ಮದ್ಯ ಸೇವಿಸಿ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ದಾಳಿ; ಕಾರು ಚಾಲಕ ಜಸ್ಟ್ ಮಿಸ್

ಮದ್ಯದ ಅಮಲಿನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಯುವಕ ಪುಂಡಾಟ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇನ್ನೊಂದೆಡೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ-ಮಗು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಈ ಬಗ್ಗೆ ಸಂಪೂರ್ಣ ವಿವಿರ ಇಲ್ಲಿದೆ.

ಮದ್ಯ ಸೇವಿಸಿ ಸಿಕ್ಕ ಸಿಕ್ಕವರ ಮೇಲೆ ಮಚ್ಚಿನಿಂದ ದಾಳಿ; ಕಾರು ಚಾಲಕ ಜಸ್ಟ್ ಮಿಸ್
ಮಾರಕಾಸ್ತ್ರದಿಂದ ದಾಳಿ ನಿಡೆಸಿದ ಯುವಕನನ್ನು ಹಿಡಿದಿರುವ ಪೊಲೀಸರು ಮತ್ತು ಸಾರ್ವಜನಿಕರು
Follow us
TV9 Web
| Updated By: Rakesh Nayak Manchi

Updated on:Feb 19, 2023 | 9:06 PM

ಯಾದಗಿರಿ: ಮದ್ಯದ ಅಮಲಿನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಯುವಕನೋರ್ವ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಘಟನೆ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯ ಸೇವಿಸಿ ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬೀಸಿದ ಯುವಕ, ನಿಂತಿದ್ದ ಕಾರಿಗೂ ಹಾನಿಗೊಳಿಸಿದ್ದಾನೆ. ಪರಿಣಾಮವಾಗಿ ಕಾರಿನ ಹಿಂದಿನ ಗಾಜು ಪುಡಿಪುಡಿಯಾಗಿದ್ದು (Man Attacks on Public), ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಲಿಸುತ್ತಿದ್ದ ಲಾರಿ ಚಾಲಕನ ಮೇಲೆ ಮಾತ್ರವಲ್ಲದೆ, ಬೈಕ್ ಸವಾರರು, ನಿಂತವರ ಮೇಲೂ ಮಚ್ಚು ಬೀಸಿದ್ದಾನೆ. ಭೀತಿಗೊಂಡ ಸಾರ್ವಜನಿಕರು ಪುಂಡಾಟ ಮೆರೆಯುತ್ತಿದ್ದ ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ತಾಯಿ-ಮಗು ಸಾವು

ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಬಿದ್ದು ತಾಯಿ-ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ. ತಾಯಿ ರೂಪಾ (32), 9 ವರ್ಷದ ಮಗು ಹೇಮಂತ್ ಸಾವನ್ನಪ್ಪಿದ ದುರ್ದೈವಿಗಳು. ಜಾನುವಾರಿಗೆ ನೀರು ಕುಡಿಸಲು ಹೋಗಿದ್ದಾಗ ಈ ದುರ್ಘಟನೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಒಬ್ಬರನ್ನು ರಕ್ಷಿಸಲು ಹೋಗಿ ಹೊಂಡಕ್ಕೆ ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳೀಯರು ಹೊಂಡದಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಸಿಕ್ಕಿಬಿದ್ದ ಪತಿ; ಪತ್ನಿಯ ಚೀರಾಟಕ್ಕೆ ಹೆದರಿ ಮನೆ ಖಾಲಿ ಮಾಡಿದ್ದ ಪತಿ ಶವವಾಗಿ ಪತ್ತೆ

ಆಕಸ್ಮಿಕ ಅಗ್ನಿ ಅವಘಡ-2 ಮೊಬೈಲ್ ಅಂಗಡಿಗಳು ಬೆಂಕಿಗಾಹುತಿ

ದೇವನಹಳ್ಳಿ: ಆಕಸ್ಮಿಕವಾಗಿ ಬೆಂಕಿ (Devanahalli Fire Accident) ತಗುಲಿ ಎರಡು ಮೊಬೈಲ್ ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆಎಸ್​​ಆರ್​ಟಿಸಿ ಕಚೇರಿಯಲ್ಲಿನ ಎರಡು ಮೊಬೈಲ್ ಅಂಗಡಿಗಳಿಗೆ ಬೆಂಕಿ ತಗುಲುತ್ತಿದ್ದಂತೆ ಭೀತಿಗೊಂಡ ಜನರು ಅಂಗಡಿಗಳಿಂದ ಹೊರಬಂದಿದ್ದಾರೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ಟ್ಯಾಂಕರ್ ಮೂಲಕ ಬೆಂಕಿ ನಂದಿಸಿದ್ದಾರೆ. ಅದಾಗ್ಯೂ, ಅಂಗಡಿಯಲ್ಲಿದ್ದ ಮೊಬೈಲ್​ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Sun, 19 February 23