Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್

ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ರಮ್ ಪಾಟೀಲ್ ಹಿಂಬಾಗಿಲಿನಿಂದ ಹೊಟೇಲ್‌ಗೆ ನುಗ್ಗಿ ದಬ್ಬಾಳಿಕೆ ನಡೆಸಿದ್ದಾರೆ. ವಿಡಿಯೋ ತುಣುಕಿನಲ್ಲಿ ಅವನು ಕ್ಯಾಷಿಯರ್‌ನ ಶರ್ಟ್ ಅನ್ನು ಎಳೆದುಕೊಂಡು ಅನೇಕ ಬಾರಿ ಕಪಾಳಕ್ಕೆ ಹೊಡೆದಿರುವುದನ್ನು ನೋಡಬಹುದು.

Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್
ಕ್ಯಾಷಿಯರ್​ಗೆ ಹೊಡೆದ ಪೊಲೀಸ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 24, 2021 | 1:23 PM

ಮುಂಬೈ: ಕೆಲವು ಪೊಲೀಸರು ತಮ್ಮ ಅಧಿಕಾರವನ್ನು ಬಳಸಿ ಎಲ್ಲರ ಮೇಲೆ ದಬ್ಬಾಳಿಕೆ ನಡೆಸಿ ವಸೂಲಿ ಮಾಡುವ ಪದ್ಧತಿ ಹೊಸತೇನಲ್ಲ. ಮಹಾರಾಷ್ಟ್ರದ ವಕೋಲಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಗುರುವಾರ ಮಧ್ಯರಾತ್ರಿಯ ನಂತರ ಉಚಿತವಾಗಿ ಊಟ ನೀಡಲು ನಿರಾಕರಿಸಿದ ಆರೋಪದ ಮೇಲೆ ಹೋಟೆಲ್‌ನ ಕ್ಯಾಷಿಯರ್‌ನ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಎಪಿಐ ವಿಕ್ರಮ್ ಪಾಟೀಲ್ ಅವರು ವಕೋಲಾ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಸ್ವಾಗತ್ ಡೈನಿಂಗ್ ಬಾರ್‌ಗೆ ಆಲ್ಕೋಹಾಲ್ ಮತ್ತು ಆಹಾರಕ್ಕಾಗಿ ಫೋನ್ ಮಾಡಿದ್ದರು. ಆದರೆ, ಈಗಾಗಲೇ ಅಡುಗೆ ಕೋಣೆಯನ್ನು ಮುಚ್ಚಲಾಗಿದೆ ಎಂದು ಕ್ಯಾಷಿಯರ್ ರಾಮದಾಸ್ ಪಾಟೀಲ್ ತಿಳಿಸಿದ್ದರು. ಹೀಗಾಗಿ, ಮಧ್ಯರಾತ್ರಿ 12.30ಕ್ಕೆ ಮುಂಬೈನ ಬಾರ್​ಗೆ ಹೋದ ಆತ ಉಚಿತವಾಗಿ ಊಟ, ಮದ್ಯ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್​ಗೆ ಹೊಡೆದಿದ್ದಾರೆ.

ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ರಮ್ ಪಾಟೀಲ್ ಹಿಂಬಾಗಿಲಿನಿಂದ ಹೊಟೇಲ್‌ಗೆ ನುಗ್ಗಿ ದಬ್ಬಾಳಿಕೆ ನಡೆಸಿದ್ದಾರೆ. ವಿಡಿಯೋ ತುಣುಕಿನಲ್ಲಿ ಅವನು ಕ್ಯಾಷಿಯರ್‌ನ ಶರ್ಟ್ ಅನ್ನು ಎಳೆದುಕೊಂಡು ಅನೇಕ ಬಾರಿ ಕಪಾಳಕ್ಕೆ ಹೊಡೆದಿರುವುದನ್ನು ನೋಡಬಹುದು. ಆದರೆ, ಹೋಟೆಲ್ ಸಿಬ್ಬಂದಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೂ ಸುಮ್ಮನಾಗದ ಪೊಲೀಸ್ ಕ್ಯಾಷಿಯರ್ ಕೆನ್ನೆಗೆ ಮತ್ತೆ ಹೊಡೆದಿದ್ದಾರೆ.

ಘಟನೆಯ ಬಗ್ಗೆ ತಿಳಿದ ಹೋಟೆಲ್ ವ್ಯವಸ್ಥಾಪಕರು ಸಹಾಯಕ್ಕಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ರಾಮದಾಸ್ ಅವರ ದೂರಿನ ಆಧಾರದ ಮೇಲೆ ವಕೋಲಾ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 ಅಡಿಯಲ್ಲಿ ನಾನ್-ಕಾಗ್ನಿಜಬಲ್ (NC) ಅಪರಾಧವನ್ನು ದಾಖಲಿಸಿದ್ದಾರೆ. ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಪೊಲೀಸ್ ಅಧಿಕಾರಿಯ ಹಲ್ಲೆಯನ್ನು ಖಂಡಿಸಿದೆ.

AHAR ಅಧ್ಯಕ್ಷ ಶಿವಾನಂದ ಶೆಟ್ಟಿ ಮಾತನಾಡಿ, ಪೊಲೀಸ್ ಪಡೆಗೆ ಕೆಟ್ಟ ಹೆಸರು ತರುವುದು ಮಾತ್ರವಲ್ಲದೆ ವ್ಯಾಪಾರ ಸಮುದಾಯಗಳು ಕಾನೂನು ಜಾರಿ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಈ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ರೆಸ್ಟೋರೆಂಟ್ ಮಾಲೀಕರು ತಮ್ಮ ಕಾನೂನುಬದ್ಧ ವ್ಯವಹಾರವನ್ನು ಶಾಂತಿಯುತವಾಗಿ ನಡೆಸುವುದನ್ನು ಬಿಟ್ಟು ಬೇರೇನನ್ನೂ ಬಯಸುವುದಿಲ್ಲ ಮತ್ತು ಆದ್ದರಿಂದ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಪೋಲೀಸರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಬೇಕೆಂದು ನಾವು ವಿನಂತಿಸುತ್ತೇವೆ, ಇದರಲ್ಲಿ ಕಾನೂನು ಜಾರಿ ಮಾಡುವವರೇ ಕಾನೂನು ಉಲ್ಲಂಘಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​

Viral Video: ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಮುದ್ದು ಮಗಳಿಗೆ ಸ್ಮಾರ್ಟ್​ಫೋನ್ ಕೊಡಿಸಿದ ಟೀ ವ್ಯಾಪಾರಿ!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ