CBSE 10 Results 2022: ಇಂದು ಸಿಬಿಎಸ್​​ಇ 10ನೇ ತರಗತಿಯ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿದೆ ಮಾಹಿತಿ

| Updated By: Digi Tech Desk

Updated on: Jul 04, 2022 | 9:14 AM

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ನೇ ಸಾಲಿನ 10ನೇ ತರಗತಿಯ ಫಲಿತಾಂಶ ಇಂದು (ಜುಲೈ 4) ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

CBSE 10 Results 2022: ಇಂದು ಸಿಬಿಎಸ್​​ಇ 10ನೇ ತರಗತಿಯ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
Image Credit source: India Today
Follow us on

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ನೇ ಸಾಲಿನ 10ನೇ ತರಗತಿಯ ಫಲಿತಾಂಶ ಇಂದು (ಜುಲೈ 4) ಬಿಡುಗಡೆಯಾಗುವ ನಿರೀಕ್ಷೆಯಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ Cbseresults.nic.in ಮೂಲಕ ಪರಿಶೀಲಿಸಬಹುದು. CBSE ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು SMS ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ CBSE 10 ನೇ ತರಗತಿಯ ಫಲಿತಾಂಶಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಮಂಡಳಿಯು CBSE 10 ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಮೇ 24, 2022 ರವರೆಗೆ ನಡೆಸಿತ್ತು.

ಫಲಿತಾಂಶ ನೋಡಲು ಇಲ್ಲಿದೆ ಹಂತ 

  1. ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ cbse.gov.in ಅಥವಾ cbseresults.nic.in
  2. ಮುಖಪುಟದಲ್ಲಿ ಲಭ್ಯವಿರುವ 10 ನೇ ತರಗತಿಯ ಲಿಂಕ್​​​ನ್ನು ಕ್ಲಿಕ್ ಮಾಡಿ
  3. ಪರೀಕ್ಷೆಯ ನೊಂದಣಿ ಸಂಖ್ಯೆ, ಶಾಲೆಯ ಕೋಡ್​​ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  4. ನಂತರ ಫಲಿತಾಂಶ ಪ್ರಕಟಗೊಳ್ಳುತ್ತದೆ.
  5. ಕೊನೆಗೆ ಫಲಿತಾಂಶ ಪ್ರತಿಯನ್ನು ಡೌನ್​ಲೋಡ್​ ಮಾಡಿ

ಡಿಜಿಲಾಕರ್​​ನಲ್ಲಿ ಫಲಿತಾಂಶ ನೋಡುವುದು ಹೇಗೆ

  1. ಅಧಿಕೃತ ವೆಬ್​​ಸೈಟ್​​ digilocker.gov.in
  2. ನಂತರ ಲಾಗಿನ್​​​ ವಿವರಗಳನ್ನು ನಮೂದಿಸಿ- ಆಧಾರ ಸಂಖ್ಯೆ ಇತ್ಯಾದಿ
  3. ಮುಖಪುಟದಲ್ಲಿ ಸಿಬಿಎಸ್​ಇ ಖಾತೆ ಮೇಲೆ ಕ್ಲಿಕ್​​ ಮಾಡಿ
  4. ನಂತರ ಸಿಬಿಎಸ್​ಇ ಟರ್ಮ್​​ 2 10ನೇ ತರಗತಿ ಫಲಿತಾಂಶದ ಮೇಲೆ ಕ್ಲಿಕ್​​ ಮಾಡಿ
  5. ಬಳಿಕ ತಾತ್ಕಾಲಿಕ ಅಂಕಪಟ್ಟಿ ಪ್ರಕಟಗೊಳ್ಳುತ್ತದೆ
  6. ಕೊನೆಗೆ ಅದನ್ನು ಡೌನ್​​ಲೋಡ್​ ಮಾಡಿ

SMS ಮುಖಾಂತರ ಫಲಿತಾಂಶ ಪಡೆಯುವ ವಿಧಾನ

  1. ನಿಮ್ಮ ಪೋನ್​​ಲ್ಲಿ SMS ಆಪ್​​ ತೆರೆಯಿರಿ
  2. ಅಲ್ಲಿ cbse <Space> ಪರೀಕ್ಷಾ ನಂದಣಿ ಸಂಖ್ಯೆ ಹಾಕಿ
  3. 7338299899 ಗೆ ಸಂದೇಶ ಕಳುಹಿಸಿ
  4. ನಿಮ್ಮ ಪೋನ್​​ಗೆ ಫಲಿತಾಂಶ ಬರುತ್ತದೆ

Published On - 8:15 pm, Sun, 3 July 22