ಉನ್ನತ ಶಿಕ್ಷಣ ಜು 10ರಿಂದ ಪ್ರವೇಶ ಆರಂಭ, ಒಂದೇ ಅರ್ಜಿ ಮೂಲಕ ಯಾವುದೇ ಕಾಲೇಜು ಆಯ್ಕೆ – ಸಚಿವ ಡಾ. ಅಶ್ವಥ್ ನಾರಾಯಣ

ಒಂದೇ ಅರ್ಜಿ ಮೂಲಕ ಯಾವುದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿ ರಿಜಿಸ್ಟರ್ ನಂಬರ್ ಹಾಕಿದ್ರೆ ಸಾಕು, ಎಲ್ಲಾ ಮಾಹಿತಿ ಸಿಗುವಂತೆ ವ್ಯವಸ್ಥೆ ಆಗಿದೆ. ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಇರುವ ಲಾಗಿನ್ ಸಿಸ್ಟಮ್ ಇದರಲ್ಲೇ ಇರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರವಾಗಿ ಎರಡನೇ ವರ್ಷಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆ ಮಾಡಲಾಗ್ತಿದೆ.

ಉನ್ನತ ಶಿಕ್ಷಣ ಜು 10ರಿಂದ ಪ್ರವೇಶ ಆರಂಭ, ಒಂದೇ ಅರ್ಜಿ ಮೂಲಕ ಯಾವುದೇ ಕಾಲೇಜು ಆಯ್ಕೆ - ಸಚಿವ ಡಾ. ಅಶ್ವಥ್ ನಾರಾಯಣ
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ
TV9kannada Web Team

| Edited By: sadhu srinath

Jul 04, 2022 | 5:25 PM

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಜುಲೈ 10ರಿಂದ ಅಡ್ಮಿಷನ್ ಆರಂಭವಾಗುತ್ತದೆ. ಕೆಲವು ಪ್ರಕ್ರಿಯೆಗಳನ್ನು ಸಂಪೂರ್ಣ ಮಾಡಬೇಕಿತ್ತು. ಹೀಗಾಗಿ ಅವನ್ನೆಲ್ಲಾ ಪೂರ್ತಿ ಮಾಡಿ ಪ್ರವೇಶ ಆರಂಭ ಮಾಡುತ್ತಿದ್ದೇವೆ. ಅನ್ ಲೈನ್ ನಲ್ಲಿ ಎಲ್ಲಾ ಮಾಹಿತಿಯನ್ನು ಹಾಕಲಾಗುವುದು ಎಂದು ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಂದೇ ಅರ್ಜಿ ಮೂಲಕ ಯಾವುದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿ ರಿಜಿಸ್ಟರ್ ನಂಬರ್ ಹಾಕಿದ್ರೆ ಸಾಕು, ಎಲ್ಲಾ ಮಾಹಿತಿ ಸಿಗುವಂತೆ ವ್ಯವಸ್ಥೆ ಆಗಿದೆ. ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಇರುವ ಲಾಗಿನ್ ಸಿಸ್ಟಮ್ ಇದರಲ್ಲೇ ಇರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರವಾಗಿ ಎರಡನೇ ವರ್ಷಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆ ಮಾಡಲಾಗ್ತಿದೆ. ಎನ್ ಇಪಿಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೊದಲನೇ ವರ್ಷ ನಡೆದಿದ್ದು, ಎರಡನೇ ವರ್ಷಕ್ಕೂ ಮುಂದುವರೆಸಲಾಗ್ತಿದೆ. ಓಪನ್ ಎಲೆಕ್ಟ್ರಿಕ್ ಸಿಸ್ಟಮ್ ಮಾಡಲಾಗಿದೆ. ಮಕ್ಕಳಲ್ಲಿ ಗುಣಮಟ್ಟದ ಕಲಿಕೆಗೆ ಸಿದ್ದತೆ ಮಾಡಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ ಮಾಹಿತಿ ನೀಡಿದರು.

ಎಲ್ಲಾ ವಿವಿಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಪರೀಕ್ಷೆ ಕೂಡಾ ಮಾಡಲಾಗುವುದು. ಯುಜಿಸಿ ನಿಮಯ ಪ್ರಕಾರ ಇಂಟರ್ ವ್ಯೂ ಮಾಡಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 491 ಕಾಲೇಜಿನಲ್ಲಿ ಈಗಿರುವ ಶುಲ್ಕ ಇರಲಿದೆ, ಹೆಚ್ಚಳ ಮಾಡಿಲ್ಲ. ಕಾಲೇಜಿನಲ್ಲಿ ಸಂಗ್ರಹ ಆಗಿರುವ ಶುಲ್ಕ ಅದೇ ಕಾಲೇಜಿನ ಅಕೌಂಟಿನಲ್ಲೇ ಉಳಿಸಿಕೊಳ್ಳಲು ಸೂಚಿಸಿದೆ. ಇದೇ ಮೊದಲ ಬಾರಿಗೆ ಸರ್ಕಾರ ಈ ರೀತಿ ಕ್ರಮ ಕೈಗೊಂಡಿದೆ.

ಸರ್ಕಾರದ ಯಾವುದೇ ವಿಚಾರ ಕಳಿಸುವಾಗ ಇ-ಆಫೀಸ್ ಮೂಲಕ ಕಳಿಸಲಾಗುವುದು. 3 ಸಾವಿರ ಫೈಲ್‌ಗಳು ಇ-ಆಫೀಸ್ ಮೂಲಕ ರವಾನಿಸಲಾಗ್ತಿದೆ. ಯಾವುದೇ ಫೈಲ್ ಮ್ಯಾನ್ಯುಯಲ್ ಆಗಿ ಹೋಗುವುದಿಲ್ಲ. ಎರಡು ವರ್ಷದಿಂದ 1,600 ಕೋಟಿ ರೂಪಾಯಿ ಸ್ಕಾಲರ್ ಶಿಪ್ ನಿಧಿ ವಿದ್ಯಾರ್ಥಿಗಳ ಅಕೌಂಟಿಗೆ ನೇರವಾಗಿ ಹೋಗಲಿದೆ. ಎಲ್ಲಾ ವಿವಿಗಳಲ್ಲಿ ವೇತನವೂ ಹೆಚ್ಆರ್ ಎಂಎಸ್ ಮೂಲಕವೇ ಹೋಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ ವಿವರಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada