CBSE Exam 2023 Guidelines: 10ನೇ, 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆ
ಸಿಬಿಎಸ್ಸಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಂದು ಪ್ರಾರಂಭವಾಯಿತು. 10 ನೇ ತರಗತಿಗೆ ಮಾರ್ಚ್ 21 ರಂದು ಪರೀಕ್ಷೆಗಳು ಮುಕ್ತಾಯಗೊಂಡರೆ, 12 ನೇ ತರಗತಿಗೆ ಏಪ್ರಿಲ್ 5 ರಂದು ಮುಕ್ತಾಯಗೊಳ್ಳಲಿದೆ. ಈ ವರ್ಷ ಸುಮಾರು 38 ಲಕ್ಷ ವಿದ್ಯಾರ್ಥಿಗಳು CBSE ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇದೀಗ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು (Board exams) ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಿಬಿಎಸ್‌ಇ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಎಲ್ಲಾ ಶಾಲೆಗಳು (Schools) ಉತ್ತರ ಪುಸ್ತಕಗಳನ್ನು ಅಂಚೆ ಸೇವೆಗಳ ಮೂಲಕ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಕಳುಹಿಸುವಾಗ ಎಲ್ಲಾ ಉತ್ತರ ಪುಸ್ತಕಗಳನ್ನು (Answer Book) ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಳಿಸತಕ್ಕದ್ದು. ಆದರೆ, ಈ ಉತ್ತರ ಪುಸ್ತಕಗಳನ್ನು ವೈಯಕ್ತಿಕವಾಗಿ ಅಥವಾ ನಗರ ಸಂಯೋಜಕರ ಸಹಾಯದಿಂದ ಪ್ರಾದೇಶಿಕ ಕಚೇರಿಗೆ ತಲುಪಿಸಿದರೆ, ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಕಿಲ್ಲ.
ಅಧಿಕೃತ ಅಧಿಸೂಚನೆ ನೋಡಲು ಈ ಲಿಂಕ್ ಬಳಸಿ
ಸಿಬಿಎಸ್‌ಇ ಅಥವಾ ಬೋರ್ಡ್ ಪರೀಕ್ಷೆಗಳ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಇತರ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ನಿಷೇಧಿಸಿದೆ. ಪರೀಕ್ಷೆಯ ಸಮಯದಲ್ಲಿ ಯಾವುದೇ ವಾಟ್ಸಾಪ್ ಸಂದೇಶವನ್ನು ಕಳುಹಿಸಬಾರದು ಎಂದು ಮಂಡಳಿಯು ಆದೇಶಿಸಿದೆ. ಬೋರ್ಡ್ ಪರೀಕ್ಷೆಯ ಕುರಿತು ಯಾವುದೇ ಅನುಮಾನವಿದ್ದಲ್ಲಿ ಸಿಬಿಎಸ್‌ಇ ನೀಡಿರುವ ಅಧಿಕೃತ ಲಿಂಕ್ ಬಳಸಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು ಎಂದು ಮಂಡಳಿಯು ಸೂಚನೆ ನೀಡಿದೆ
ಸಿಬಿಎಸ್‌ಇ ನೀಡಿರುವ ಅಧಿಕೃತ ಲಿಂಕ್: parikshasangam.cbse.gov.in
ಇದನ್ನು ಓದಿ: SSLC, PUC ಎಕ್ಸಾಂ ಕುರಿತು ಮಹತ್ವದ ಸಭೆ: ಇದೇ ಮೊದಲ ಬಾರಿಗೆ ಪಿಯುಸಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು
CBSE 10 ಮತ್ತು 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಪ್ರಾರಂಭವಾಗಿದೆ. 10 ನೇ ತರಗತಿಗೆ ಮಾರ್ಚ್ 21 ರಂದು ಮತ್ತು 12 ನೇ ತರಗತಿಗೆ ಏಪ್ರಿಲ್ 5 ರಂದು ಪರೀಕ್ಷೆಗಳು ಮುಕ್ತಾಯಗೊಳ್ಳಲಿದೆ. ಈ ವರ್ಷ ಸುಮಾರು 38 ಲಕ್ಷ ವಿದ್ಯಾರ್ಥಿಗಳು CBSE ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. 10ನೇ ತರಗತಿಗೆ ಒಟ್ಟು ನೋಂದಾಯಿತ ಅಭ್ಯರ್ಥಿಗಳ ಸಂಖ್ಯೆ 21.8 ಲಕ್ಷ, ಅದರಲ್ಲಿ 9.39 ಲಕ್ಷ ವಿದ್ಯಾರ್ಥಿನಿಯರು, 12.4 ಲಕ್ಷ ಪುರುಷ ಅಭ್ಯರ್ಥಿಗಳು ಮತ್ತು 10 ವಿದ್ಯಾರ್ಥಿಗಳು ‘ಇತರರು’ ವರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವರ್ಷದ 12 ನೇ ಬೋರ್ಡ್ ಪರೀಕ್ಷೆಗಳಿಗೆ 16.9 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ 16 ಲಕ್ಷ ವಿದ್ಯಾರ್ಥಿಗಳಲ್ಲಿ 7.4 ಲಕ್ಷ ವಿದ್ಯಾರ್ಥಿನಿಯರು, 9.51 ಲಕ್ಷ ಪುರುಷ ಅಭ್ಯರ್ಥಿಗಳು ಮತ್ತು 5 ಮಂದಿ ‘ಇತರರು’ ವರ್ಗದಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ