Nagesh Karale: ಪುಣೆಯಲ್ಲಿ ಕುಸ್ತಿಪಟುವಿನ ಬರ್ಬರ ಹತ್ಯೆ; ವಿಡಿಯೋದಲ್ಲಿ ಸೆರೆಯಾಯ್ತು ಕೊಲೆಯ ದೃಶ್ಯ

| Updated By: ಸುಷ್ಮಾ ಚಕ್ರೆ

Updated on: Dec 24, 2021 | 4:20 PM

Nagesh Karale Murder: ಕರಾಳೆ ಅವರು ಖೇಡ್ ತಾಲೂಕಿನಲ್ಲಿ ಕುಸ್ತಿ ಅಕಾಡೆಮಿ ನಡೆಸುತ್ತಿದ್ದರು. ಈ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕೊಲೆಗಾರರನ್ನು ಗುರುತಿಸಲಾಗಿದೆ.

Nagesh Karale: ಪುಣೆಯಲ್ಲಿ ಕುಸ್ತಿಪಟುವಿನ ಬರ್ಬರ ಹತ್ಯೆ; ವಿಡಿಯೋದಲ್ಲಿ ಸೆರೆಯಾಯ್ತು ಕೊಲೆಯ ದೃಶ್ಯ
ನಾಗೇಶ ಕರಾಳೆ ಕೊಲೆ
Follow us on

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಕನ್ ಪ್ರದೇಶದಲ್ಲಿ ನಿನ್ನೆ ರಾತ್ರಿ 37 ವರ್ಷದ ಕುಸ್ತಿಪಟುವನ್ನು ನಾಲ್ವರು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ನಾಗೇಶ ಕರಾಳೆ ಎಂದು ಗುರುತಿಸಲಾಗಿದೆ. ಕುಸ್ತಿಪಟು ಗುರುವಾರ ರಾತ್ರಿ 10.30ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಆತನನ್ನು ಅಡ್ಡ ಹಾಕಿ ಗುಂಡು ಹಾರಿಸಲಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಭೀಕರ ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಲ್ವರು ಶೂಟರ್‌ಗಳು ವಾಹನವನ್ನು ಸುತ್ತುವರೆದು ಕುಸ್ತಿಪಟುವಿನ ಮೇಲೆ ಹೇಗೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.

“ಹಳೆಯ ಜಗಳದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಅನಿಸುತ್ತಿದೆ. ಪೊಲೀಸರು ಕೆಲವು ಸುಳಿವುಗಳ ಜಾಡು ಹಿಡಿದು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕರಾಳೆ ಅವರು ಖೇಡ್ ತಾಲೂಕಿನಲ್ಲಿ ಕುಸ್ತಿ ಅಕಾಡೆಮಿ ನಡೆಸುತ್ತಿದ್ದರು. ಈ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕೊಲೆಗಾರರನ್ನು ಗುರುತಿಸಲಾಗಿದೆ. ಅಲ್ಲಿ ಹಂತಕರ ಮುಖಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಅದರ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.

ಇದನ್ನೂ ಓದಿ: Shocking Video: ತನಗೆ ಮತ ಹಾಕದ ಯುವಕರಿಗೆ ಬಸ್ಕಿ ಹೊಡೆಸಿ, ಎಂಜಲು ನೆಕ್ಕಿಸಿದ ರಾಜಕಾರಣಿ; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್

Published On - 4:19 pm, Fri, 24 December 21