Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhiwani Killings: ಪೊಲೀಸರು ಹೊಟ್ಟೆಗೆ ಒದ್ದರು, ಮಗು ಸತ್ತೋಯ್ತು: ಆರೋಪಿಯ ಪತ್ನಿ ಆರೋಪ

Muslims Abducted and Killed by Cow Vigilantes: ರಾಜಸ್ಥಾನದ ಇಬ್ಬರು ಮುಸ್ಲಿಮ್ ವ್ಯಕ್ತಿಗಳನ್ನು ಅಪಹರಿಸಿ ಕೊಲೆ ಎಸಗಿದ ಆರೋಪಿಯ ಕುಟುಂಬದವರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಆರೋಪಿಯ ತುಂಬುಗರ್ಭಿಣಿಯ ಹೊಟ್ಟೆಗೆ ಒದ್ದು ಮಗುವನ್ನು ಸಾಯಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

Bhiwani Killings: ಪೊಲೀಸರು ಹೊಟ್ಟೆಗೆ ಒದ್ದರು, ಮಗು ಸತ್ತೋಯ್ತು: ಆರೋಪಿಯ ಪತ್ನಿ ಆರೋಪ
ಭಿವಾನಿ ಹತ್ಯೆ ಪ್ರಕರಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 19, 2023 | 6:29 PM

ಜೈಪುರ್: ಗೋವುಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಂದು ಇಬ್ಬರು ಮುಸ್ಲಿಮರನ್ನು ಅಪಹರಿಸಿ ಕೊಂದ ಆರೋಪ (Abduction and Murder) ಎದುರಿಸುತ್ತಿರುವ ಹರಿಯಾಣದ ಶ್ರೀಕಾಂತ್ ಪಂಡಿತ್ ಅವರ ಕುಟುಂಬಸದಸ್ಯರು ಇದೀಗ ರಾಜಸ್ಥಾನ ಪೊಲೀಸರ ವಿರುದ್ಧ ದೌರ್ಜನ್ಯದ ಪ್ರತ್ಯಾರೋಪ ಮಾಡಿದ್ದಾರೆ. ಈ ಸಂಬಂಧ ಹರಿಯಾಣದ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ. ರಾಜಸ್ಥಾನ ಪೊಲೀಸರು ತಮ್ಮ ಮನೆಗೆ ನುಗ್ಗಿ ಥಳಿಸಿದರು. ಶ್ರೀಕಾಂತ್​ರ ಪತ್ನಿ ತುಂಬುಗರ್ಭಿಣಿ ಎಂದೂ ನೋಡದೇ ಹೊಟ್ಟೆಗೆ ಒದ್ದರು. ಪರಿಣಾಮವಾಗಿ ಹೊಟ್ಟೆಯ ಒಳಗಿದ್ದ ಮಗು ಸತ್ತುಹೋಯಿತು ಎಂದು ಪಂಡಿತ್​ನ ತಾಯಿ ದುಲಾರಿ ದೇವಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಹಾಗೆಯೇ, ಪೊಲೀಸರು ತನ್ನ ಮಗ ಶ್ರೀಕಾಂತ್ ಪಂಡಿತ್ ಜೊತೆಗೆ ಇತರ ಇಬ್ಬರು ಮಕ್ಕಳನ್ನೂ ಬಲವಂತವಾಗಿ ಕರೆದೊಯ್ದರು ಎಂದೂ ದೂರಿದ್ದಾರೆ.

ದುಲಾರಿ ದೇವಿ ನೀಡಿದ ದೂರನ್ನು ಸ್ವೀಕರಿಸಿರುವ ಹರಿಯಾಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶ್ರೀಕಾಂತ್ ಪಂಡಿತ್ ಕುಟುಂಬದವರು ಹರಿಯಾಣದ ಭಿವಾನಿಯವರು. ಗೋ ರಕ್ಷಣಾ ತಂಡವೊಂದರ ಸದಸ್ಯರು. ರಾಜಸ್ಥಾನದ ಭರತ್​ಪುರ್ ನಗರದ ನಾಸಿರ್ (25) ಮತ್ತು ಜುನೇದ್ (35) ಎಂಬಿಬ್ಬರನ್ನು ಶ್ರೀಕಾಂತ್ ಪಂಡಿತ್ ಹಾಗೂ ಇತರ ಕೆಲವರು ಅಪಹರಿಸಿದ ಆರೋಪ ಇದೆ. ಈ ಇಬ್ಬರು ಮುಸ್ಲಿಮ್ ವ್ಯಕ್ತಿಗಳ ಮೃತದೇಹವು ಸುಟ್ಟ ಕಾರೊಂದರಲ್ಲಿ ಪತ್ತೆಯಾಗಿದ್ದವು. ಶ್ರೀಕಾಂತ್ ಮತ್ತಿತರ ಮೇಲೆ ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಹರಿಯಾಣದ ಭಿವಾನಿಯಲ್ಲಿರುವ ಶ್ರೀಕಾಂತ್​ನ ಮನೆ ಮೇಲೆ ಪೊಲೀಸರು ದಾಳಿ ಮಾಡಿದರೆನ್ನಲಾಗಿದೆ.

ಗರ್ಭಿಣಿಯ ಹೊಟ್ಟೆಯ ಮೇಲೆ ಹೊಡೆದದ್ದು, ಇತರ ಇಬ್ಬರು ಮಕ್ಕಳನ್ನು ಬಲವಂತವಾಗಿ ಕರೆದೊಯ್ದರೆಂದು ದುಲಾರಿ ದೇವಿ ಮಾಡಿರುವ ಆರೋಪವನ್ನು ರಾಜಸ್ಥಾನ ಪೊಲೀಸರು ತಳ್ಳಿಹಾಕಿದ್ದಾರೆ. ಆರೋಪಿಯ ಕುಟುಂಬದವರು ಮಾಡುವ ಆರೋಪದಲ್ಲಿ ಏನು ಹುರುಳಿರುತ್ತದೆ? ನಾವು ಒದ್ದು ಮಗು ಸಾಯಿಸಿದ್ದರೆ ಅದನ್ನು ಪೋಸ್ಟ್ ಮಾರ್ಟಂಗೆ ಕೊಡಬಹುದಿತ್ತು. ಅವರು ಯಾವುದೇ ಶವಪರೀಕ್ಷೆಗೆ ಕೊಡದೇ ಮಗುವಿನ ಅಂತ್ಯಕ್ರಿಯೆ ನಡೆಸಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಅವರು ಸುಳ್ಳು ಹೇಳುತ್ತಿದ್ದಾರೆಂದು ಎಂದು ರಾಜಸ್ಥಾನ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಶಿವರಾತ್ರಿ ವೇಳೆ ಜಾತಿ ಸಂಘರ್ಷ, 14 ಮಂದಿಗೆ ಗಾಯ

ಹಾಗೆಯೇ, ದುಲಾರಿ ದೇವಿಯ ಇತರ ಇಬ್ಬರು ಮಕ್ಕಳನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂಬ ಆರೋಪವನ್ನೂ ಅವರು ನಿರಾಕರಿಸಿದ್ದಾರೆ. ತಾವು ಶ್ರೀಕಾಂತ್ ಪಂಡಿತ್​ನನ್ನು ಹುಡುಕಿಕೊಂಡು ಮನೆಗೆ ಹೋಗಿದ್ದು ನಿಜ. ಆಗ ಆತ ಅಲ್ಲಿ ಇರಲಿಲ್ಲ. ಅವನ ಸಹೋದರರನ್ನು ವಿಚಾರಿಸಿ ಹೊರಟುಬಂದೆವು ಅಷ್ಟೇ ಎಂದಿದ್ದಾರೆ.

ಇದೇ ವೇಳೆ, ಮೃತಪಟ್ಟಿರುವ ನಾಸಿರ್ ಮತ್ತು ಜುನೇದ್ ಇಬ್ಬರೂ ಕೂಡ ಈ ಹಿಂದೆ ಕೆಲವಾರು ಬಾರಿ ಗೋ ಕಳ್ಳಸಾಗಾಣಿಕೆ ಕೃತ್ಯಗಳಲ್ಲಿ ಸಿಕ್ಕಿಬಿದ್ದು ಪ್ರಕರಣ ಎದುರಿಸುತ್ತಿದ್ದವರೆಂಬ ಮಾಹಿತಿ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Sun, 19 February 23

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !