CBSE Class 10 Compartment result 2025: ಸಿಬಿಎಸ್‌ಇ 10th ಕಂಪಾರ್ಟ್‌ಮೆಂಟ್ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆ; ರಿಸ್ಟಲ್ ಚೆಕ್ ಮಾಡುವುದು ಹೇಗೆ?
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2025ನೇ ಸಾಲಿನ 10ನೇ ತರಗತಿಯ ಪೂರಕ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಪತ್ರ ಐಡಿಯನ್ನು ಬಳಸಿ ಆನ್‌ಲೈನ್‌ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು ಮತ್ತು ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು. SMS ಅಥವಾ IVRS ಮೂಲಕವೂ ಫಲಿತಾಂಶವನ್ನು ಪರಿಶೀಲಿಸಬಹುದು.

ಕೇಂದ್ರೀ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2025ನೇ ಸಾಲಿನ 10ನೇ ತರಗತಿಯ ಪೂರಕ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲೇ ಅಧಿಕೃತ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ (results.cbse.nic.in) ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?
- ಸಿಬಿಎಸ್‌ಇ ಕಂಪಾರ್ಟ್‌ಮೆಂಟ್ 10 ನೇ ತರಗತಿ ಫಲಿತಾಂಶ ಬಿಡುಗಡೆಯಾದ ತಕ್ಷಣ, ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ results.cbse.nic.in ಗೆ ಭೇಟಿ ನೀಡಬೇಕಾಗುತ್ತದೆ.
- ವೆಬ್‌ಸೈಟ್‌ನ ಮುಖಪುಟದಲ್ಲಿ ನೀವು ದ್ವಿತೀಯ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
- ಇದರ ನಂತರ ಲಾಗಿನ್ ಪುಟದಲ್ಲಿ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಪತ್ರ ಐಡಿಯನ್ನು ನಮೂದಿಸಿ.
- ಈಗ ಫಲಿತಾಂಶವು ಪರದೆಯ ಮೇಲೆ ತೆರೆದುಕೊಳ್ಳುತ್ತದೆ, ಅಲ್ಲಿಂದ ನೀವು ಅದನ್ನು ಪರಿಶೀಲಿಸಬಹುದು ಮತ್ತು ಅಂಕಪಟ್ಟಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಫಲಿತಾಂಶ ಬಿಡುಗಡೆಯಾದ ನಂತರವೇ ವಿದ್ಯಾರ್ಥಿಗಳು ಅಂಕಪಟ್ಟಿಯ ಡಿಜಿಟಲ್ ಪ್ರತಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಕೆಲವು ದಿನಗಳ ನಂತರ ಮೂಲ ಅಂಕಪಟ್ಟಿಯನ್ನು ನಿಮ್ಮ ಶಾಲೆಗೆ ಕಳುಹಿಸಲಾಗುತ್ತದೆ, ಅಲ್ಲಿಂದ ನೀವು ಅದನ್ನು ಪಡೆಯಬಹುದು.
ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಶಿಕ್ಷಣ ಸಂಸ್ಥೆ ಯಾವುದು ಗೊತ್ತಾ?
ಫಲಿತಾಂಶವನ್ನು ಪರಿಶೀಲಿಸಲು ಇತರ ಮಾರ್ಗಗಳು:
ಫಲಿತಾಂಶ ಬಿಡುಗಡೆಯಾದಾಗ, ವಿದ್ಯಾರ್ಥಿಗಳು ಅಥವಾ ಅವರ ಪೋಷಕರ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ, ಅವರು SMS ಮೂಲಕವೂ ಫಲಿತಾಂಶವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ನೀವು CBSE10 (ರೋಲ್ ಸಂಖ್ಯೆ, ಜನ್ಮ ದಿನಾಂಕ) (ಕೇಂದ್ರ ಸಂಖ್ಯೆ) ಬರೆದು 7738299899 ಗೆ ಕಳುಹಿಸಬೇಕು. ವಿದ್ಯಾರ್ಥಿಗಳು DDMMYYYY ಸ್ವರೂಪದಲ್ಲಿ ಜನ್ಮ ದಿನಾಂಕವನ್ನು ನಮೂದಿಸಬೇಕು. ಇದರೊಂದಿಗೆ, ವಿದ್ಯಾರ್ಥಿಗಳು ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆ (IVRS) ಮೂಲಕವೂ ಫಲಿತಾಂಶವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ನೀವು 24300699 ಗೆ ಕರೆ ಮಾಡಬೇಕಾಗುತ್ತದೆ.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




