ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಬಿಜೆಪಿಯಲ್ಲಿ ಲಿಂಗಾಯತ ವರ್ಸಸ್ ಲಿಂಗಾಯತ ಕದನ ನಡೆಯುತ್ತಿದ್ದರೆ ಇತ್ತ ಬಸವ ಭವನದಲ್ಲಿ ಲಿಂಗಾಯತ ಮೀಸಲಾತಿ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಜಾತಿಗಣತಿ ವೇಳೆ ಲಿಂಗಾಯತ ಎಂದೇ ಬರೆಸುವಂತೆ ನಾಯಕರು ಕರೆ ನೀಡಿದ್ದಾರೆ. ಒಟ್ಟಾರೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮೀಸಲಾತಿ ಕುರಿತ ಚರ್ಚೆಗೆ ವೇದಿಕೆಯಾಗಿತ್ತು.
ಬೆಂಗಳೂರು, ಫೆಬ್ರವರಿ 27: ಮೀಸಲಾತಿ.. ಒಳ ಮೀಸಲಾತಿ.. ಧರ್ಮ.. ಎಂಬ ಚರ್ಚೆಗಳ ಮಧ್ಯೆ ಇಂದು ನಗರದ ಬಸವ ಭವನ ಮತ್ತೆ ಮೀಸಲಾತಿ ಚರ್ಚೆಗೆ ವೇದಿಕೆಯಾಗಿತ್ತು. ವಚನ ದರ್ಶನ ಮಿತ್ಯ ವರ್ಸಸ್ ಸತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲಿಂಗಾಯತ (Lingayat) ನಾಯಕರು ಮೀಸಲಾತಿ ಬಗ್ಗೆ ಪ್ರತಿಪಾದಿಸಿದರು. ಇದೇ ಕಾರ್ಯಕರ್ಮದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಕೂಗು ಮತ್ತೆ ಮಾರ್ದನಿಸಿತು. ಲಿಂಗಾಯತ ಸ್ವತಂತ್ರ ಧರ್ಮ ಅಂತಾ ಶರಣ ಸಾಹಿತಿ ಡಾ.ಟಿ.ಆರ್.ಚಂದ್ರಶೇಖರ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos