ಕುಡಿಯುವ ನೀರಿನ ಪೈಪ್ ಅಳವಡಿಸೋ ವಿಚಾರಕ್ಕೆ ಸಹೋದರ ಸಂಬಂಧಿಗಳ ಮಧ್ಯೆ ಜಗಳ; ಕೊಲೆಯಲ್ಲಿ ಅಂತ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 28, 2024 | 6:32 PM

ಅವರಿಬ್ಬರು ಸಂಬಂಧದಲ್ಲಿ‌ ಸಹೋದರ ಸಂಬಂಧಿಗಳು. ಇಬ್ಬರು ಅಣ್ಣ-ತಮ್ಮಂದಿರ ಮಕ್ಕಳು. ಆದ್ರೆ, ಇಬ್ಬರ ಮದ್ಯೆ ಕುಡಿಯುವ ನೀರಿಗಾಗಿ ಕಿರಿಕ್ ಆಗಿದೆ. ಆರಂಭದಲ್ಲಿ ದೊಡ್ಡಪ್ಪನ ಮಗ ಅಜ್ಜಿ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇದೆ‌ ವಿಚಾರಕ್ಕೆ ಕಾಲೇಜಿಗೆ ಹೋಗಿದ್ದ ಚಿಕ್ಕಪ್ಪನ ಮಗ ನಂದ ಕುಮಾರ್ ಕೂಡ ವಾಪಸ್ ಬಂದ ಕೂಡಲೇ ಅಜ್ಜಿ ಜೊತೆ ಜಗಳ ಮಾಡಿಕೊಂಡಿದ್ದ. ಬಳಿಕ ದೊಡ್ಡಪ್ಪನ ಮಗನಿಗೆ ಕೇಳಲು ಹೋಗಿದ್ದಾನೆ. ಇದೀಗ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಕುಡಿಯುವ ನೀರಿನ ಪೈಪ್ ಅಳವಡಿಸೋ ವಿಚಾರಕ್ಕೆ ಸಹೋದರ ಸಂಬಂಧಿಗಳ ಮಧ್ಯೆ ಜಗಳ; ಕೊಲೆಯಲ್ಲಿ ಅಂತ್ಯ
ಆರೋಪಿ, ಮೃತ ಯುವಕ
Follow us on

ಯಾದಗಿರಿ, ಮಾ.28: ಜಿಲ್ಲೆಯ ಹುಣಸಗಿ(Hunasagi) ಪಟ್ಟಣದಲ್ಲಿ ನಿನ್ನೆ(ಮಾ.27) ರಾತ್ರಿ ವೇಳೆ ಸಣ್ಣ ವಿಚಾರಕ್ಕೆ ಸಹೋದರ ಸಂಬಂಧಿಗಳ ಮಧ್ಯ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ನಂದಕುಮಾರ್(21) ಮೃತ ವ್ಯಕ್ತಿ. ಕಾಲೇಜು ಮುಗಿಸಿಕೊಂಡು ಮನೆ ಬಂದಿದ್ದ ಯುವಕ ನಂದಕುಮಾರ್, ಸಹೋದರ ಸಂಬಂಧಿಯಾದ ದೊಡ್ಡಪ್ಪನ ಮಗ ಹಾಗೂ ದೊಡ್ಡಮ್ಮ ಹನುಮಂತಿ ಜೊತೆ ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದು ನಂದಕುಮಾರ್​ನನ್ನು ಹತ್ಯೆ ಮಾಡಿದ್ದಾರೆ.

ಕುಡಿಯುವ ನೀರಿನ ಪೈಪ್ ಅಳವಡಿಸೋ ವಿಚಾರಕ್ಕೆ ಗಲಾಟೆ

ನಿನ್ನೆ ಬೆಳಗ್ಗೆ ಕೊಲೆ ಮಾಡಿದ ಬಾಲಕ ಮತ್ತು ಆತನ ತಾಯಿ, ಬಾಲಕನ ಅಜ್ಜಿ ರುದ್ರಮ್ಮನ ಜೊತೆ ಕುಡಿಯುವ ನೀರಿನ ಪೈಪ್ ಅಳವಡಿಸುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಕಾಲೇಜಿಗೆ ಹೋಗಿದ್ದ ಕೊಲೆ ಆರೋಪಿ ಬಾಲಕನ ಚಿಕ್ಕಪ್ಪನ ಮಗ ನಂದಕುಮಾರ್ ಮನೆಗೆ ಬಂದಿದ್ದಾನೆ. ಮನೆಗೆ ಬಂದ ಕೂಡಲೇ ಅಜ್ಜಿ ರುದ್ರಮ್ಮನ ಜೊತೆ ಜಗಳ ಮಾಡೊಕೊಂಡಿರುವ ಮಾಹಿತಿ ತಿಳಿದಿದೆ. ತಕ್ಷಣ ದೊಡ್ಡಪ್ಪನ ಮನೆಗೆ ಹೋದ ನಂದಕುಮಾರ್, ದೊಡಮ್ಮ ಹಾಗೂ ಮಗನಿಗೆ ಅಜ್ಜಿ ಜೊತೆ ಯಾಕೆ ಜಗಳ ಮಾಡಿಕೊಂಡಿದಿರಾ, ಯಾಕೆ ಹಲ್ಲೆ ಮಾಡಿದಿರಾ ಎಂದು ಕೇಳಿದ್ದಾನೆ. ಇದೇ ವಿಚಾರಕ್ಕೆ ಜಗಳವಾಗಿದ್ದು, ಮನೆಯಲ್ಲಿದ್ದ ಬಟನ್ ಚಾಕುವಿನಿಂದ ಬಾಲಕ ಹಾಗೂ ತಾಯಿ ಸೇರಿ ನಂದಕುಮಾರ್ ಮೇಲೆ‌ ಅಟ್ಯಾಕ್ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ರೌಡಿಶೀಟರ್, ಸುಪಾರಿ ಕಿಲ್ಲರ್ ಬರ್ಬರ ಕೊಲೆ; ದುಷ್ಕರ್ಮಿಗಳು ಪರಾರಿ

ಇನ್ನು ಈ ಕೊಲೆಯಾದ ನಂದಕುಮಾರ್ ಅಜ್ಜಿಗೆ ಮೂರು ಗಂಡು ಮಕ್ಕಳಿದ್ದಾರೆ. ಮೂರು ಜನರಲ್ಲಿ ಅಜ್ಜಿ ಹಿರಿಯ ಮಗನಿಗೆ ಮೈದುನನಿಗೆ ಮಕ್ಕಳಾಗದ ಕಾರಣಕ್ಕೆ ದತ್ತು ನೀಡಿದ್ದಾಳೆ. ಇದೆ ಕಾರಣಕ್ಕೆ ಆಸ್ತಿಯನ್ನ ಸರಿಯಾಗಿ ಹಂಚಿಕೆ ಮಾಡಿಕೊಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಜೊತೆಯಾಗಿದ್ದ ಮೂವರು ಮಕ್ಕಳು, ಕಳೆದ ವರ್ಷ ಆಸ್ತಿಯಲ್ಲಿ ಪಾಲಾಗಿದ್ದಾರೆ. ಆಸ್ತಿಯಲ್ಲಿ ಪಾಲಾಗುವ ವೇಳೆ ಸಣ್ಣಪುಟ್ಟ ಜಗಳ ಆಗಿದೆ. ಇದೆ ವಿಚಾರಕ್ಕೆ ಕಳೆದ ಒಂದು ವರ್ಷದಿಂದ ಹಿರಿಯ ಮಗ ಇಬ್ಬರು ಕಿರಿಯ ಸಹೋದರರ ಜೊತೆ ಮಾತಾಡುತ್ತಿರಲಿಲ್ಲ. ಇದೆ ಕಾರಣಕ್ಕೆ ಸಣ್ಣ ದ್ವೇಷ ಕೂಡ ಇತ್ತು. ಆರೋಪಿ ಬಾಲಕನ ತಂದೆ ಅಂದರೆ, ಅಜ್ಜಿಯ ಹಿರಿಯ ಮಗ ಬೇರೆ ಮನೆ ಮಾಡಿಕೊಂಡಿದ್ದ.

ಕೊಲೆಯಾದ ನಂದಕುಮಾರ್ ತಂದೆಯ ಮನೆಯಲ್ಲಿ ಅಜ್ಜಿ ವಾಸಾವಾಗಿದ್ದಳು. ಆದ್ರೆ‌, ಕುಟುಂಬಗಳು ಜೊತೆಯಾಗಿದ್ದಾಗಲೇ ಇರುವ ಒಂದೇ ನಲ್ಲಿಯಿಂದ ನೀರು ಹಿಡಿದುಕೊಳ್ಳುತ್ತಿದ್ದರು. ನಂತರ ಬೇರೆಯಾದ ಮೇಲೂ ಕೂಡ ಅದೇ ನಲ್ಲಿಯಿಂದ ಎಲ್ಲರೂ‌ ನೀರು ಹಿಡಿದುಕೊಳ್ತಾಯಿದ್ರು. ನಿನ್ನೆ ಕೊಲೆ ಆರೋಪಿಗಳಾದ ಬಾಲಕ ಹಾಗೂ ತಾಯಿ ನೀರು ಹಿಡಿದುಕೊಂಡು ಬಳಿಕ ನಮಗೂ ಬಿಡಿ ಎಂದು ಅಜ್ಜಿ ಹೇಳಿದ್ದಾಳೆ. ಇದೆ ಕಾರಣಕ್ಕೆ ಜಗಳ ಮಾಡಿಕೊಂಡಿದ್ದು, ಅಜ್ಜಿಗೆ ಹಲ್ಲೆ ಮಾಡಿದ್ದಾರೆ. ಬಳಿಕ ಡಿಗ್ರಿ ಪರೀಕ್ಷೆ ಬರೆಯಲು ಹೋಗಿದ್ದ ನಂದಕುಮಾರ್, ಮನೆಗೆ ಬಂದು ಕೇಳಲು ಹೋಗಿದ್ದಕ್ಕೆ‌ ಜಗಳ ಆಗಿದೆ. ಜಗಳ ಈಗ ಕೊಲೆಯಲ್ಲಿ ಅಂತ್ಯವಾಗಿದೆ.

ಇನ್ನು ಸ್ಥಳಕ್ಕೆ‌ ಬಂದ ಹುಣಸಗಿ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ‌ ಕೇಸ್ ದಾಖಲಿಸಿಕೊಂಡು ಆರೋಪಿಗಳಿಬ್ಬರಿಗೆ ಅರೆಸ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕುಡಿಯುವ ನೀರು ಹಿಡಿದುಕೊಳ್ಳುವ ವಿಚಾರಕ್ಕೆ ಸಹೋದರ ಸಂಬಂಧಿಗಳ ಮದ್ಯೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಆದ್ರೆ ಕುಳಿತು ಮಾತಾಡಿಕೊಂಡು ಬಗೆ ಹರಿಸೋ ವಿಚಾರಕ್ಕೆ ಜಗಳ ಮಾಡಿಕೊಂಡು ಕೊಲೆಯಾಗಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ