ಸ್ಕಾಲರ್ ಶಿಪ್‌ಗಳು ವಿವಿಧ ವಯಸ್ಸಿನ ಮತ್ತು ಅರ್ಹತೆಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಹಣಕಾಸಿನ ನೆರವಿನ ಒಂದು ರೂಪವಾಗಿದೆ. ಈ ಸ್ಕಾಲರ್ ಶಿಪ್ನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು . ದೇಶದಲ್ಲಿ ಕೊರೊನಾ ಸಮಯದಲ್ಲಿ ಅನೇಕ ವಿದ್ಯಾರ್ಥಿವೇತನಗಳು ಜಾರಿಗೆ ಬಂದವು, ಇದು ಮಕ್ಕಳು ಮತ್ತು ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿ ಈ ಸ್ಕಾಲರ್ ಶಿಪ್ ಉಪಯುಕ್ತವಾಗಿತ್ತು.
ಈ ಸ್ಕಾಲರ್‌ಶಿಪ್ ಮತ್ತು ಫೆಲೋಶಿಪ್ ಗಳು ನಿಮ್ಮ ಮುಂದಿನ ವೃತ್ತಿಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಬಹುದು. ವಿದೇಶದಲ್ಲಿ ಈ ವಿದ್ಯಾರ್ಥಿವೇತನಗಳಿಂದ ಕಡಿಮೆ ಶುಲ್ಕದಿಂದ ಉನ್ನತ ಅಧ್ಯಯನಕ್ಕಾಗಿ ವಿದೇಶಿಕ್ಕೆ ಹೋಗಲು ಸಹಾಯ ಮಾಡುತ್ತದೆ.
ಭಾರತದಲ್ಲಿ ಈ 3 ವಿದ್ಯಾರ್ಥಿವೇತನಗಳಿಗೆ ಆಗಸ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು
ದಿ ರೋಡ್ಸ್ ಸ್ಕಾಲರ್‌ಶಿಪ್ಸ್ ಫಾರ್ ಇಂಡಿಯಾ 2022-23
ರೋಡ್ಸ್ ಸ್ಕಾಲರ್ ಶಿಪ್ಸ್ ಫಾರ್ ಇಂಡಿಯಾ 2022-23 ಭಾರತೀಯ ಪದವಿಪೂರ್ವ ಪದವಿ ಹೊಂದಿರುವವರಿಗೆ ರೋಡ್ಸ್ ಟ್ರಸ್ಟ್ (ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ) ವೇತನವನ್ನು ನೀಡುವುದು. ಜಾಗತಿಕ ಮಟ್ಟದಲ್ಲಿ ಬೆಳೆಯಲು ಈ ಸ್ಕಾಲರ್ ಶಿಪ್ ಸಹಾಯ ಮಾಡುತ್ತದೆ. ಇತರರ ಸೇವೆಗೆ ಬದ್ಧವಾಗಿರುವ ಮತ್ತು ತಮ್ಮ ಭವಿಷ್ಯಕ್ಕಾಗಿ ಭರವಸೆಯನ್ನು ಮೂಡಿಸಲು ದಿ ರೋಡ್ಸ್ ಸ್ಕಾಲರ್‌ಶಿಪ್ಸ್ ಫಾರ್ ಇಂಡಿಯಾ ಉತ್ತಮವಾಗಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-08-2022
ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ, https://www.rhodeshouse.ox.ac.uk/
ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ ಪ್ರೋಗ್ರಾಮ್
Colgate-Palmolive (India) Ltd. ಇದು ಕ್ರೀಡಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ತರಬೇತಿ, ವೈದ್ಯಕೀಯ ಮತ್ತು ಇತರ ವೆಚ್ಚಗಳಿಗಾಗಿ ಹಣಕಾಸಿನ ನೆರವು ಪಡೆಯಲು ಯುವ ಕ್ರೀಡಾಪಟುಗಳನ್ನು ಆಹ್ವಾನಿಸುತ್ತದೆ. ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಈ ಸ್ಕಾಲರ್‌ಶಿಪ್ ಹೊಂದಿದೆ.
ಅರ್ಹತೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2022
ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ, www.b4s.in/it/CSP2
IET ಇಂಡಿಯಾ ಸ್ಕಾಲರ್‌ಶಿಪ್
ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (IET) ಪದವಿಪೂರ್ವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸೃಜನಶೀಲತೆ, ನಾವೀನ್ಯತೆ, ನಾಯಕತ್ವ ಮತ್ತು ಶ್ರೇಷ್ಠತೆಯನ್ನು ಪುರಸ್ಕರಿಸಲು ಈ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ವಿದ್ಯಾರ್ಥಿವೇತನವು ಭಾರತದ ಭವಿಷ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಗುರುತಿಸಲು ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ.
ಅರ್ಹತೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-08-2022
ಆನ್‌ಲೈನ್ ಅಪ್ಲಿಕೇಶನ್‌ಗಳು ಮಾತ್ರ, https://scholarships.theietevents.com/#!
Published On - 5:33 pm, Mon, 25 July 22