Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಶಿವರಾತ್ರಿ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ

Daily Horoscope: ಶಿವರಾತ್ರಿ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ

ವಿವೇಕ ಬಿರಾದಾರ
|

Updated on: Feb 28, 2025 | 6:55 AM

ಫೆಬ್ರವರಿ 28, ಶುಕ್ರವಾರದ ಶಿವರಾತ್ರಿ ಅಮವಾಸ್ಯೆಯಂದು 12 ರಾಶಿಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರು ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಪ್ರತಿ ರಾಶಿಯ ಶುಭ ಮತ್ತು ಅಶುಭ ಫಲಗಳು, ಸೂಕ್ತ ಬಣ್ಣ, ದಿಕ್ಕು ಮತ್ತು ಮಂತ್ರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಅಮವಾಸ್ಯೆ ತಿಥಿ, ರಾಹುಕಾಲ, ಮತ್ತು ಶುಭ ಕಾಲಗಳ ಮಾಹಿತಿಯನ್ನೂ ಸಹ ಒಳಗೊಂಡಿದೆ. ಶಿವನಿಗೆ ಅಭಿಷೇಕ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂದು ಹೇಳಲಾಗಿದೆ.

ಫೆಬ್ರವರಿ 28 ಶುಕ್ರವಾರ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲ ಪಕ್ಷ ಅಮಾವಾಸ್ಯಾ ತಿಥಿ ಶತಭಿಷ ನಕ್ಷತ್ರ ಸಿದ್ಧಿಯೋಗ ನಾಗವಾನ್ ಕರಣ ಇರುವಂತಹ ಈ ದಿನದ ರಾಹುಕಾಲ 11 ಗಂಟೆ 3 ನಿಮಿಷದಿಂದ 12 ಗಂಟೆ 32 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 12 ಗಂಟೆ 32 ನಿಮಿಷದಿಂದ 2 ಗಂಟೆ 1 ನಿಮಿಷದ ತನಕ ಸಂಕಲ್ಪ ಕಾಲ ಇರುತ್ತದೆ. ಗುರುವಾರ 8 ಗಂಟೆ 45 ನಿಮಿಷಕ್ಕೆ ಅಮಾವಾಸ್ಯೆ ಪ್ರಾರಂಭವಾಗಿ ಇಂದು 6 ಗಂಟೆ 18 ನಿಮಿಷಕ್ಕೆ ಅಮಾವಾಸ್ಯೆ ಮುಗಿಯುತ್ತದೆ. ಸೂರ್ಯೋದಯದ ಕಾಲದಲ್ಲಿ ಅಮಾವಾಸ್ಯೆ ತಿಥಿ ಇದ್ದಿದ್ದೆ ಆದರೆ ಆ ದಿನವನ್ನು ಅಮಾವಾಸ್ಯೆ ತಿಥಿಯಾಗಿದೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಹೇಳಿದ್ದಾರೆ.

ಫೆಬ್ರವರಿ 28 ಶುಕ್ರವಾರ ಶಿವರಾತ್ರಿ ಅಮವಾಸ್ಯೆ ದಿನದ ರಾಶಿಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ 12 ರಾಶಿಗಳ ಫಲಾಫಲಗಳನ್ನು ಸಹ ನೀಡಲಾಗಿದೆ, ಪ್ರತಿ ರಾಶಿಯವರಿಗೂ ಶುಭ ಹಾಗೂ ಅಶುಭ ಫಲಗಳನ್ನು ತಿಳಿಸಲಾಗಿದೆ. ಪ್ರತಿ ರಾಶಿಯವರಿಗೆ ಸೂಕ್ತವಾದ ಬಣ್ಣ, ದಿಕ್ಕು ಮತ್ತು ಮಂತ್ರಗಳನ್ನು ಸಹ ಉಲ್ಲೇಖಿಸಲಾಗಿದೆ. ಮಹಾಶಿವರಾತ್ರಿಯ ದಿನ ಶಿವನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡುವುದು ಶುಭಫಲಗಳನ್ನು ತರುತ್ತದೆ ಎಂದು ಹೇಳಲಾಗಿದೆ.