‘ನಾನೇನು ಬಿಟ್ಟಿ ಬಿದ್ದಿದೀನಾ?’; ಮತ್ತೆ ರೌದ್ರಾವತಾರ ತೋರಿಸಿದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತಾವು ಏನು ಎಂಬುದನ್ನು ತೋರಿಸಿದ್ದಾರೆ. ಆಗ ಅವರು ಅನೇಕ ಬಾರಿ ಕೋಪಗೊಂಡಿದ್ದು ಇದೆ. ಈಗ ಅವರು ಮತ್ತೆ ರೌದ್ರಾವತಾರ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತಮ್ಮ ರೌದ್ರಾವತಾರ ತೋರಿದರು. ಫಿನಾಲೆ ಸಮೀಪಿಸುತ್ತಿದ್ದಂತೆ ಅವರು ಮೃದುವಾದರು. ಅವರು ಮತ್ತೆ ಕಿರಿಕ್ ಮಾಡಿಕೊಳ್ಳಲಿಲ್ಲ. ಆದರೆ, ‘ಬಾಯ್ಸ್ vs ಗರ್ಲ್ಸ್’ ಕಾರ್ಯಕ್ರಮದಲ್ಲಿ ಅವರು ಮತ್ತೆ ಸಿಡಿದೆದ್ದಿದ್ದಾರೆ. ಕೆಣಕಿದ ರಜತ್ಗೆ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ‘ನಾನೇನು ಬಿಟ್ಟಿ ಬಿದ್ದಿದೀನಾ’ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 28, 2025 09:01 AM