ತನ್ನ ಅಂಗಡಿಯಲ್ಲಿ ದಿನಸಿ ಖರೀದಿಸದ ಗ್ರಾಹಕನಿಗೆ ಚಾಕುವಿನಿಂದ ಇರಿದು ಕೊಂದ ಮಾಲೀಕ
ದೆಹಲಿಯ ಅಂಗಡಿಯ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ದಿನಸಿ ಖರೀದಿಸದ ವ್ಯಕ್ತಿಯನ್ನು ಕಬ್ಬಿಣದ ರಾಡ್ನಿಂದು ಹೊಡೆದು, ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ನವದೆಹಲಿ: ವಾಯುವ್ಯ ದೆಹಲಿಯ ಶಕುರ್‌ಪುರದಲ್ಲಿ ತಮ್ಮ ಅಂಗಡಿಯಿಂದ ದಿನಸಿಯನ್ನು ಖರೀದಿಸಲಿಲ್ಲ ಎಂಬ ಕಾರಣಕ್ಕೆ 30 ವರ್ಷದ ವ್ಯಕ್ತಿಯೊಬ್ಬನಿಗೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕಿರಾಣಿ ಅಂಗಡಿ ಮಾಲೀಕರು ಮತ್ತು ಅವರ ಪುತ್ರರು ಗ್ರಾಹಕನನ್ನು ಕೊಲೆ ಮಾಡಿದ್ದಾರೆ ಇರಿದಿದ್ದಾರೆ.
ಪೊಲೀಸರ ಪ್ರಕಾರ, ಜೂನ್ 30ರಂದು ಈ ಘಟನೆ ನಡೆದಿದ್ದು, ಮೃತನನ್ನು ವಿಕ್ರಮ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಲೋಕೇಶ್ ಗುಪ್ತಾ ಮತ್ತು ಅವರ ಇಬ್ಬರು ಮಕ್ಕಳಾದ ಪ್ರಿಯಾಂಶ್ ಮತ್ತು ಹರ್ಷ್ ಅವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದ್ದರು.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ನಡೆಸಿ 13 ವರ್ಷದ ಬಾಲಕಿಯ ಕೊಲೆ; ಹರಿದ್ವಾರ ಹೆದ್ದಾರಿಯಲ್ಲಿ ಶವ ಪತ್ತೆ
ಲೋಕೇಶ್ ಗುಪ್ತಾ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ವಿಕ್ರಮ್ ಅವರ ಕುಟುಂಬದವರು ಗುಪ್ತಾರ ಅಂಗಡಿಯಲ್ಲೇ ದಿನಸಿ ಖರೀದಿಸುತ್ತಿದ್ದರು. ಅವರು ಗುಪ್ತಾರ ಹಳೆಯ ಸಾಮಾನ್ಯ ಗ್ರಾಹಕರಾಗಿದ್ದರು. ಸುಮಾರು 1 ತಿಂಗಳ ಹಿಂದೆ, ಕುಟುಂಬದವರ ನಡುವೆ ಕೆಲವು ಸಮಸ್ಯೆಗಳಿಂದಾಗಿ ಗುಪ್ತಾ ಅವರ ಅಂಗಡಿಯಿಂದ ಆಹಾರ ಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸಿದರು. ಇದು ಅವರನ್ನು ಕೆರಳಿಸಿತು.
ಇದನ್ನೂ ಓದಿ: Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ
ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಅವರ ನಡುವೆ ಜಗಳ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಜಗಳದ ವೇಳೆ ಗುಪ್ತಾ ಮತ್ತು ಅವರ ಮಕ್ಕಳು ವಿಕ್ರಮ್ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕುತ್ತಿಗೆಗೆ ಇರಿದಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ