ತುಮಕೂರು: ಅಂತ್ಯ ಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್ ಬರಬೇಕೆಂದು ಡೆತ್ ನೋಟ್ ಬರೆದು ಯುವಕ‌ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Dec 08, 2022 | 10:23 AM

ಗೋಮಾಳ ಜಮೀನಿಗೆ ಸಾಗುವಳಿ ಚೀಟಿ‌ ನೀಡಲು ಸಹಾಯ ಮಾಡಿದ್ದ ಶಾಸಕ ಗುಬ್ಬಿ ಶ್ರೀನಿವಾಸ್ ನಂತರ ಅದನ್ನು ಆತನ‌ ಹೆಸರಿಗೆ ಪಹಣಿ ಬರುವಂತೆ ಮಾಡಿಸುವ ಭರವಸೆ ನೀಡಿದ್ದರು.

ತುಮಕೂರು: ಅಂತ್ಯ ಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್ ಬರಬೇಕೆಂದು ಡೆತ್ ನೋಟ್ ಬರೆದು ಯುವಕ‌ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us on

ತುಮಕೂರು: ಅಂತ್ಯ ಸಂಸ್ಕಾರಕ್ಕೆ ಶಾಸಕ ಗುಬ್ಬಿ ಶ್ರೀನಿವಾಸ್(MLA Gubbi Srinivas) ಬರಬೇಕೆಂದು ಡೆತ್ ನೋಟ್(Death Note) ಬರೆದು ಯುವಕ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಜಯ ಪ್ರಕಾಶ (39) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ದೇವರಹೊಸಹಳ್ಳಿ ಕೆರೆಗೆ ಹಾರಿ ಜಯ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಮಾಳ ಜಮೀನಿಗೆ ಸಾಗುವಳಿ ಚೀಟಿ‌ ನೀಡಲು ಸಹಾಯ ಮಾಡಿದ್ದ ಶಾಸಕ ಗುಬ್ಬಿ ಶ್ರೀನಿವಾಸ್ ನಂತರ ಅದನ್ನು ಆತನ‌ ಹೆಸರಿಗೆ ಪಹಣಿ ಬರುವಂತೆ ಮಾಡಿಸುವ ಭರವಸೆ ನೀಡಿದ್ದರು. ಆದರೆ ಪಹಣಿ ಇನ್ನೂ ಬಾರದ ಹಿನ್ನೆಲೆ ನನ್ನ ಹೆಸರಿಗೆ ಪಹಣಿ ಬರಲಿಲ್ಲ ಎಂದು ಜಯ ಪ್ರಕಾಶ್ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಸಕ ಶ್ರೀನಿವಾಸ್ ನಮ್ಮ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಡೇತ್ ನೋಟ್​ನಲ್ಲಿ ಬರೆದಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಅವತಾರ ತಾಳಿದ ಕಾಂತಾರ ದೇವಿ: ಓ ಎಂದು ಕೂಗಿ ಜನರಿಗೆ ಮೋಸ ಮಾಡುತ್ತಿದ್ದ ಮಹಿಳೆ ವಿರುದ್ಧ ದೂರು ದಾಖಲು

ಬೈಕ್​ಗೆ ಕಾರು ಡಿಕ್ಕಿ; ಅಪಘಾತದ ವಿಡಿಯೋ ವೈರಲ್

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದ ಹೊರಭಾಗದ ನಾಲ್ಕನೇ ಮೈಲಿನಲ್ಲಿ ಬೈಕ್​ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಬೆಚ್ಚಿ ಬೀಳಿಸೊ ಸಿಸಿಟಿವಿ ದೃಶ್ಯಗಳು ಸದ್ಯ ವೈರಲ್ ಆಗಿದೆ, ನಿನ್ನೆ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಬೈಕ್ ಸವಾರ ಹನುಮಂತ (30), ಮಕ್ಕಳಾದ ಯಶವಂತ (10) ಹಾಗೂ‌ ಸಂಜೀವ(5) ಗಾಯಾಳುಗಳು.

ಬೈಕ್ ನಲ್ಲಿ ಇಬ್ಬರು ಮಕ್ಕಳನ್ನ ಕರೆದುಕೊಂಡು ಹನುಮಂತ ಎಂಬುವವರು ಸಿಂಧನೂರು ಕಡೆ ಹೊರಟಿದ್ದರು. ಈ ವೇಳೆ ಕಾರ್ ನಲ್ಲಿ ಕುಷ್ಟಗಿ ಮಾರ್ಗದಿಂದ ಸಿಂಧನೂರಿಗೆ ಬರ್ತಿದ್ದ ಕಾರು ಅತೀ ವೇಗದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಕಾರು ಚಾಲಕ ಜಯದೇವ್ ತಪ್ಪಿನಿಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಘಟನೆ ಬಳಿಕ ಗಾಯಾಳುಗಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಂಧನೂರು ಟ್ರಾಫಿಕ್ ಪೊಲೀಸರು ಆರೋಪಿ ಕಾರು ಚಾಲಕನನ್ನ ಬಂಧಿಸಿದ್ದಾರೆ. ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:22 am, Thu, 8 December 22