Bangalore University: ಭಾರತದ ಟಾಪ್ 7 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ಯುನಿವರ್ಸಿಟಿಗೂ ಸ್ಥಾನ
Global Employability University Ranking: ಐಐಎಂ, ಐಐಟಿ-ಖರಗ್‌ಪುರ, ಅಮಿಟಿ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾನಿಲಯಗಳು ಕೂಡ ಟಾಪ್ 250 ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ ಶ್ರೇಯಾಂಕದಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ.
ಬೆಂಗಳೂರು: ಟೈಮ್ಸ್ ಹೈಯರ್ ಎಜುಕೇಶನ್ (THE) ಇಂದು ಬಿಡುಗಡೆ ಮಾಡಿದ ಈ ವರ್ಷದ ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ ಶ್ರೇಯಾಂಕ ಮತ್ತು ಸಮೀಕ್ಷೆಯ (GEURS) ವರದಿಯಲ್ಲಿ ಒಟ್ಟು 7 ಭಾರತೀಯ ವಿಶ್ವವಿದ್ಯಾಲಯಗಳು (Indian Universities) ಸ್ಥಾನ ಪಡೆದಿವೆ. ಈ ಬಾರಿ 3 ಭಾರತೀಯ ಸಂಸ್ಥೆಗಳು ಟಾಪ್ 100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. IIT ದೆಹಲಿ ಈ ಶ್ರೇಯಾಂಕದಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿನ IISc 58ನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈನ IIT 72ನೇ ಸ್ಥಾನದಲ್ಲಿದೆ.
ಇವುಗಳಲ್ಲದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಐಐಟಿ-ಖರಗ್‌ಪುರ, ಅಮಿಟಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳು ಕೂಡ ಟಾಪ್ 250 ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ ಶ್ರೇಯಾಂಕದಲ್ಲಿ ಸ್ಥಾನಗಳನ್ನು ಪಡೆದುಕೊಂಡಿವೆ.
ಇದನ್ನೂ ಓದಿ: Bidar: ವಿಶ್ವವಿದ್ಯಾಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿದ 13 ಸಿಬ್ಬಂದಿಯ ಉದ್ಯೋಗ ಕಾಯಂಗೊಳಿಸಲು ಹೈಕೋರ್ಟ್ ಸೂಚನೆ
ಜಾಗತಿಕವಾಗಿ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಕಳೆದ ವರ್ಷದಂತೆಯೇ ಈ ವರ್ಷದ ಶ್ರೇಯಾಂಕದಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದೆ. MIT ನಂತರ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯವು 2ನೇ ಮತ್ತು 3ನೇ ಸ್ಥಾನದಲ್ಲಿದೆ. ಈ ಮೂರು ವಿಶ್ವವಿದ್ಯಾಲಯಗಳು ಸತತ 2ನೇ ಬಾರಿಗೆ ಒಂದೇ ಕ್ರಮದಲ್ಲಿ ಅಗ್ರ 3 ಶ್ರೇಯಾಂಕಗಳನ್ನು ಪಡೆದುಕೊಂಡಿವೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಉಳಿಸಿಕೊಂಡಿವೆ. ಈ ವರ್ಷ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು 8ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಏರಿದೆ. ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯವು ಈ ವರ್ಷ 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: Kerala: ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ನೇಮಕ ರದ್ದು ಮಾಡಿ ಹೈಕೋರ್ಟ್ ಆದೇಶ
ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ 9ರಿಂದ 8ಕ್ಕೆ ಏರಿದೆ. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ 10ರಿಂದ 9ನೇ ಸ್ಥಾನಕ್ಕೆ ಜಿಗಿದಿದೆ. ಯೇಲ್ ವಿಶ್ವವಿದ್ಯಾಲಯವು 2021ರಲ್ಲಿ 7ನೇ ಶ್ರೇಯಾಂಕದಲ್ಲಿ ಇದ್ದುದು ಈ ವರ್ಷ 10ನೇ ಶ್ರೇಯಾಂಕಕ್ಕೆ ಕುಸಿತವನ್ನು ಕಂಡಿದೆ. ಈ ವರ್ಷ ಅಮೆರಿಕಾದ ಒಟ್ಟು 6 ವಿಶ್ವವಿದ್ಯಾನಿಲಯಗಳು, ಇಂಗ್ಲೆಂಡ್ನ 2, ಜಪಾನ್‌ನ 1 ಮತ್ತು ಸಿಂಗಾಪುರದ 1 ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿವೆ.