AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CISCE Board Class 12 Result 2022: ಐಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್

ISC ಫಲಿತಾಂಶ 2022 ಇದೀಗ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. cisce .org, results.cisce.org. ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ನೋಡಬಹುದು.

CISCE Board Class 12 Result 2022: ಐಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್
ಸಾಂಧರ್ಬಿಕ ಚಿತ್ರ Image Credit source: Hindustan Times
TV9 Web
| Updated By: ಆಯೇಷಾ ಬಾನು|

Updated on:Jul 24, 2022 | 6:08 PM

Share

ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳ ಮಂಡಳಿ(CISCE) ಇಂದು (ಜುಲೈ 24) ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್(ISC) ಅಥವಾ 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ISC ಫಲಿತಾಂಶ 2022 ಇದೀಗ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. cisce .org, results.cisce.org. ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ನೋಡಬಹುದು.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳ ಮಂಡಳಿ, ISC ಪರೀಕ್ಷೆಯನ್ನು ಏಪ್ರಿಲ್ 6 ಮತ್ತು ಜೂನ್ 13 ರ ನಡುವೆ ನಡೆಸಿತ್ತು. CISCE ಜುಲೈ 17 ರಂದು ICSE 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿತ್ತು. ಈ ವರ್ಷ ಒಟ್ಟಾರೆ ಉತ್ತೀರ್ಣ ಶೇಕಡಾ 99.38% ಆಗಿದೆ. ಎಂದಿನಂತೆ ಈ ಬಾರಿ ಬಾಲಕರಿಗಿಂತ ಬಾಲಕಿಯರು ಶೇ 99.98 ರಷ್ಟು ಉತ್ತೀರ್ಣರಾಗಿದ್ದಾರೆ. ಮತ್ತು ಬಾಲಕರು ಶೇ 99.97 ರಷ್ಟು ಉತ್ತೀರ್ಣರಾಗಿದ್ದಾರೆ.

ISC ಫಲಿತಾಂಶ 2022ರಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು

ಆನಂದಿತಾ ಮಿಶ್ರಾ, ಉಪಸಾನಾ ನಂದಿ, ಹರಿನಿ ರಾಮಮೋಹನ್, ನಮ್ಯ ಅಶೋಕ್ ನಿಚಾನಿ, ಕಾರ್ತಿಕ್ ಪ್ರಕಾಶ್, ಅನನ್ಯ ಅಗರ್ವಾಲ್, ಆಕಾಶ್ ಶ್ರೀವಾಸ್ತವ, ಆದಿತ್ಯ ವಿಷ್ಣು, ಫಹೀಮ್ ಅಹ್ಮದ್, ಸಿಮ್ರಾನ್ ಸಿಂಗ್, ಅಖತ್ ಅಗರ್ವಾಲ್, ನಿಖಿಲ್ ಕುಮಾರ್ ಪ್ರಸಾದ್, ಅಭಿಷೇಕ್ ಬಿಸ್ವಾಸ್

ಫಲಿತಾಂಶ ನೋಡುವ ವಿಧಾನ

ಮೊದಲು results.cisce.org. ಗೆ ಭೇಟಿ ನೀಡಿ ಅಲ್ಲಿ ಕಾಣಿಸುವ Results 2022 ಲಿಂಕ್​ ಮೇಲೆ ಕ್ಲಿಕ್​ ಮಾಡಿ ಬಳಿಕ ICSE ಎಂಬಲ್ಲಿ ಕ್ಲಿಕ್​ ಮಾಡಿ ಅಲ್ಲಿ ನಿಮ್ಮ ತರಗತಿ, ಐಡಿ, ಇಂಡೆಕ್ಸ್ ನಂಬರ್​ ಹಾಗೂ ಅಟೋ ಜನರೇಟೆಡ್​ ಕೋಡ್​ಗಳನ್ನು ನಮೂದಿಸಿ ಸಬ್​ಮಿಟ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ. ಬಳಿಕ ಇದರ ಪ್ರಿಂಟ್ ತೆಗೆದುಕೊಳ್ಳಬಹುದು. ಹಾಗೂ ವಿದ್ಯಾರ್ಥಿಗಳು ICSE ಫಲಿತಾಂಶವನ್ನು SMS ಮೂಲಕವೂ ಪರಿಶೀಲಿಸಬಹುದು. SMS ಮೂಲಕ CISCE 12 ನೇ ಫಲಿತಾಂಶವನ್ನು ಪಡೆಯಲು, ISC ID ಹಾಕಿ ಅದನ್ನು 09248082883ಗೆ ಕಳುಹಿಸಿದರೆ ಫಲಿತಾಂಶ ಬರುತ್ತದೆ.

Published On - 5:45 pm, Sun, 24 July 22