ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವೃದ್ಧೆ ಸರ ಕದ್ದ ಖದೀಮರು ಮತ್ತೊಂದೆಡೆ ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿ-ಮಗಳ ಕೈ ಚಳಕ

ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವೃದ್ಧೆ ಸರ ಕದ್ದ ಖದೀಮರು ಮತ್ತೊಂದೆಡೆ ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿ-ಮಗಳ ಕೈ ಚಳಕ
ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವೃದ್ಧೆ ಸರ ಕದ್ದ ಖದೀಮರು ಮತ್ತೊಂದೆಡೆ ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿ-ಮಗಳ ಕೈ ಚಳಕ

ಪಟ್ಟಣದ ಅಕ್ಕಮ್ಮ ಎಂಬುವರು ನಿರೀಕ್ಷಣಾ ಮಂದಿರದ ಬಳಿ ಹೋಗುವಾಗ ಬೈಕ್ನಲ್ಲಿ ಬಂದ ಮೂವರು ನಾವು ಸಿಐಡಿ ಅಧಿಕಾರಿಗಳು, ಚಿನ್ನದ ಸರ ಸೆರಗಿನಲ್ಲಿ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ ತಾವೇ ಕಟ್ಟಿಕೊಡುವುದಾಗಿ ತಿಳಿಸಿ ಚಿನ್ನದ ಸರ, ಉಂಗುರಗಳನ್ನು ಪಡೆದು ಪರಾರಿಯಾಗಿದ್ದಾರೆ.

TV9kannada Web Team

| Edited By: Ayesha Banu

Dec 24, 2021 | 8:09 AM

ತುಮಕೂರು: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸರ ಕಳವು ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ರೀಕ್ಷಣಾ ಮಂದಿರದ ಬಳಿ ನಡೆದಿದೆ. ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 35 ಗ್ರಾಂ ಚಿನ್ನದ ಸರವನ್ನು ಖದೀಮರು ಕದ್ದಿದ್ದಾರೆ.

ಪಟ್ಟಣದ ಅಕ್ಕಮ್ಮ ಎಂಬುವರು ನಿರೀಕ್ಷಣಾ ಮಂದಿರದ ಬಳಿ ಹೋಗುವಾಗ ಬೈಕ್ನಲ್ಲಿ ಬಂದ ಮೂವರು ನಾವು ಸಿಐಡಿ ಅಧಿಕಾರಿಗಳು, ಚಿನ್ನದ ಸರ ಸೆರಗಿನಲ್ಲಿ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ ತಾವೇ ಕಟ್ಟಿಕೊಡುವುದಾಗಿ ತಿಳಿಸಿ ಚಿನ್ನದ ಸರ, ಉಂಗುರಗಳನ್ನು ಪಡೆದು ಪರಾರಿಯಾಗಿದ್ದಾರೆ. ಮನೆಗೆ ಹೋಗಿ ಸೆರಗಿನ ಗಂಟು ಬಿಚ್ಚಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಗಂಟಿನಲ್ಲಿ ಕಲ್ಲುಗಳು ಪತ್ತೆಯಾಗಿದ್ದು ವೃದ್ದೆ ಗಾಬರಿಯಾಗಿ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಯಿ-ಮಗಳ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆ ಸೂಪರ್ ಮಾರ್ಕೆಟ್ನಲ್ಲಿ ವಸ್ತುಗಳ ಖರೀದಿ ನೆಪದಲ್ಲಿ ತಾಯಿ-ಮಗಳು ತಮ್ಮ ಕೈ ಚಳಕ ತೋರಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳ್ಳಾರಿ ಸೂಪರ್ ಮಾರ್ಕೆಟ್ ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ತಾಯಿ ಮಗಳು ಕಳ್ಳತನ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ. ತಾಯಿ-ಮಗಳು ಅಂಗಡಿ ತುಂಬೆಲ್ಲಾ ಸುತ್ತಾಡಿ ವಸ್ತುಗಳ ಕಳ್ಳತನ ಮಾಡಿ ಬಟ್ಟೆಯೊಳಗೆ ಇಟ್ಟುಕೊಂಡು ಪರಾರಿಯಾಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಗ್ರಾ.ಪಂ. ಸದಸ್ಯೆ, ಆಕೆಯ ಪತಿ ಮೇಲೆ ಹಲ್ಲೆ ಆರೋಪ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೆಡತ್ತೂರು ಗ್ರಾ.ಪಂ.ನ ಮಾಳಗೊಂಡನಹಳ್ಳಿಯಲ್ಲಿ ಹಲ್ಲೆ ನಡೆದಿದೆ. ಗ್ರಾ.ಪಂ. ಸದಸ್ಯೆ, ಆಕೆಯ ಪತಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಭೂಮಿಕಾ, ರಮೇಶ್‌ಗೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗ್ರಾಮದಲ್ಲಿ ವಾರ್ಡ್ ಸಭೆ ನಡೆಯುವ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆ ಭೂಮಿಕಾ ಮತ್ತು ಆಕೆಯ ಪತಿ ರಮೇಶ್‌ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಗ್ರಾಮದ ವೆಂಕಟೇಶಪ್ಪ, ರಾಮಚಂದ್ರಪ್ಪ, ವೆಂಕಟರವಣಪ್ಪ, ಇಂದ್ರಕುಮಾರ್, ದುರ್ಗಪ್ಪ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಅಲ್ಲದೆ ಠಾಣೆಗೆ ದೂರು ನೀಡಿದ್ರೂ ಕ್ರಮಕೈಗೊಳ್ಳುತ್ತಿಲ್ಲವೆಂದು ಮಿಡಿಗೇಶಿ ಠಾಣೆಯ ಪೊಲೀಸರ ವಿರುದ್ಧ ಭೂಮಿಕಾ ಆರೋಪ ಮಾಡಿದ್ದಾರೆ.

ಅಂಗಡಿಯ ಬೀಗ ಮುರಿದು ವೈರ್ ಕಳವು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದ ರಂಗನಾಥಯ್ಯ ಎಂಬುವರಿಗೆ ಸೇರಿದ ಅಂಗಡಿ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ವೈರ್, ಮೋಟಾರ್ ಕಳ್ಳತನ ಮಾಡಲಾಗಿದೆ. ಮಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭರಮಸಾಗರ ಗ್ರಾಮದ ಬಳಿ ಪಲ್ಟಿಯಾಗಿ ಕೆರೆಗೆ ಬಿದ್ದ ಕಾರು ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿ ಅಪಘಾತವೊಂದು ಸಂಭವಿಸಿದೆ. ಭರಮಸಾಗರ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಕೆರೆಗೆ ಬಿದ್ದಿದ್ದು ಕಾರಿನಲ್ಲಿದ್ದ ತುಮಕೂರು ಮೂಲದ ರಮೇಶ್(40) ಮೃತಪಟ್ಟಿದ್ದಾರೆ. ಭರಮಸಾಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಇಳಿದ ದೇಹದ ತೂಕ ಹೆಚ್ಚಾಗಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಪರಿಹಾರ

Follow us on

Related Stories

Most Read Stories

Click on your DTH Provider to Add TV9 Kannada