Viral Video: ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಮುದ್ದು ಮಗಳಿಗೆ ಸ್ಮಾರ್ಟ್‌ಫೋನ್ ಕೊಡಿಸಿದ ಟೀ ವ್ಯಾಪಾರಿ!
Trending Video: ಸೋಮವಾರ ರಾತ್ರಿ ಮೆರವಣಿಗೆ ಮೂಲಕ ಸ್ಮಾರ್ಟ್‌ಫೋನ್ ಜೊತೆಗೆ 5 ವರ್ಷದ ಮಗಳನ್ನು ಕುದುರೆ ಗಾಡಿಯಲ್ಲಿ ಕೂರಿಸಿ, ರಸ್ತೆಯ ಬೀದಿಗಳಲ್ಲಿ ಕರೆತರಲಾಯಿತು. ಆ ಸಂಭ್ರಮಾಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಪುರಿ: ಜೀವನವೆಂದರೆ ಚಿಕ್ಕ ಚಿಕ್ಕ ಖುಷಿಗಳನ್ನೂ ಸಂಭ್ರಮಿಸುವುದು. ಸಣ್ಣ ಸಣ್ಣ ಸಂಭ್ರಮಗಳಲ್ಲೇ ನೆಮ್ಮದಿ ಕಾಣುವ ಅದೆಷ್ಟೋ ಜನರಿದ್ದಾರೆ. ಮಧ್ಯಪ್ರದೇಶದಲ್ಲಿ ಟೀ ಮಾರುವವರೊಬ್ಬರು ತಮ್ಮ ಐದು ವರ್ಷದ ಮಗಳಿಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಬ್ಯಾಂಡ್ ಬಾಜಾದೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ. ಮೆರವಣಿಗೆಯಲ್ಲಿ ಮಗಳನ್ನು ಕೂರಿಸಿ ಆಕೆಗೆ ಸ್ಮಾರ್ಟ್‌ಫೋನ್ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಬ್ಯಾಂಡ್ನ ಡ್ರಮ್ ಬೀಟ್‌ಗಳಿಗೆ ಜನರೆಲ್ಲ ನೃತ್ಯ ಮಾಡುತ್ತಿದ್ದರೆ, ಅವರ ಮಗಳು ಅಲಂಕರಿಸಿದ ಕುದುರೆ ಗಾಡಿಯ ಮೇಲೆ ಕುಳಿತು ಸಂಭ್ರಮಿಸುತ್ತಿದ್ದಳು.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ತಮ್ಮ ಕುಟುಂಬದ ಮೊದಲ ಸ್ಮಾರ್ಟ್‌ಫೋನ್ ಎಂದು ಆ 5 ವರ್ಷದ ಬಾಲಕಿಯ ತಂದೆ ಮುರಾರಿ ಕುಶ್ವಾಹಾ ಹೇಳಿದ್ದಾರೆ. ಟೀ ಮಾರುವ ಅವರು 12,500 ರೂ. ನೀಡಿ ಪುಟ್ಟ ಮಗಳಿಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದ್ದಾರೆ.
ಸೋಮವಾರ ರಾತ್ರಿ ಮೆರವಣಿಗೆ ಮೂಲಕ ಸ್ಮಾರ್ಟ್‌ಫೋನ್ ಜೊತೆಗೆ ಮಗಳನ್ನು ಕುದುರೆ ಗಾಡಿಯಲ್ಲಿ ಕೂರಿಸಿ, ರಸ್ತೆಯ ಬೀದಿಗಳಲ್ಲಿ ಕರೆತರಲಾಯಿತು. ಆ ಸಂಭ್ರಮಾಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐದು ವರ್ಷದ ಬಾಲಕಿ ಮತ್ತು ಅವಳ ಸೋದರ-ಸೋದರಿಯರು ದೀಪಗಳಿಂದ ಅಲಂಕರಿಸಲ್ಪಟ್ಟ ಕುದುರೆ ಗಾಡಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಮೆರವಣಿಗೆಯಲ್ಲಿ ಜನರು ಕುಣಿಯುತ್ತಿರುವಾಗ ಧ್ವನಿವರ್ಧಕದಲ್ಲಿ ಹಾಡು ಪ್ಲೇ ಆಗುತ್ತಿತ್ತು. ಆ ಹಾಡಿಗೆ ಎಲ್ಲರೂ ಹೆಜ್ಜೆ ಹಾಕುತ್ತಿದ್ದರು.
A tea seller welcomed the new mobile in such a way that it became a topic of discussion Wow took it to the house with bandwagon and buggy after putting the mobile it is not working whether the wife brought or #Apple ONE YEAR OF SAAKK #ShehnaazGiIl #MyntraIsIndiasFashionExpert pic.twitter.com/cMiOzJkz7w
— Salma Akhtar (@Salma1Akhtar) December 21, 2021
ಚಹಾವನ್ನು ಮಾರಾಟ ಮಾಡುವ ಮೂಲಕ ಜೀವನ ನಡೆಸುವ ಮುರಾರಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮಗಳಿಗಾಗಿ ಮೊಬೈಲ್ ಖರೀದಿಸಿದ ನಂತರ, ಸ್ಮಾರ್ಟ್‌ಫೋನ್ ಅಂಗಡಿಯಿಂದ ಶಿವಪುರಿ ಪಟ್ಟಣದ ಹಳೆಯ ಪ್ರದೇಶದಲ್ಲಿರುವ ನಮ್ಮ ಮನೆಗೆ ಮಗಳನ್ನು ಕುದುರೆ ಗಾಡಿಯಲ್ಲಿ ಕೂರಿಸಿ, ಆಕೆಯ ಕೈಯಲ್ಲಿ ಮೊಬೈಲ್ ಕೊಟ್ಟು ಮೆರವಣಿಗೆಯನ್ನು ಕರೆದೊಯ್ಯಲಾಯಿತು. ಡೊಳ್ಳು ಬಾರಿಸುವ ಜತೆಗೆ ಪಟಾಕಿ ಸಿಡಿಸುವ ಜತೆಗೆ ಕುದುರೆ ಗಾಡಿಯೂ ಇತ್ತು. ಇದು ನಮ್ಮ ಕುಟುಂಬದ ಮೊದಲ ಫೋನ್ ಆದ್ದರಿಂದ ಸಂಭ್ರಮದಿಂದ ಸ್ಮಾರ್ಟ್ಫೋನನ್ನು ಬರಮಾಡಿಕೊಳ್ಳಲಾಯಿತು ಎಂದಿದ್ದಾರೆ.
ನನ್ನ ಐದು ವರ್ಷದ ಮಗಳು ತನಗಾಗಿ ಮೊಬೈಲ್ ಫೋನ್ ಕೊಡಿಸುವಂತೆ ಬಹಳ ಸಮಯದಿಂದ ಕೇಳುತ್ತಲೇ ಇದ್ದಳು. ನಿನಗೆ ನಾನು ಫೋನ್ ಖರೀದಿಸಿದಾಗ ಇಡೀ ನಗರವೇ ಅದಕ್ಕೆ ಸಾಕ್ಷಿಯಾಗಲಿದೆ ಎಂದು ನನ್ನ ಮಗಳಿಗೆ ಭರವಸೆ ನೀಡಿದ್ದೆ. ಮೊಬೈಲ್ ಖರೀದಿಸಲು ಅಗತ್ಯವಿದ್ದ ಹಣದ ಕೊರತೆ ಇದ್ದ ಕಾರಣ ಅಂಗಡಿಯವನ ಬಳಿ ಸಾಲ ಮಾಡಿ ಸ್ಮಾರ್ಟ್‌ಫೋನ್ ಖರೀದಿಸಿದ್ದೇನೆ. ನನ್ನ ಮಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಮುರಾರಿ ಹೇಳಿದ್ದಾರೆ.
ಇದನ್ನೂ ಓದಿ: Shocking News: ಪಕ್ಕದಲ್ಲಿ ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!
Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!
Published On - 4:52 pm, Wed, 22 December 21