ಮಧ್ಯಪ್ರದೇಶ: ಶಿವರಾತ್ರಿ ವೇಳೆ ಜಾತಿ ಸಂಘರ್ಷ, 14 ಮಂದಿಗೆ ಗಾಯ

ದಲಿತ ಸಮುದಾಯದ ಪ್ರೇಮಲಾಲ್ ಅವರು ಸಲ್ಲಿಸಿದ ದೂರಿನ ಪ್ರಕಾರ, ಗುರ್ಜರ್ ಸಮುದಾಯದ ಭಯ್ಯಾ ಲಾಲ್ ಪಟೇಲ್ ನೇತೃತ್ವದ ಗುಂಪು ದಲಿತ ಹುಡುಗಿಯರನ್ನು ದೇವಾಲಯಕ್ಕೆ ಪ್ರವೇಶಿಸುವುದನ್ನು ತಡೆಯಿತು. 17 ಶಂಕಿತರು ಮತ್ತು 25 ಅಪರಿಚಿತ ಇತರರ ವಿರುದ್ಧ ಗಲಭೆ ಮತ್ತು ಇತರ ಆರೋಪಗಳಿಗಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ

ಮಧ್ಯಪ್ರದೇಶ: ಶಿವರಾತ್ರಿ ವೇಳೆ ಜಾತಿ ಸಂಘರ್ಷ, 14 ಮಂದಿಗೆ ಗಾಯ
ಮಧ್ಯಪ್ರದೇಶದಲ್ಲಿ ಜಾತಿ ಸಂಘರ್ಷ
Follow us
ರಶ್ಮಿ ಕಲ್ಲಕಟ್ಟ
|

Updated on: Feb 19, 2023 | 4:16 PM

ಭೋಪಾಲ್: ಶಿವರಾತ್ರಿ ಹಬ್ಬದಂದು (Shivratri)  ಪ್ರಾರ್ಥನೆ ಸಲ್ಲಿಸುವ ವಿಚಾರವಾಗಿ ನೈರುತ್ಯ ಮಧ್ಯಪ್ರದೇಶದಲ್ಲಿ (Madhya Pradesh)ಶನಿವಾರ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಕನಿಷ್ಠ 14 ಜನರು ಗಾಯಗೊಂಡಿದ್ದಾರೆ. ದಲಿತ (Dalit) ಸಮುದಾಯದ ಸದಸ್ಯರು ಖಾರ್ಗೋನ್ ಜಿಲ್ಲೆಯ ದೇವಸ್ಥಾನಕ್ಕೆ ಪ್ರವೇಶಿಸದಂತೆ “ಮೇಲ್ಜಾತಿ” ಎಂದು ಕರೆಯಲ್ಪಡುವ ಕೆಲವರು ಅವರನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.ಸನವಾಡ್ ಪ್ರದೇಶದ ಛಪ್ರಾ ಗ್ರಾಮದಲ್ಲಿ ಇತರ ಮೂರು ಸಮುದಾಯಗಳ ಜನರು ನಿರ್ಮಿಸಿದ ಶಿವ ದೇವಾಲಯದಲ್ಲಿ ದಲಿತರು ಪ್ರಾರ್ಥನೆ ಸಲ್ಲಿಸುವ ಬಗ್ಗೆ ನಡೆದ ವಾದ ಘರ್ಷಣೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಭೋಪಾಲ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಎರಡೂ ಕಡೆಯವರು ಕಲ್ಲು ತೂರಾಟ ಮಾಡಿದ್ದಾರೆ. ಎರಡೂ ಕಡೆಯಿಂದ ಭಾರೀ ಕಲ್ಲು ತೂರಾಟ ನಡೆದಿದೆ. ಎರಡೂ ಕಡೆಯಿಂದ ದೂರುಗಳನ್ನು ಸ್ವೀಕರಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.

ದಲಿತ ಸಮುದಾಯದ ಪ್ರೇಮಲಾಲ್ ಅವರು ಸಲ್ಲಿಸಿದ ದೂರಿನ ಪ್ರಕಾರ, ಗುರ್ಜರ್ ಸಮುದಾಯದ ಭಯ್ಯಾ ಲಾಲ್ ಪಟೇಲ್ ನೇತೃತ್ವದ ಗುಂಪು ದಲಿತ ಹುಡುಗಿಯರನ್ನು ದೇವಾಲಯಕ್ಕೆ ಪ್ರವೇಶಿಸುವುದನ್ನು ತಡೆಯಿತು. 17 ಶಂಕಿತರು ಮತ್ತು 25 ಅಪರಿಚಿತ ಇತರರ ವಿರುದ್ಧ ಗಲಭೆ ಮತ್ತು ಇತರ ಆರೋಪಗಳಿಗಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಕಾನೂನು ಅಡಿಯಲ್ಲಿ ಪ್ರಕರಣಗಳು ಸೇರಿವೆ.

ಇದನ್ನೂ ಓದಿ: ಶಿಂಧೆ ಬಣ ಮತ್ತು ಚುನಾವಣಾ ಆಯೋಗದ ನಡುವೆ ₹2,000 ಕೋಟಿ ಡೀಲ್ ನಡೆದಿದೆ: ಸಂಜಯ್ ರಾವುತ್ ಆರೋಪ

ರವೀಂದ್ರ ರಾವ್ ಮರಾಠಾ ಅವರ ದೂರಿನ ಮೇರೆಗೆ ಪ್ರೇಮಲಾಲ್ ಮತ್ತು ಇತರ 33 ಜನರ ವಿರುದ್ಧ ಆಯುಧಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರತಿ ಪ್ರಕರಣವನ್ನೂ ದಾಖಲಿಸಲಾಗಿದೆ.  “ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿತು. ಯಾವುದೇ ಜಾತಿಯು ದೇವಾಲಯಕ್ಕೆ ಪ್ರವೇಶಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಎರಡೂ ಪಕ್ಷಗಳಿಗೆ ವಿವರಿಸಲಾಗಿದೆ” ಎಂದಿದ್ದಾರೆ ದೀಕ್ಷಿತ್.

ಕೆಲವರು ಪವಿತ್ರವೆಂದು ಪರಿಗಣಿಸಿದ ಆಲದ ಮರವನ್ನು ಕಡಿಯುವುದು ಮತ್ತು ಸಂವಿಧಾನ ಶಿಲ್ಪಿ ಮತ್ತು ದಲಿತ ಐಕಾನ್ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಯಿಂದ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಅಶಾಂತಿ ಉಂಟಾಗಿದೆ ಎಂದು ಹೇಳಿದರು.ಮರಕ್ಕೆ ಕೊಡಲಿ ಹಾಕಿದ ಆರೋಪದ ಮೇಲೆ ದಲಿತ ಸಮುದಾಯದ ಆರು ಜನರ ವಿರುದ್ಧ ಗುರ್ಜರ್‌ಗಳು ದೂರು ದಾಖಲಿಸಿದ್ದರು. ಮರ ಕಡಿಯುವ ಬಗ್ಗೆ ವಾಗ್ವಾದವಾಗಿತ್ತು. ಅನುಮತಿಯಿಲ್ಲದೆ ಮರಗಳನ್ನು ಕಡಿಯುವಂತಿಲ್ಲ ಎಂದು ವಿವರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು. ಅದೇ ದಿನ ನೆರೆಯ ಕಾಸ್ರವಾಡ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಛೋಟಿ ಕಾಸ್ರವಾಡ ಗ್ರಾಮದ ಶಿವನ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವುದನ್ನು ತಡೆದಿದ್ದಾರೆ ಎಂದು ಸಮುದಾಯದ ಸದಸ್ಯರೊಬ್ಬರು ಆರೋಪಿಸಿದ್ದಾರೆ.

ಪಿರ್ಯಾದಿದಾರರಾದ ಮಂಜು ಬಾಯಿ ಅವರ ಪ್ರಕಾರ, ಜಾತಿ ನಿಂದನೆ ಮಾತ್ರವಲ್ಲದೆ ಶಿವಲಿಂಗಕ್ಕೆ ಅಭಿಷೇಕ ಮಾಡಲು ಬಂದ ಮಹಿಳೆಯರನ್ನು ದೂರ ತಳ್ಳಲಾಗಿದೆ. ಜಾತಿ ತಾರತಮ್ಯ ಕಾನೂನಿನಡಿ ಆರೋಪ ಸೇರಿದಂತೆ ಪೊಲೀಸ್ ಪ್ರಕರಣದಲ್ಲಿ ಐವರನ್ನು ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಛೋಟಿ ಕಸ್ರವಾಡದಲ್ಲಿ ಮಹಾ ಶಿವರಾತ್ರಿಯ ಕಾರಣ ದೇವಸ್ಥಾನದಲ್ಲಿ ಜನ ಸಂದಣಿ ಜಾಸ್ತಿ ಇತ್ತು, ಈ ಕಾರಣದಿಂದಾಗಿ ಮಹಿಳೆಯರ ನಡುವೆ ಜಗಳವಾಗಿದೆ. 5 ಜನರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಹರ್ ಸಿಂಗ್ ಗಾವ್ಲಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ