ನೀಟ್ ಪಿಜಿ 2023 ಪರೀಕ್ಷೆಯ ಮುಂದೂಡಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಟೀಸ್ ಒಂದು ಹರಿದಾಡುತ್ತಿದ್ದು. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಕಾಂಕ್ಷಿಗಳಿಗೆ ಇದು ನಕಲಿ ನೋಟೀಸ್ ಎಂದು ಎಚ್ಚರಿಕೆ ನೀಡಿದೆ. ಫೆಬ್ರವರಿ 6 ರಂದು ಈ ನಕಲಿ ನೋಟೀಸ್ ಪ್ರಕಟವಾಗಿದ್ದು ವ್ಯಾಪಕವಾಗಿ ಎಲ್ಲೆಡೆ ಹಬ್ಬಿದೆ. ಫೇಕ್ ನೋಟೀಸಿನಲ್ಲಿ ನೀಟ್ ಪಿಜಿ 2023 ಪರೀಕ್ಷೆ ಮೇ 21 , 2023 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸುತ್ತದೆ.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನಗಳ ಅನುಸಾರವಾಗಿ ಮಾರ್ಚ್ 5, 2023 ರಂದು ನಡೆಸಲಾಗುತ್ತದೆ ಎಂದ ನೀಟ್ ಪಿಜಿ 2023 ಪರೀಕ್ಷೆಯನ್ನು ಮೇ 21 ರಂದು ಬೆಳಿಗ್ಗೆ 9 ರೊಂದ 12:30 ವರೆಗೂ ಆಯೋಜಿಸಲು ನಿರ್ಧರಿಸಲಾಗಿದೆ. ನೀಟ್ ಪಿಜಿ 2023 ಅರ್ಜಿಯನ್ನು ಸಲ್ಲಿಸಲು ಆನ್‌ಲೈನ್ ಅಪ್ಲಿಕೇಶನ್ ವಿಂಡೋವನ್ನು ಜನವರಿ 31 ರಂದು ಮುಚ್ಚಲಾಗುವುದು ಎಂದು ಮೊದಲೇ ತಿಳಿಸಲಾಗಿತ್ತು ಆದರೆ ಈಗ ಮಾರ್ಚ್ 25 ರವರೆಗೆ (ರಾತ್ರಿ 11:55) ಮುಂದುವರಿಯುತ್ತದೆ.’ ಎಂದು ನಕಲಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಜೆಇಇ ಮೇನ್ 2023 ಸೆಶನ್ 1 ಫಲಿತಾಂಶ ಪ್ರಕಟ
ಈ ಎಲ್ಲ ಅಧಿಸೂಚನೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಲ್ಲಗಳೆದಿದೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಂತಹ ಫೇಕ್ ನೋಟೀಸ್ ಅನ್ನು ಯಾರು ನಂಬಬೇಡಿ ಹಾಗೂ ಎಲ್ಲೂ ಶೇರ್ ಮಾಡಬೇಡರದೆಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದೆ. ನೀಟ್ ಪಿಜಿ ಅನ್ನು ಪ್ರತಿ ವರ್ಷ ಮಾಸ್ಟರ್ ಆಫ್ ಸರ್ಜರಿ (MS), ಡಾಕ್ಟರ್ ಆಫ್ ಮೆಡಿಸಿನ್ (MD) ಮತ್ತು PG ಡಿಪ್ಲೋಮಾ ಸೀಟುಗಳಿಗಾಗಿ ನಡೆಸಲಾಗುತ್ತದೆ. ಈ ನೀಟ್ ಪಿಜಿ 2023 ಮಾರ್ಚ್ 5 ರಂದು ನಡೆಯಲಿದೆ ಹಾಗೂ ಅಪ್ಲಿಕೇಶನ್ ನೋಂದಾಯಿಸುವ ದಿನಾಂಕ ಜನವರಿ 31 ಆಗಿದ್ದು ಈಗಾಗಲೇ ಅಪ್ಲಿಕೇಶನ್ ವಿಂಡೋವನ್ನು ಮುಚ್ಚಲಾಗಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ