Rajkumar: ರಾಜ್‌ಕುಮಾರ್ ಗಾಯನದ ಬಗ್ಗೆ ವ್ಯಂಗ್ಯವಾಡಿ ತಲೆಮರೆಸಿಕೊಂಡ ಗಾಯಕ
ಗಾಯಕ ಸಂಜಯ್ ನಾಗ್ ಅವರು ಡಾ. ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ಟೀಕಿಸಿದ್ದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಎದುರಿಸಿದ ಅವರು ತಮ್ಮ ಟ್ವಿಟರ್ ಖಾತೆಯನ್ನು ಅಳಿಸಿದ್ದಾರೆ. ರಾಜ್‌ಕುಮಾರ್ ಅವರ ಅಪಾರ ಸಾಧನೆ ಮತ್ತು ಜನಪ್ರಿಯತೆಯನ್ನು ಗಮನಿಸಿದರೆ ಈ ಟೀಕೆ ಸೂಕ್ತವಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ವರನಟ ಡಾ.ರಾಜ್‌ಕುಮಾರ್ (Rajkumar) ಕೇವಲ ಉತ್ತಮ ನಟ ಮಾತ್ರವಲ್ಲ, ಒಳ್ಳೆಯ ಗಾಯಕ ಕೂಡ ಹೌದು. ಅವರ ಧ್ವನಿಯಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಪರಭಾಷೆಯವರೂ ರಾಜ್‌ಕುಮಾರ್ ಧ್ವನಿಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಹಾಡಿನ ಬಗ್ಗೆ, ಅವರ ಕಂಠದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಕೆಲಸವನ್ನು ಯಾರೂ ಮಾಡಿರಲಿಲ್ಲ. ಆದರೆ, ಈಗ ಸಂಜಯ್ ನಾಗ್ ಹೆಸರಿನ ಗಾಯಕ ರಾಜ್‌ಕುಮಾರ್ ಬಗ್ಗೆ ಟೀಕೆ ಮಾಡಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ಎದುರಾದ ಟೀಕೆಗಳಿಂದ ಅವರು ಟ್ವಿಟರ್ ಖಾತೆಯನ್ನೇ ಅಳಿಸಿ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾ ಬಲವಾಗಿದೆ. ಕನ್ನಡ, ಕರ್ನಾಟಕ ಹಾಗೂ ನಮ್ಮ ನಾಡಿನ ಹೆಮ್ಮೆಯ ನಾಯಕರ ಬಗ್ಗೆ ಟೀಕೆ ಎದುರಾದರೆ ಯಾರೂ ಸಹಿಸುವುದಿಲ್ಲ. ಇತ್ತೀಚೆಗೆ ಟ್ವೀಟ್ ಮಾಡಿದ್ದ ಸಂಜಯ್ ನಾಗ್, ‘ರಾಜ್‌ಕುಮಾರ್ ಒಳ್ಳೆಯ ನಟ, ಆದರೆ, ಅವರ ಧ್ವನಿ ಹಾರಿಬಲ್ ಆಗಿದೆ’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.
@sanjaynagbr ಎಲ್ಲೋ ನೀನು?
X ಖಾತೆನೆ ಅಳಿಸಿ ಓಡಿಹೋಗವ್ನೆ.
ಇವ್ನೆ ಆ ಪ್ರಜೆ pic.twitter.com/bSX28v1gHf
— ಕನ್ನಡಿಗ ಪ್ರದೀಪ್ ಸಾಗರ್ ಮೈಸೂರು 💛❤️ (@IamDeepuMysuru) February 27, 2025
SPB narrates in one of his interviews, how he had to plead wid Raj to sing a song for him. Raj in his trademark humility, couldn’t accept to give voice to an accomplished singer. After a lot of persuasion,he agreed.
Music teaches humility. Y Raj receive such hatred? Is it caste? pic.twitter.com/vaLBSNb6GD
— Prashanth (@BarkurCanarese) February 25, 2025
ಇದಾದ ಬಳಿಕ ಸಂಜಯ್ ನಾಗ್ ಅವರಿಗೆ ಸಾಕಷ್ಟು ಟೀಕೆಗಳು ಕೇಳಿ ಬಂತು. ಆ ಬಳಿಕ ಟ್ವಿಟರ್ ಖಾತೆಯನ್ನೇ ಅವರು ಡಿ-ಆ್ಯಕ್ಟಿವೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ‘ಅಂಗಡಿ ಖಾಲಿ ಮಾಡಿದಾನೆ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ‘ಎಲ್ಲಿ, ಎಕ್ಸ್ (ಟ್ವಿಟರ್) ಖಾತೆಯನ್ನು ಅಳಿಸಿ ಹೋಗಿದ್ದೀಯಾ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಟ ರಾಜ್‌ಕುಮಾರ್ ಸಿನಿಮಾಗಳನ್ನು ನೋಡಿ ಕನ್ನಡ ಕಲಿತ ಐಪಿಎಸ್ ಅಧಿಕಾರಿ
ರಾಜ್‌ಕುಮಾರ್ ಕಂಠದಲ್ಲಿ ಹಲವು ಹಾಡುಗಳು ಮೂಡಿ ಬಂದಿವೆ. ‘ಯಾರೇ ಕೂಗಾಡಲಿ..’, ‘ನಾರಿಯಾ ಸೀರೆ ಕದ್ದ..’, ‘ಅಶ್ವಮೇಧ..’ ರೀತಿಯ ಹಾಡುಗಳನ್ನು ಅವರು ಹಾಡಿದ್ದಾರೆ. ‘ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು..’, ‘ಅರಿಷಿಣ ಕುಂಕುಮ..’ ಹಾಡಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇಷ್ಟು ಉತ್ತಮ ಗಾಯಕನ ಬಗ್ಗೆ ಟೀಕೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Fri, 28 February 25








