ವಾಕ್ಸಿನೇಷನ್ ಸೆಂಟರ್ನಲ್ಲಿ ಬಾಲಕಿಯೊಂದಿಗೆ Green Eggs and Ham ಪುಸ್ತಕದ ಬಗ್ಗೆ ಚರ್ಚಿಸಿದ ಬರಾಕ್ ಒಬಾಮಾ: ವೀಡಿಯೋ ವೈರಲ್
ಕೊರೋನಾ ವಾಕ್ಸನೇಷನ್ ಸೆಂಟರ್ಗೆ ಭೇಟಿ ನೀಡಿದ ವೇಳೆ Green Eggs and Ham ಎಂಬ ಪುಸ್ತಕದ ಬಗ್ಗೆ ಪುಟ್ಟ ಹುಡುಗಿಯೊಂದಿಗೆ ಒಬಾಮಾ ಮಾತನಾಡುತ್ತಾರೆ.
ಅಮೆರಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಪುಟ್ಟ ಮಗುವಿನೊಂದಿಗೆ ನಡೆಸಿದ ಸಂಭಾಷಣೆಯೊಂದು ವೈರಲ್ ಆಗಿದೆ. ಕೊರೋನಾ ವಾಕ್ಸನೇಷನ್ ಸೆಂಟರ್ಗೆ ಭೇಟಿ ನೀಡಿದ ವೇಳೆ Green Eggs and Ham ಎಂಬ ಪುಸ್ತಕದ ಬಗ್ಗೆ ಪುಟ್ಟ ಹುಡುಗಿಯೊಂದಿಗೆ ಒಬಾಮಾ ಮಾತನಾಡುತ್ತಾರೆ. ವೀಡಿಯೋದಲ್ಲಿ ಬಾಲಕಿಯ ಬಳಿ ನಿನ್ನ ಇಷ್ಟದ ಪುಸ್ತಕ ಯಾವುದು ಎಂದು ಕೇಳಿದಾಗ ಆಕೆ Green Eggs and Ham ಎಂದು ಉತ್ತರಿಸುತ್ತಾಳೆ. ಆಗ ಒಬಾಮ ಅವರು ಕೂಡ ನನ್ನ ನೆಚ್ಚಿನ ಪುಸ್ತಕ ಕೂಡ Green Eggs and Ham ಎನ್ನುತ್ತಾರೆ.
ಪುಸ್ತಕದ ಬಗ್ಗೆ ಬಾಲಕಿ ತಿಳಿದುಕೊಂಡ ಬಗೆಯನ್ನು ನೋಡಿ ಅಚ್ಚರಿಗೊಂಡ ಒಬಾಮಾ ಅವರು ಆಕೆಯನ್ನು ಇನ್ನಷ್ಟು ಮಾತಿಗೆಳೆಯುತ್ತಾರೆ. ಆಗ ಆಕೆ ಪುಸ್ತಕದಲ್ಲಿ ಓದಿದ ಸಾಲುಗಳನ್ನು ನೆನಪಿಸಿಕೊಂಡು ಹೇಳುತ್ತಾಳೆ. ಕೆಲ ಹೊತ್ತು ಇಬ್ಬರೂ ಪುಸ್ತಕದ ಬಗ್ಗೆ ಮಾತನಾಡುವ ವೀಡಿಯೋ ವೈರಲ್ ಆಗಿದೆ. ಶ್ವೇತ ಭವನದ ಮುಖ್ಯ ವೈದ್ಯಕೀಯ ಸಲಹೆಗಾರಡಾ. ಆಂಥೋನಿ ಫೌಸಿ ಅವರೊಂದಿಗೆ ವಾಷಿಂಗ್ಟನ್ನ ಕಿಂಬಾಲ್ ಎಲಿಮೆಂಟರಿ ಸ್ಕೂಲ್ನಲ್ಲಿರುವ ಲಸಿಕಾ ಕೇಂದ್ರಕ್ಕೆ ಡಿ 23ರಂದು ಬರಾಕ್ ಒಬಾಮಾ ಭೇಟಿ ನೀಡಿದ್ದರು. ಈ ವೇಳೆ ಬಾಲಕಿಯನ್ನು ಮಾತನಾಡಿಸಿದ್ದಾರೆ.
I thought I knew Green Eggs and Ham better than most people, but at Kimball Elementary’s vaccination site earlier this month I finally met my match. pic.twitter.com/4MI1BcIsPZ
— Barack Obama (@BarackObama) December 22, 2021
ಡಾ.ಸ್ಯೂಸ್ ಎನ್ನುವವರು ಬರೆದ Green Eggs and Ham ಪುಸ್ತಕವು ಮಕ್ಕಳಿಗೆ ಸಂಬಂಧಿಸಿದ ಪುಸ್ತಕವಾಗಿದೆ. 1960ರಲ್ಲಿ ಮೊದಲ ಬಾರಿಗೆ ಪುಸ್ತಕ ಮುದ್ರಣಗೊಂಡಿತ್ತು. ಇತ್ತೀಚೆಗೆ ಅದರ ಆನಿಮೇಟೆಡ್ ಸಿರೀಸ್ ಕೂಡ ಬಿಡುಗಡೆಯಾಗಿದೆ.