ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸರ್ಕಾರಕ್ಕೆ ಸಂಸದ ಡಾ. ಮಂಜುನಾಥ್ ಸಲಹೆ
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಮಾವು ಹಾಗೂ ರೇಷ್ಮೆ ಬೆಳೆಗೆ ಆದ್ಯತೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಡಾ.ಮಂಜುನಾಥ್ ಸಲಹೆ ನೀಡಿದ್ದಾರೆ. ರಾಮನಗರದಲ್ಲಿ ಮಾವು ಹಾಗೂ ರೇಷ್ಮೆ ಬೆಳೆಯನ್ನು ಹೆಚ್ಚು ರೈತರು ಅವಲಂಬಿಸಿದ್ದಾರೆ. ಸಿಲ್ಕ್ ವೇಸ್ಟ್ ನಿಂದಲೂ ಹಲವು ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು. ಚೀನಾ ಇದನ್ನು ಕಡಿಮೆ ದರಕ್ಕೆ ಖರೀದಿ ಮಾಡಿ, ಸಂಸ್ಕರಣೆ ಮಾಡಿ ಮತ್ತೆ ಅಧಿಕ ದರಕ್ಕೆ ನಮಗೆ ಮಾರಾಟ ಮಾಡ್ತಿದ್ದಾರೆ. ಹಾಗಾಗಿ, ಈ ರೇಷ್ಮೆ ತ್ಯಾಜ್ಯ ಸ್ಪನ್ ಮಿಲ್ಸ್ ಘಟಕವನ್ನು ಸರ್ಕಾರವೇ ಸ್ಥಾಪನೆ ಮಾಡಬೇಕು ಎಂದು ಕಣ್ವ ಗ್ರಾಮದಲ್ಲಿ ಸಂಸದ ಡಾ. ಮಂಜುನಾಥ್ ಹೇಳಿದ್ದಾರೆ.
ರಾಮನಗರ: ಕರ್ನಾಟಕದ ಬಜೆಟ್‌ನಲ್ಲಿ ಮಾವು ಹಾಗೂ ರೇಷ್ಮೆ ಬೆಳೆಗೆ ಆದ್ಯತೆ ನೀಡಲಿ. ರಾಮನಗರ ಜಿಲ್ಲೆಯಲ್ಲಿ ಮಾವು, ರೇಷ್ಮೆಯನ್ನು ಹೆಚ್ಚು ಬೆಳೆಯುತ್ತಾರೆ. ಸಿಲ್ಕ್ ವೇಸ್ಟ್‌ನಿಂದಲೂ ಹಲವು ಉಪಯುಕ್ತ ವಸ್ತು ತಯಾರಿಸಬಹುದು. ಚೀನಾದವರು ಸಿಲ್ಕ್ ವೇಸ್ಟ್‌ನ್ನು ಕಡಿಮೆ ದರಕ್ಕೆ ಖರೀದಿಸಿ ಬಳಿಕ ಅದನ್ನು ಸಂಸ್ಕರಣೆ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ರೇಷ್ಮೆ ತ್ಯಾಜ್ಯ ಸ್ಪಿನ್ ಮಿಲ್‌ಗಳನ್ನು ಸರ್ಕಾರವೇ ಸ್ಥಾಪಿಸಲಿ. ಇದರಿಂದ ಹೆಚ್ಚು ಆದಾಯವೂ ಸಿಗುತ್ತದೆ, ರೈತರಿಗೂ ಉಪಯೋಗ ಆಗುತ್ತದೆ. ಬಜೆಟ್‌ನಲ್ಲಿ ಕುಡಿಯುವ ನೀರಿನ ಯೋಜನೆಗಳಿಗೂ ಒತ್ತು ನೀಡಬೇಕು. ಬಸ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ಕಣ್ವ ಗ್ರಾಮದಲ್ಲಿ ಬಿಜೆಪಿ ಸಂಸದ ಡಾ.ಮಂಜುನಾಥ್ ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್ಎ ಕಚೇರಿಗೆ ನುಗ್ಗಿ ಕಳ್ಳತನ

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ

ಲೋಡ್ ಶೆಡ್ಡಿಂಗ್: ವಿದ್ಯುತ್ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!

ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
