬ ಪತ್ನಿಯೂ ಬಯಸುತ್ತಾಳೆ. ಎಷ್ಟೇ ಸಮಸ್ಯೆ ಎದುರಾಗಲಿ, ಏನೇ ಕಷ್ಟಗಳು ಬರಲಿ ಪತಿ ತನ್ನ ಜೊತೆಗೆಯೇ ಇರಬೇಕೆಂದು ಬಯಸುವ ಪ್ರತಿಯೊಬ್ಬ ಹೆಣ್ಣೂ ತಮ್ಮ ಗಂಡನನ್ನು ಬೇರೊಬ್ಬ ಮಹಿಳೆಯ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪತಿಯ ಬಯಕೆಯನ್ನು ಈಡೇರಿಸಲು ಪತ್ನಿಯರಿಬ್ಬರು ಸೇರಿ ಆತನಿಗೆ ಮೂರನೇ ಮದುವೆಯನ್ನು ಮಾಡಿಸಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಆಂಧ್ರ ಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಎರಡನೇ ಮಗು ಬೇಕು ಎಂಬ ಗಂಡನ ಬಯಕೆಯನ್ನು ಈಡೇರಿಸಲು ಪತ್ನಿರಿಬ್ಬರು ಸೇರಿ ತಮ್ಮ ಪತಿಗೆ ಮೂರನೇ ಮದುವೆಯನ್ನು ಮಾಡಿಸಿದ್ದಾರೆ. ಪಾಂಡಣ್ಣ ಎಂಬವರು 2000 ನೇ ಇಸವಿಯಲ್ಲಿ ಪಾರ್ವತಮ್ಮ ಎಂಬವರನ್ನು ವಿವಾಹವಾಗಿದ್ದರು. ಆದರೆ ಅವರಿಗೆ ಮಕ್ಕಳಾಗದ ಕಾರಣ 2005 ರಲ್ಲಿ ಪಾಂಡಣ್ಣ ಅಪ್ಪಳಮ್ಮ ಎಂಬವರನ್ನು ಎರಡನೇ ಮದುವೆಯಾದರು. ಬಳಿಕ ಈ ದಂಪತಿಗೆ 2007 ರಲ್ಲಿ ಗಂಡು ಮಗು ಜನಿಸುತ್ತದೆ. ಆದರೆ ಇದೀಗ ಪಾಂಡಣ್ಣ ತನಗೆ ಎರಡನೇ ಮಗು ಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದು, ಪತಿಯ ಈ ಮನದಾಸೆಯನ್ನು ಈಡೇರಿಸಲು ಪತ್ನಿಯರಿಬ್ಬರು ಸೇರಿ ಪಾಂಡಣ್ಣನಿಗೆ ಮೂರನೇ ಮದುವೆ ಮಾಡಿಸಿದ್ದಾರೆ.

TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಫೋಟೋದಲ್ಲಿ ತಮ್ಮ ಪತಿಯ ಮದುವೆಗೆ ಪತ್ನಿಯರಿಬ್ಬರು ಶುಭ ಕೋರಿದ ಫೋಟೊ ಹಾಗೂ ಮದುವೆ ಆಮಂತ್ರಣದ ಫೋಟೊವನ್ನು ಕಾಣಬಹುದು.

ಇದನ್ನೂ ಓದಿ: ಮನೆಯೊಳಗೆ ಬಂದು ಹಾಯಾಗಿ ಕುಳಿತು ಧಾರಾವಾಹಿ ವೀಕ್ಷಿಸಿದ ಹಾವು; ಇದು ಸೀರಿಯಲ್‌ ಎಫೆಕ್ಟ್‌

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇನ್ನೂ ಮೂರನೇ ಮಗು ಬೇಕೆಂದರೆ ಈ ಮೂವರು ಸೇರಿ ತಮ್ಮ ಪತಿಗೆ ನಾಲ್ಕನೇ ಮದುವೆ ಮಾಡಿಸಬಹುದೇ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:12 pm, Mon, 1 July 24

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ