BTech in IISc: ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಸೈನ್ಸ್​​ನಿಂದ ಹೊಸ ಕೋರ್ಸ್; ಜೂನ್ 1ರಿಂದ ಅರ್ಜಿ ಆಹ್ವಾನ

| Updated By: ಆಯೇಷಾ ಬಾನು

Updated on: May 31, 2022 | 7:35 PM

IIScಯಲ್ಲಿ BTech ಗಣಿತ ಮತ್ತು ಕಂಪ್ಯೂಟಿಂಗ್‌ನ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಿದ್ದು ನಾಳೆ ಜೂನ್ 1 ರಿಂದಲೇ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತಿ ಇರುವವರು https://admissions.iisc.ac.in ವೆಬ್ ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

BTech in IISc: ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಸೈನ್ಸ್​​ನಿಂದ ಹೊಸ ಕೋರ್ಸ್; ಜೂನ್ 1ರಿಂದ ಅರ್ಜಿ ಆಹ್ವಾನ
ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್
Follow us on

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಸೈನ್ಸ್​​ (ಐಐಎಸ್ಸಿ) ಭಾರತದ ಅತ್ಯುತ್ತಮ ಯೂನಿವರ್ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಈಗ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಿದೆ. IIScಯಲ್ಲಿ BTech ಗಣಿತ ಮತ್ತು ಕಂಪ್ಯೂಟಿಂಗ್‌ನ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಿದ್ದು ನಾಳೆಯಿಂದಲೇ (ಜೂನ್ 1) ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತಿ ಇರುವವರು https://admissions.iisc.ac.in ವೆಬ್ ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹಾಗೂ ಈ ಹೊಸ ಕೋರ್ಸ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು https://iisc.ac.in/admissions/undergraduate-btech/ ವೆಬ್ ಸೈಟ್ಗೆ ಭೇಟಿ ನೀಡಬಹುದು. ಇನ್ನು BTechನಲ್ಲಿ ಅನೇಕ ಕೋರ್ಸ್ಗಳು ಲಭ್ಯವಿದೆ. ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲ, ಮಾರ್ಗದರ್ಶನ ಮತ್ತು ನಿರ್ದೇಶನದ ಕೊರತೆಯಿಂದಾಗಿ ಕಲಿಕೆಗೆ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಈ ಕೋರ್ಸ್ ಮೂಲಕ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಇದು ಸಹಾಯಕವಾಗಲಿದೆ. ಹೀಗೆ ತರಬೇತಿ ಪಡೆದ ವ್ಯಕ್ತಿಗಳ ಶೈಕ್ಷಣಿಕ ಮತ್ತು ಉದ್ಯಮ ಎರಡೂ ಕ್ಷೇತ್ರಗಳಲ್ಲೂ ಮಹತ್ವದ ಪ್ರಭಾವ ಬೀರುತ್ತದೆ.

ಇದನ್ನೂ ಓದಿ: Team India: ಮುಂದಿನ 6 ತಿಂಗಳು ಟೀಮ್ ಇಂಡಿಯಾ ಫುಲ್ ಬಿಝಿ: ಹೀಗಿದೆ ವೇಳಾಪಟ್ಟಿ

ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿನ ಈ ಹೊಸ ಪದವಿಪೂರ್ವ ಕಾರ್ಯಕ್ರಮವು ಭವಿಷ್ಯದಲ್ಲಿ ವಿದ್ಯಾರ್ಥಿಗಳನ್ನು ಉತ್ತಮರನ್ನಾಗಿಸಿ ಈ ಕ್ಷೇತ್ರದಲ್ಲಿ ಮುಂಬರುವ ಸವಾಲುಗಳನ್ನು ಎದುರಿಸುವಷ್ಟು ಬಲಿಷ್ಠರನ್ನಾಗಿಸಲಿದೆ. ಅವರು ಭವಿಷ್ಯದಲ್ಲಿ ಸಂಶೋಧನೆ, ಅಭಿವೃದ್ಧಿಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ ಮತ್ತು ಗಣಿತ, ಕಂಪ್ಯೂಟರ್ ವಿಜ್ಞಾನದ ಆಳವಾದ ಬಳಕೆಯ ಅಗತ್ಯವಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನಗಳು, ಮತ್ತು ಡೇಟಾ ಸೈನ್ಸ್ಗಳನ್ನು ತಿಳಿಯುವಲ್ಲಿ ಈ ಕೋರ್ಸ್ ಸಹಾಯ ಮಾಡಲಿದೆ.