ಬೆಂಗಳೂರಿನಲ್ಲಿ ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರ

| Updated By: guruganesh bhat

Updated on: Jul 03, 2021 | 10:41 PM

ಮೃತಪಟ್ಟ ಯುವಕ ತಮಿಳುನಾಡು ಮೂಲದವನು ಎಂಬ ಮಾಹಿತಿ ದೊರೆತಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರಗೊಂಡ ದುರ್ಘಟನೆಯೊಂದು ಬೆಂಗಳೂರಿನ ರಿಚ್​ಮಂಡ್​ ಸರ್ಕಲ್ ಬಳಿ ನಡೆದಿದೆ. ಲ್ಯಾಂಗ್​ಫೋರ್ಡ್​ ಹೌಸ್​ ಅಪಾರ್ಟ್​ಮೆಂಟ್​ನಲ್ಲಿ ಹುಟ್ಟುಹಬ್ಬ ಆಚರಣೆಗೆ ಬಲೂನ್ ಪೂರೈಕೆಗೆ ಬಂದಿದ್ದ ಯುವಕನೇ ದುರ್ಘಟನೆಯಲ್ಲಿ ಮೃತಪಟ್ಟ ಯುವಕ. ಅಪಾರ್ಟ್​ಮೆಂಟ್ ಹೊರಗೆ ಬಲೂನ್​ಗೆ ಗ್ಯಾಸ್​ ಫಿಲ್ಲಿಂಗ್ ಮಾಡುತ್ತಿದ್ದ ಯುವಕ​ ಗ್ಯಾಸ್ ಫಿಲ್ ಮಾಡುವಾಗ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮೃತಪಟ್ಟ ಯುವಕ ತಮಿಳುನಾಡು ಮೂಲದವನು ಎಂಬ ಮಾಹಿತಿ ದೊರೆತಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಎಂದು ಹೇಳಲಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಬಲೂನ್ ಗ್ಯಾಸ್ ಸಹಿತ ಬೈಕ್​ನಲ್ಲಿ ತನ್ನ ಜತೆಗಾರನೊಂದಿಗೆ ವ್ಯಕ್ತಿ ಬಂದಿದ್ದ ಎಂದು ಹೇಳಲಾಗಿದೆ. ಅಪಾರ್ಟ್‌ಮೆಂಟ್ ಆವರಣದಲ್ಲೇ ಬೈಕ್ ನಿಲ್ಲಿಸಿಕೊಂಡು ಗ್ಯಾಸ್ ಫಿಲ್ಲಿಂಗ್ ನಡೆಸುತ್ತಿದ್ದ. ಈ ವೇಳೆ ಜತೆಗಿದ್ದ ವ್ಯಕ್ತಿ ನೀರು ತರಲೆಂದು ಅಪಾರ್ಟ್‌ಮೆಂಟ್ ಒಳಗೆ ಹೋಗಿದ್ದ ಎನ್ನಲಾಗಿದೆ. ಈ ವೇಳೆ ಒಬ್ಬನೇ ಬಲೂನ್ ಫಿಲ್ ಮಾಡುವ ವೇಳೆ ದುರ್ಘಟನೆ ನಡೆದಿದೆ. ಮನೆಯ ಹೊರಗಡೆ ಬಲೂನ್ ಗ್ಯಾಸ್ ಸಿಡಿದು ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 

Karnataka Unlock 3.0 Guidelines: ಮಾಸ್ಕ್​ ಧರಿಸದಿದ್ದರೆ ನಗರಗಳಲ್ಲಿ 250 ರೂ, ಗ್ರಾಮೀಣ ಭಾಗಗಳಲ್ಲಿ 100 ರೂ.ದಂಡ

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

(Youth died in Balloon gas cylinder burst in Bengaluru)

Published On - 9:13 pm, Sat, 3 July 21